'ಸಲಾರ್' ರಿಮೇಕ್ ಸಿನಿಮಾನಾ, ಪಾರ್ಟ್-2 ಕೂಡ ಬರ್ತಿದ್ಯಾ?, ಪ್ರಶಾಂತ್ ನೀಲ್ ಪ್ರತಿಕ್ರಿಯೆ

By Shruiti G Krishna  |  First Published Apr 9, 2022, 11:35 AM IST

ಕೆಜಿಎಫ್2 ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಬಗ್ಗೆ ಇದ್ದ ವದಂತಿಗಳಿಗೆ ತೆರೆಎಳೆದಿದ್ದಾರೆ. ಸಲಾರ್ ಸಿನಿಮಾ ಉಗ್ರಂ ಚಿತ್ರದ ರಿಮೇಕ್ ಎನ್ನುವ ಮಾತು ಕೇಳಿಬರುತ್ತಿತ್ತು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ನೀಲ್ ಇದು ತಾಜಾ ಕಥೆಯ ಸಿನಿಮಾ ಎಂದು ಹೇಳಿದ್ದಾರೆ. 


ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್(Prashanth Neel) ಕನ್ನಡ ಸಿನಿಮಾ ಜೊತೆಗೆ ತೆಲುಗು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಪ್ರಶಾಂತ್ ನೀಲ್ ಸಲಾರ್(Salaar) ಸಿನಿಮಾ ಮಾಡುತ್ತಿದ್ದಾರೆ. ತೆಲುಗು ಸ್ಟಾರ್ ನಟ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಭಾಸ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಜಿಎಫ್-2 ಸಿನಿಮಾದ ಪ್ರಚಾರಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ಸಮಯದಲ್ಲಿ ಪ್ರಶಾಂತ್ ನೀಲ್ ಸಲಾರ್ ಸಿನಿಮಾಗೆ ಸಂಬಂಧ ಪಟ್ಟ ಕೆಲವು ಊಹಾಪೋಹಗಳಿಗೆ ತೆರೆಎಳೆಯುವ ಪ್ರಯತ್ನ ಮಾಡಿದ್ದಾರೆ.

ಅಂದಹಾಗೆ ಸಲಾರ್ ಸಿನಿಮಾ ಸೆಟ್ಟೇರಿದಾಗಿನಿಂದ ರಿಮೇಕ್ ಎನ್ನುವ ವದಂತಿ ಹಬ್ಬಿತ್ತು. ಇದು ಪ್ರಶಾಂತ್ ನೀಲ್ ಅವರ ಚೊಚ್ಚಲ ಬ್ಲಾಕ್ ಬಸ್ಟರ್ ಉಗ್ರಂ ಸಿನಿಮಾದ ರಿಮೇಕ್ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೀಗ ಈ ಬಗ್ಗೆ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲ ಗೊಂದಲಕ್ಕೆ ತೆರೆಎಳೆದಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ನಾನು ಮಾಡುವ ಎಲ್ಲಾ ಸಿನಿಮಾಗಳಲ್ಲಿ ಉಗ್ರಂನ ಕೆಲವು ಛಾಯೆಗಳನ್ನು ಹೊಂದಿರುತ್ತದೆ. ಅದು ನನ್ನ ಶೈಲಿ. ಆದರೆ ಸಲಾರ್ ಒಂದು ತಾಜಾ ಕಥೆ. ಇದು ಉಗ್ರಂ ರಿಮೇಕ್ ಅಥವಾ ರೂಪಾಂತರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

ಇನ್ನು ಸಲಾರ್ ಸಿನಿಮಾ ಪಾರ್ಟ್-1 ಮತ್ತು ಪಾರ್ಟ್-2 ಆಗಿ ಬಿಡುಗಡೆಯಾಗುತ್ತಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ಕೂಡ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ಸಲಾರ್ ಸಿನಿಮಾವನ್ನು ಪಾರ್ಟ್-1 ಮತ್ತು ಪಾರ್ಟ್-2 ಮಾಡುವ ಬಗ್ಗೆ ಪ್ಲಾನ್ ಮಾಡಿಲ್ಲ ಎಂದು ಹೇಳಿದ್ದಾರೆ.

KGF 2 ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುತ್ತಿರೋರಿಗೆ ಇಲ್ಲಿದೆ ಸಖತ್ ನ್ಯೂಸ್!

ಸದ್ಯ ಕೆಜಿಎಫ್-2ನಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಸಲಾರ್ ಚಿತ್ರೀಕರಣಕ್ಕೆ ತೆರಳಿದ್ದಾರೆ. ಈಗಾಗಲೇ ಶೇ 30ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಉಳಿದ ಭಾಗವನ್ನು ಈ ವರ್ಷದ ಅಂತ್ಯದಲ್ಲೇ ಮುಕ್ತಾಯಗೊಳಿಸಿ ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಸಿನಿಮಾತಂಡ. ಅಂದಹಾಗೆ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ಕಾಣಿಸಿಕೊಂಡಿದ್ದಾರೆ.

KGF Chapter 2: ಗ್ರೀಸ್ ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಹವಾ!

ಪ್ರಶಾಂತ್ ನೀಲ್ ಸದ್ಯ ಕೆಜಿಎಫ್-2 ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದರೆ, ಪ್ರಭಾಸ್ ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ ಮುಂದಿನ ತಿಂಗಳಿಂದ ಸಲಾರ್ ಚಿತ್ರೀಕರಣ ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ. ಪ್ರಭಾಸ್ ಬಳಿ ಸಾಲು ಸಾಲು ಸಿನಿಮಾಗಳಿವೆ. ರಾಧೆ ಶ್ಯಾಮ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಾಗ್ ಅಶ್ವಿನ್ ಅವರ ಸಿನಿಮಾ ಕೂಡ ಕೈಯಲ್ಲಿದೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ಪ್ರಭಾಸ್, ಪ್ರಶಾಂತ್ ನೀಲ್ ಜೊತೆ ಸಲಾರ್ ಕೂಡ ಮಾಡುತ್ತಿದ್ದಾರೆ.

click me!