
ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್‌ಗಳು (Biopic ) ರಿಲೀಸ್ ಆಗಿವೆ, ಇನ್ನು ಕೆಲವು ಬಯೋಪಿಕ್ ಗಳು ಚಿತ್ರೀಕರಣ ಹಂತದಲ್ಲಿದೆ. ಅನೇಕ ಬಯೋಪಿಕಗಳೂ ಅಭಿಮಾನಿಗಳ ಹೃದಯ ಗೆದ್ದಿವೆ, ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿವೆ. ಸಿನಿಮಾ, ಕ್ರೀಡೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರ ಬಯೋಪಿಕ್ ಗಳು ನಿರ್ಮಾಣ ಆಗಿ ರಿಲೀಸ್ ಆಗಿದೆ. ಈ ಸಾಲಿಗೆ ಮತ್ತೊಂದು ಬಯೋಪಿಕ್ ಸೇರ್ಪಡೆಯಾಗುತ್ತಿದ್ದು ಇತ್ತೀಚಿಗಷ್ಟೆ ಅನೌನ್ಸ್ ಮಾಡಲಾಗಿದೆ. ಹೌದು ಮಾಜಿ ಪ್ರಧಾನಿ, ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee)ಬಯೋಪಿಕ್ .
ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ತೆರೆಮೇಲೆ ಬರ್ತಿದೆ ಎಂದು ಘೋಷಣೆ ಆಗುತ್ತಿದ್ದಂತೆ ರಾಜಕೀಯ ಮತ್ತು ಸಿನಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ಅಟಲ್ ಬಯೋಪಿಕ್‌ಗೆ 'ಮೇ ರಹೂ ಯಾ ನಾ ರಹೂ, ಯೇ ದೇಶ್ ರೇಹನಾ ಚಾಯಿಯೇ-ಅಟಲ್' ಎಂದು ಟೈಟಲ್ ಇಡಲಾಗಿದೆ. ಈ ಸಾಲು ಅಟಲ್ ಅವರು ಹೇಳಿದ್ದ ಜನಪ್ರಿಯ ಸಾಲಾಗಿದೆ. ಸಿನಿಮಾ ಘೋಷಣೆಯಾಗುತ್ತಿದ್ದಂತೆ ಮಾಜಿ ಪ್ರಧಾನಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು.
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಬಾಲಿವುಡ್ ನ ಖ್ಯಾತ ನಟ ಪಂಕಜ್ ತ್ರಿಪಾಠಿ ಮಾಜಿ ಪ್ರಧಾನಿ ಅಟಲ್ ಬಿಹಾರಿ
ವಾಜಪೇಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಪಂಕಜ್ ತ್ರಿಪಾಠಿ ಬಾಲಿವುಡ್ ನ ಪ್ರತಿಭಾವಂತ ನಟ. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಅಟಲ್ ಆಗಿ ತೆರೆಮೇಲೆ ಬರ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಅಥವಾ ಪಂಕಜ್ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಪಂಕಜ್ ಸೂಪರ್ ಹಿಟ್ ಸಿನಿಮಾಗಳಾದ ಗ್ಯಾಂಗ್ಸ ಆಫ್ ವಾಸೇಪುರ್, ಸ್ತ್ರಿ, ಲೂಡೊ, ಗಂಜನ್ ಸಕ್ಸೇನ ಮತ್ತು ಮಿಮಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಪಂಕಜ್ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದದಾರೆ. ಪಂಕಜ್, ಅಟಲ್ ಪಾತ್ರ ಮಾಡುತ್ತಾರೆ ಎಂದರೆ ಬಯೋಪಿಕ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್ ಘೋಷಣೆ; ಮಾಜಿ ಪ್ರಧಾನಿ ಪಾತ್ರ ಮಾಡೋರ್ಯಾರು?
ಅಂದಹಾಗೆ ಅಟಲ್ ಜೀವನವನ್ನು ತೆರೆಮೇಲೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪ್ರಧಾನಿ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ್ದ ಸಂದೀಪ್ ಸಿಂಗ್ ಉಲ್ಲೇಖ್. ವಾಜಪೇಯಿ ಬಯೋಪಿಕ್ ಉಲ್ಲೇಖ್ ಎನ್ ಪಿ ಅವರ ಹೆಚ್ಚು ಮಾರಾಟವಾದ ಪುಸ್ತಕ 'ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಮತ್ತು ಪ್ಯಾರಡಾಕ್ಸ್' ಅನ್ನು ಆಧರಿಸಿದೆ.
ಮಿಥಾಲಿ ರಾಜ್ ಜೀವನಾಧಾರಿತ 'ಶಬ್ಬಾಶ್ ಮಿಥೂ' ಸಿನೆಮಾದ ಟ್ರೇಲರ್ ರಿಲೀಸ್..!
ಅಟಲ್ ಬಯೋಪಿಕ್ ಚಿತ್ರೀಕರಣ ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅವರ 99ನೇ ಹುಟ್ಟುಹಬ್ಬದ ದಿನ ಈ ಸಿನಿಮಾ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಸಿನಿಮಾ ಹೇಗೆ ಮೂಡಿಬರಲಿದೆ ತೆರೆಮೇಲೆ ಅಟಲ್ ಆಗಿ ಪಂಕಜ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.