ಕಮಲ್ ಹಾಸನ್ 'ವಿಕ್ರಮ್' ನೋಡಿ ಹಾಡಿಹೊಗಳಿದ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್

Published : Jul 11, 2022, 04:46 PM IST
ಕಮಲ್ ಹಾಸನ್ 'ವಿಕ್ರಮ್' ನೋಡಿ ಹಾಡಿಹೊಗಳಿದ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್

ಸಾರಾಂಶ

ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ಆಗಿ ತಿಂಗಳ ಬಳಿಕ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ವೀಕ್ಷಿಸಿದ್ದಾರೆ. ಕಮಲ್ ಹಾಸನ್ ಸಿನಿಮಾ ವೀಕ್ಷಿಸಿ ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದಾರೆ. 

ಸಕಲಕಲಾವಲ್ಲಭಾ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಸಿನಿಮಾಗೆ ಎಲ್ಲಾ ಭಾಷೆಯಿಂದನೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕಮಲ್ ಹಾಸನ್ ಸಿನಿಮಾ ನೋಡಿ ಪ್ರೇಕ್ಷಕರು ಮಾತ್ರವಲ್ಲದೆ ಸಿನಿ ಗಣ್ಯರು ಸಹ ಹಾಡಿಹೊಗಳಿದ್ದಾರೆ. ವಿಕ್ರಮ್ ಚಿತ್ರಮಂದಿರಗಳಲ್ಲಿ ಧೂಳ್ ಎಬ್ಬಿಸಿದ ಬಳಿಕ ಒಟಿಟಿಯಲ್ಲೂ ಬಿಡುಗಡೆಯಾಗಿದ್ದು ಒಟಿಟಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ವಿಕ್ರಮ್ ಸಿನಿಮಾ ಡಿಸ್ನಿಪ್ಲಸ್ ಹಾಟ್ ಸ್ಟಾರ್ ನಲ್ಲಿ ಸದ್ಯ ಲಭ್ಯವಿದೆ. ಅಂದಹಾಗೆ ವಿಕ್ರಮ್ ಸಿನಿಮಾ ರಿಲೀಸ್ ಆಗಿ ತಿಂಗಳ ಬಳಿಕ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ವೀಕ್ಷಿಸಿದ್ದಾರೆ. ಕಮಲ್ ಹಾಸನ್ ಸಿನಿಮಾ ವೀಕ್ಷಿಸಿ ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದಾರೆ. 

ವಿಕ್ರಮ್ ಸಿನಿಮಾ ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿದ್ದೆ. ತಮಿಳಿನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನವ ರೆಕಾರ್ಡ್ ಮಾಡಿದೆ. ಇನ್ನು ವಿಶೇಷ ಎಂದರೆ ವಿಕ್ರಮ್ ಸಿನಿಮಾ ತಮಿಳಿನಲ್ಲಿ ಅತೀ ಹೆಚ್ಚು ಗಳಿಕ ಮಾಡಿದ್ದ ಬಾಹುಬಲಿ-2 ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ವಿಕ್ರಮ್ ಸಿನಿಮಾ ಜೂನ್ 3ರಂದು ದೇಶ-ವಿದೇಶಗಳಲ್ಲಿ ತೆರೆಗೆ ಬಂದಿತ್ತು. ತಮಿಳು ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದೀಗ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ವೀಕ್ಷಿಸಿ ಸಾಮಾಜಿಕ ಜಾಲಾತಣದಲ್ಲಿ ವಿಮರ್ಶೆ ಮಾಡಿದ್ದಾರೆ. 'ಇಡೀ ವಿಕ್ರಮ್ ತಂಡಕ್ಕೆ ಅಭಿನಂದನೆಗಳು. ಕಮಲ್ ಹಾಸನ್ ಸರ್, ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಒಟ್ಟಿಗೆ ಅದ್ಭತ ಟ್ರೀಟ್ ನೀಡಿದ್ದೀರಾ. ನಿರ್ದೇಶಕ ಲೋಕೇಶ್ ಕನಗರಾಜ್ ನಿಮ್ಮ ಕೆಲಸಕ್ಕೆ ನಾನು ಯಾವಾಗಲೂ ಅಭಿಮಾನಿ. ಅನಿರುದ್ಧ ನೀವು ರಾಕ್ ಸ್ಟಾರ್. ನಮ್ಮ ಮಾಸ್ಟರ್ ಅನ್ಬರಿವ್ ಬಗ್ಗೆ ತುಂಬಾ ಹೆಮ್ಮೆಯಾಯಿತು. ಇನ್ನು ಹೆಚ್ಚು ಯಶಸ್ಸು ಸಿಗಲಿ' ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಇನ್ನು ನಟ ಸೂರ್ಯ ಬಗ್ಗೆಯೂ ಟ್ವೀಟ್ ಮಾಡಿ ನೀವು ಬೆಂಕಿ ಎಂದು ಹೇಳಿದ್ದಾರೆ.

ಅಂದಹಾಗೆ ಈ ಮೊದಲು ಕೆಜಿಎಫ್-2 ಸಿವನಿಮಾ ರಿಲೀಸ್ ಆದಾಗ ನಟ ಕಮಲ್ ಹಾಸನ್ ಸಿನಿಮಾ ವೀಕ್ಷಿಸಿದ್ದರು. ಚೆನ್ನೈನಲ್ಲಿ ಯಶ್ ನಟನೆಯ ಕೆಜಿಎಫ್ 2 ವೀಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಕಮಲ್ ಹಾಸನ್ ಸಿನಿಮಾ ವೀಕ್ಷಿಸಿ ಪ್ರಶಾಂತ್ ನೀಲ್ ಹಾಡಿಹೊಗಳಿದ್ದಾರೆ. 
ಸಲಾರ್ ಅಪ್ ಡೇಟ್ ನೀಡಿ ಎಂದ ಫ್ಯಾನ್ಸ್ 

4 ವರ್ಷಗಳ ಅನುಪಸ್ಥಿತಿ ನಂತರ ಮತ್ತೆ ಕಮಲ್‌ ಹಾಸನ್‌ ಹವಾ; ಇನ್ನೊಂದು ದಾಖಲೆಯತ್ತ Vikram

ಪ್ರಶಾಂತ್ ನೀಲ್ ವಿಕ್ರಮ್ ಸಿನಿಮಾ ಹೊಗಳಿ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಲಾರ್ ಅಪ್ ಡೇಟ್ ನೀಡಿ ಎಂದು ಕೇಳುತ್ತಿದ್ದಾರೆ. ಯಾವುದೇ ಪೋಸ್ಟ್ ಹಂಚಿಕೊಂಡರು ಅಭಿಮಾನಿಗಳು ಕಾಮೆಂಟ್ ಸೆಕ್ಷನ್ ನಲ್ಲಿ ಸಲಾರ್ ಬಗ್ಗೆ ಅಪ್ ಡೇಟ್ ಎಂದು ಕೇಳುತ್ತಿದ್ದಾರೆ. ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಸಲಾರ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಲಾರ್ ಸಿನಿಮಾ ಸೆಟ್ಟೇರಿದಾಗಿನಿಂದ ಪ್ರಾರಂಭದಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು ಬಿಟ್ಟರೇ ಬೇರೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಹಾಗಾಗಿ ಸಲಾರ್ ಟೀಸರ್ ಅಥವಾ ಟ್ರೈಲರ್ ರಿಲೀಸ್ ಮಾಡುವಂತೆ ಅಭಿಮಾನಿಗಳು ಸಿನಿಮಾತಂಡವನ್ನು ಪೀಡಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?