ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಬರ್ತಿದೆ 'ಯಶೋದಾ'

Published : Jul 11, 2022, 01:37 PM IST
 ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಬರ್ತಿದೆ 'ಯಶೋದಾ'

ಸಾರಾಂಶ

ಟಾಲಿವುಡ್ ಸ್ಟಾರ್ ಸಮಂತಾ (Samantha) ನಟನೆಯ ಬಹುನಿರೀಕ್ಷೆಯ ಯಶೋದಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಟಾಕಿ ಭಾಗ ಮುಗಿಸಿರುವ ಸಿನಿಮಾತಂಡ ಸದ್ಯ ಹಾಡಿನ ಚಿತ್ರೀಕರಣ ಮಾತ್ರ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಸಿನಿಮಾ ಇದಾಗಿದ್ದು ನಟಿ ಸಮಂತಾ ಸಿನಿಮಾದಲ್ಲಿ ಯಶೋದಾ (Yashoda) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಲಿವುಡ್ ಸ್ಟಾರ್ ಸಮಂತಾ (Samantha) ನಟನೆಯ ಬಹುನಿರೀಕ್ಷೆಯ ಯಶೋದಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಟಾಕಿ ಭಾಗ ಮುಗಿಸಿರುವ ಸಿನಿಮಾತಂಡ ಸದ್ಯ ಹಾಡಿನ ಚಿತ್ರೀಕರಣ ಮಾತ್ರ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಸಿನಿಮಾ ಇದಾಗಿದ್ದು ನಟಿ ಸಮಂತಾ ಸಿನಿಮಾದಲ್ಲಿ ಯಶೋದಾ (Yashoda) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಡಬ್ಬಿಂಗ್‌ಗೆ ತಯಾರಿ ನಡೆಸುತ್ತಿದೆ. ಅಂದಹಾಗೆ ಯಶೋದಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಲ್ಲಿ ತೆರೆಗೆ ಬರುತ್ತಿದೆ.  

ಶ್ರೀದೇವಿ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮೂಡಿಬಂದಿದೆ. ಅಂದಹಾಗೆ ಇದು ಶ್ರೀದೇವಿ ಪ್ರೊಡಕ್ಷನ್ ಅವರ 14ನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ಹರಿ ಮತ್ತು ಹರೀಶ್‌  ನಿರ್ದೇಶನ ಮಾಡಿದರೆ. ಶಿವಲೆಂಕಾ ಕೃಷ್ಣ ಪ್ರಸಾದ್‌ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಶಿವಲೆಂಕಾ, 'ಸರಿಸುಮಾರು 100 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. ಒಂದೇ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬಜೆಟ್‌ ವಿಚಾರವಾಗಿ ಎಲ್ಲಿಯೂ ಕಾಂಪ್ರಮೈಸ್‌ ಆಗದೆ, ಕಥೆ ಬೇಡಿದಷ್ಟು ಹೂಡಿಕೆ ಮಾಡಿದ್ದೇವೆ. ಇತ್ತ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿದ್ದು, ಸಿಜೆ ಕೆಲಸಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ ಡಬ್ಬಿಂಗ್‌ ಕೆಲಸ ಶುರುವಾಗಲಿದೆ. ಇದರ ಜತೆಗೆ ಬೇರೆ ಭಾಷೆಯ ಡಬ್ಬಿಂಗ್‌ ಸಹ ಮುಗಿಸಿಕೊಳ್ಳುವ ಪ್ಲಾನ್‌ ಇದೆ. ಇದೆಲ್ಲದರ ಜತೆಗೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರ ಕೆಲಸಕ್ಕೂ ಚಾಲನೆ ನೀಡಲಿದ್ದೇವೆ' ಎಂದಿದ್ದಾರೆ. 

'ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯ ಸಿನಿಮಾ ಇದಾಗಿದ್ದು, ಜಗತ್ತಿನಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಸಮಂತಾ ಅವರು ಚಿತ್ರದಲ್ಲಿ ಟೈಟಲ್‌ ರೋಲ್‌ ಪಾತ್ರ ನಿಭಾಯಿಸಿದ್ದಾರೆ. ಅಷ್ಟೇ ಪ್ರಮಾಣದ ಸಾಹಸ ದೃಶ್ಯಗಳೂ ಈ ಚಿತ್ರದಲ್ಲಿವೆ. ಈ ನಮ್ಮ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್‌ ಮತ್ತು ಹಾಡನ್ನು ಬಿಡುಗಡೆ ಮಾಡಲಿದ್ದೇವೆ' ಎಂದಿದ್ದಾರೆ. 

ಕಾಫಿ ವಿತ್ ಕರಣ್‌ನಲ್ಲಿ ಸಮಂತಾ: KGF ಬಗ್ಗೆ ಹೇಳಿ ಕರಣ್ ಕಾಲೆಳೆದ ಸೌತ್ ಸ್ಟಾರ್

ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ 12ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ಸಮಂತಾ ಜೊತೆಗೆ ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಹಬ್ಬಿಸಿದವರಿಗೆ ಶೋಭಿತಾ ಹೀಗ್ ಹೇಳೋದಾ.!

ತಾಂತ್ರಿಕ ವರ್ಗದಲ್ಲಿ ಮಣಿಶರ್ಮಾ ಸಂಗೀತ, ಪಲ್ಗುಮ್‌ ಚಿನ್ನರಾಯನ, ಡಾ. ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್‌ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ, ಎಂ. ಸುಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಮಾರ್ತಾಂಡ್‌ ವೆಂಕಟೇಶ್‌ ಸಂಕಲನ ಮಾಡುತ್ತಿದ್ದಾರೆ. ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ ಯಶೋದ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ಸೀರಿಸ್ ಬಳಿಕ ಸಮಂತಾ ಅವರು ಮತ್ತೆ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಮತ್ತೊಮ್ಮೆ ಸಮಂತಾ ಸ್ಟಂಟ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!