
ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಜಗತ್ಪ್ರಸಿದ್ಧವಾದ ಹೊಂಬಾಳೆ ನಿರ್ಮಾಣ ಸಂಸ್ಥೆ ಇದೀಗ 'ಕೆಜಿಎಫ್-3' ಚಿತ್ರವನ್ನು ಘೋಷಣೆ ಮಾಡಿದೆ. ಈ ಮೂಲಕ ಕೋಟ್ಯಾಂತರ ಸಿನಿಮಾ ಪ್ರೇಮಿಗಳ ಪ್ರಶ್ನೆಗೆ ಉತ್ತರ ದೊರೆತಿದೆ. ಈ ಚಿತ್ರವು 2025ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ, 'KGF 3' ಅನೌನ್ಸ್ ಮಾಡುವ ಮೂಲಕ ಮತ್ತೆ ಕೆಜಿಎಫ್ ಚಿತ್ರವನ್ನು ತೆರೆಯ ಮೇಲೆ ನೋಡುವ ಹಲವರ ಆಸೆ ಕೈಗೂಡಿದಂತಾಗಿದೆ.
ರಾಕಿಂಗ್ ಸ್ಟಾರ್ ಯಶ್ ನಾಯಕತ್ವ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರವು ಮೊದಲ ಭಾಗದಲ್ಲೇ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದ ಚಿತ್ರ. ಬಳಿಕ ತೆರೆಗೆ ಬಂದ 'ಕೆಜೆಎಫ್-2' ಚಿತ್ರ ಕೂಡ ದಾಖಲೆ ಗಳಿಕೆ ಕಾಣುವ ಮೂಲಕ ಜಗತ್ತಿನಾದ್ಯಂತ ಕನ್ನಡ ಚಿತ್ರರಂಗವನ್ನು ಮೇಲ್ಮಟ್ಟಕ್ಕೆ ಏರಿಸಿದೆ. ಕೆಜಿಎಫ್ ಚಿತ್ರವು ಎರಡೇ ಭಾಗಗಳಲ್ಲಿ ಬಂದಿದ್ದೋ ಅಥವಾ ಮುಂದುವರಿದ ಭಾಗ ಇದೆಯೇ ಎಂಬುದು ಕೋಟ್ಯಾಂತರ ಸಿನಿಪ್ರೇಮಿಗಳ ಪ್ರಶ್ನೆಯಾಗಿತ್ತು. ಇದೀಗ 'KGF 3' ನೇ ಭಾಗ ಘೋಷಣೆ ಆಗುವ ಮೂಲಕ ಕೋಟ್ಯಾಂತರ ಸಿನಿಪ್ರೇಮಿಗಳಿಗೆ ಖುಷಿಯಾಗಿದೆ. ಯಶ್ ಹಾಗೂ KGF ಚಿತ್ರಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಕೆಜಿಎಫ್ ಚಿತ್ರದಲ್ಲಿ ಮತ್ತೆ ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿ ನಟಿಸುತ್ತಾರಾ? ಈ ಚಿತ್ರವನ್ನು ಪ್ರಶಾಂತ್ ನೀಲ್ ಅವರೇ ಡೈರೆಕ್ಷನ್ ಮಾಡಲಿದ್ದಾರಾ? ಈ ಎಲ್ಲ ವಿಷಯಗಳೂ ಇನ್ನೂ ಕನ್ಫರ್ಮ್ ಆಗಿಲ್ಲವಾದರೂ, ಸಿಕ್ಕ ಮಾಹಿತಿ ಪ್ರಕಾರ ಮೊದಲಿದ್ದ ಕೆಜಿಎಫ್ ತಂಡವೇ ಮುಂದಿನ ಭಾಗಕ್ಕೂ ಕೆಲಸ ಮಾಡಲಿದೆ ಎನ್ನಲಾಗಿದೆ. ಮೊದಲಿದ್ದಂತೆ, ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವ ಈ ಮುಂಬರುವ ಚಿತ್ರದಲ್ಲೂ ಮುಂದುವರಿಯಲಿದೆ ಎಂದೇ ಹೇಳಲಾಗುತ್ತಿದೆ. ನಾಯಕಿಯಾಗಿ ನಿಧಿ ಶೆಟ್ಟಿ ಸೇರಿದಂತೆ, ಮೊದಲಿದ್ದ ಬಹುತೇಕ ಎಲ್ಲರೂ ಮುಂಬರುವ ಕೆಜಿಎಫ್-3 ಚಿತ್ರದಲ್ಲೂ ಮುಂದುವರಿಯಲಿದ್ದಾರೆ. ಭಹುವನ್ ಗೌಡ ಕ್ಯಾಮರಾ, ರವಿ ಬಸ್ರೂರ್ ಸಂಗೀತ ಕೂಡ 'ಕೆಜಿಎಫ್-3' ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ. ಕಾಲ ಕಳೆದಂತೂ ಎಲ್ಲ ಮಾಹಿತಿಗಳು ಬಹಿರಂಗವಾಗಲಿದೆ, ಕಾದು ನೋಡೋಣ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.