KGF2 ಯಶಸ್ಸಿನ ಖುಷಿಯಲ್ಲಿ ಯಶ್; ಮಕ್ಕಳ ಜೊತೆ ಸಮುದ್ರತೀರದಲ್ಲಿ ಆಟವಾಡುತ್ತಿರುವ ರಾಕಿಂಗ್ ದಂಪತಿ

Published : Apr 18, 2022, 07:03 PM IST
KGF2 ಯಶಸ್ಸಿನ ಖುಷಿಯಲ್ಲಿ ಯಶ್; ಮಕ್ಕಳ ಜೊತೆ ಸಮುದ್ರತೀರದಲ್ಲಿ ಆಟವಾಡುತ್ತಿರುವ ರಾಕಿಂಗ್ ದಂಪತಿ

ಸಾರಾಂಶ

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್-2 ಸಕ್ಸಸ್ ನ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಒಂದೆಡೆ ಕೆಜಿಎಫ್2 ಅಬ್ಬರಿಸುತ್ತಿದ್ದರೆ ಇತ್ತ ಯಶ್ ಕುಟುಂಬದ ಜೊತೆ ರಜೆಯ ಮೂಡ್ ನಲ್ಲಿದ್ದಾರೆ.

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್-2 ಸಕ್ಸಸ್ ನ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಪ್ಯಾನ್ ಇಂಡಿಯಾ ಹೀರೋ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಒಂದೆಡೆ ಕೆಜಿಎಫ್2 ಅಬ್ಬರಿಸುತ್ತಿದ್ದರೆ ಇತ್ತ ಯಶ್ ಕುಟುಂಬದ ಜೊತೆ ರಜೆಯ ಮೂಡ್ ನಲ್ಲಿದ್ದಾರೆ. ಕೆಜಿಎಫ್-2 ಗಾಗಿ ಅನೇಕ ವರ್ಷಗಳಿಂದ ಸತತ ಶ್ರಮಿಸಿದ್ದ ಯಶ್ ಇದೀಗ ಬ್ರೇಕ್ ಪಡೆದಿದ್ದಾರೆ. ರಜೆಯ ಮೂಡ್ ನಲ್ಲಿರುವ ಯಶ್ ಮತ್ತು ರಾಧಿಕಾ ಪಂಡಿತ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನಟಿ ರಾಧಿಕಾ ಪಂಡಿತ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು, ತಮ್ಮ ಮುದ್ದಾದ ಮಕ್ಕಳ ಜೊತೆ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದಾರೆ. ಈ ಫೋಟೋವನ್ನು ರಾಧಿಕಾ ಶೇರ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ. ರಾಕಿಂಗ್ ದಂಪತಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. ಅಂದಹಾಗೆ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಮಕ್ಕಳ ಪೋಟೋವನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಯಶ್ ಜೊತೆ ಸಮುದ್ರ ತೀರದಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕೆಜಿಎಫ್-2 ದಾಖಲೆ

ಕೆಜಿಎಫ್-2 (KGF 2)ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಸಿನಿಮಾ ಬಿಡುಗಡೆಯಾಗಿ 4 ದಿನಗಳಲ್ಲಿ ಹಿಂದಿಯಲ್ಲಿ 200 ಕೋಟಿ ಕ್ಲಬ್ ಸಮೀಪಿಸಿದೆ. ಈ ಮೂಲಕ ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್, ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ.

KGF 2; ವಿಶ್ವದಾದ್ಯಂತ 550 ಕೋಟಿ ರೂ. ದಾಟಿದ ಕಲೆಕ್ಷನ್, ಸಂಪೂರ್ಣ ಲೆಕ್ಕ ಇಲ್ಲಿದೆ

ಹಿಂದಿಯಲ್ಲಿ ಕೆಜಿಎಫ್-2 ಗಳಿಕೆ

ಕೆಜಿಎಫ್-2 ಸಿನಿಮಾ ಆರ್ಭಟಕ್ಕೆ ಇಡೀ ಬಾಲಿವುಡ್ ಮಂಕಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿಯಲ್ಲಿ ಅಬ್ಬರಿಸುತ್ತಿರುವ ರೀತಿಗೆ ಬಾಲಿವುಡ್ ಶಾಕ್ ಆಗಿದೆ. ಆರ್ ಆರ್ ಆರ್ ಬಳಿಕ ಇದೀಗ ಕೆಜಿಎಫ್-2 ಹಿಂದಿಯ ಎಲ್ಲಾ ದಾಖಲೆಗಳನ್ನು ದೂಳಿಪಟ ಮಾಡುವ ಮೂಲಕ ದಕ್ಷಿಣ ಸಿನಿಮಾಗಳು ರಾರಾಜಿಸುತ್ತಿವೆ. ಸಿನಿಮಾ ಬಿಡುಗಡೆಯಾಗಿ 4 ದಿನಗಳಲ್ಲಿ ಕೆಜಿಎಫ್-2 ಹಿಂದಿಯಲ್ಲಿ 193 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಅತೀ ವೇಗದಲ್ಲಿ 200 ಕೋಟಿ ಕ್ಲಬ್ ಸೇರಿದ ಸಿನಿಮಾ ಎನ್ನುವ ಖ್ಯಾತಿ ಸಹ ಪಡೆಯುತ್ತಿದೆ.

KGF 2 ಆರ್ಭಟಕ್ಕೆ ಮಂಕಾದ ಬಾಲಿವುಡ್; ಹಿಂದಿಯಲ್ಲಿ 193 ಕೋಟಿ ರೂ. ಬಾಚಿದ ರಾಕಿ ಭಾಯ್

ವಿಶ್ವದಾದ್ಯಂತ ಕಲೆಕ್ಷನ್

ವಿಶ್ವದಾದ್ಯಂತ ಕೆಜಿಎಫ್-2 ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ 165.37 ಕೋಟಿ ರೂ. ಎರಡನೇ ದಿನ 139.25 ಕೋಟಿ ರೂ. ಮೂರನೇ ದಿನ 115.08 ಕೋಟಿ ರೂ. ನಾಲ್ಕನೇ ದಿನ ಕೋಟಿ 132.13 ಕೋಟಿ ರೂ. ಬಾಚಿಕೊಂಡಿದ್ದು, ಒಟ್ಟು ಜಗತ್ತಿನಾದ್ಯಂತ 551.83 ಕೋಟಿ ರೂಪಾಯಿ ಬಾಚಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉಂಗುರ ಬದಲಿಸಿ 10 ವರ್ಷ : ಫ್ಯಾನ್ಸ್ ಗೆ ಸೂಪರ್‌ ಗಿಫ್ಟ್ ನೀಡಿದ ರಾಧಿಕಾ ಪಂಡಿತ್
Sara Ali Khan Birthday: ಒಂದೊಂದು ಪಾತ್ರ, ಒಂದೊಂದು ಅವತಾರ; ಸಾರಾ ಅಲಿ ಖಾನ್‌ರ ಸಿನಿ ಜರ್ನಿಯ 5 ಪ್ರಮುಖ ಪಾತ್ರಗಳಿವು!