ಇದು ಸ್ನೇಹನಾ ಪ್ರೀತಿನಾ? ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌ಗೆ ಫ್ಯಾನ್ಸ್ ಪ್ರಶ್ನೆ

By Shruthi KrishnaFirst Published May 17, 2023, 4:39 PM IST
Highlights

ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌ಗೆ ಅಭಿಮಾನಿಗಳು ಇದು ಸ್ನೇಹನಾ ಪ್ರೀತಿನಾ ಪ್ರಶ್ನೆ ಮಾಡುತ್ತಿದ್ದಾರೆ.   

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಮದುವೆ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಕೀರ್ತಿ ಸುರೇಶ್ ಮದ್ವೆ ಫಿಕ್ಸ್ ಆಗಿದೆ, ಉದ್ಯಮಿ ಜೊತೆ ಹಸಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಆದರೆ ಕೀರ್ತಿ ಸುರೇಶ್ ಇದ್ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಕೀರ್ತಿ ದಸರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾನಿ ಜೊತೆ ಕೀರ್ತಿ ನಟಿಸಿದ್ದರು. ಈ ನಡುವೆ ಮತ್ತೆ ಕೀರ್ತಿ ಮದುವೆ ವಿಚಾರ ಸದ್ದು ಮಾಡುತ್ತಿದೆ. ಕಾರಣ ಮಹಾನಟಿ ಶೇರ್ ಮಾಡಿರುವ ಫೋಟೋ. 

ಇತ್ತೀಚೆಗಷ್ಟೆ ನಟಿ ಕೀರ್ತಿ ಸುರೇಶ್ ಒಂದು ಫೋಟೋ ಹಂಚಿಕೊಂಡಿದ್ದರು. ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಕೀರ್ತಿ ಪಕ್ಕದಲ್ಲಿ ಇರುವ ವ್ಯಕ್ತಿ ಯಾರೆಂದು ಅಭಿಮಾನಿಗಳು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಕೀರ್ತಿ ಅವರ ಬಾಯ್‌ಫ್ರೆಂಡ್ ಅಥವಾ ಕೇವಲ ಫ್ರೆಂಡ್ ಅಷ್ಟೆನಾ ಎನ್ನುವ  ಚರ್ಚೆ ಶುರುವಾಗಿದೆ. ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವುದು ನೋಡಿದ್ರೆ ಸ್ನೇಹಕ್ಕಿಂತ ಮಿಗಿಲಾದ ಬಂಧವಿದೆ ಎನ್ನಲಾಗುತ್ತಿದೆ. ಈ ಫೋಟೋ ಕೀರ್ತಿ ಶೇರ್ ಮಾಡುತ್ತಿದ್ದಂತೆ ಮದುವೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಆಗಿದೆ. 

ಅಯ್ಯೋ ಕೀರ್ತಿ ಸುರೇಶ್‌ಗೆ ಏನಾಯ್ತು? ಫೋಟೋ ಹಂಚಿಕೊಂಡು ಭಾವುಕರಾದ ಸ್ಟಾರ್ ನಟಿ

ಅಂದಹಾಗೆ ಕೀರ್ತಿ ಪಕ್ಕದಲ್ಲಿ ಇರುವ ವ್ಯಕ್ತಿ ಫರ್ಹಾನ್ ಬಿನ್ ಲೈತ್ ಎನ್ನಲಾಗಿದೆ. ಈತ ರಿಯಲ್ ಎಸ್ಟೇಟ್ ಉದ್ಯಮಿ. ಫರ್ಹಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೀರ್ತಿ ಭಾಗಿಯಾಗಿದ್ದರು. ಅಷ್ಟೆಯಲ್ಲ ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿ ಫೋಟೋಗೆ ಪೋಸ್ ನೀಡಿದ್ದರು. ಇಬ್ಬರೂ ಆಪ್ತವಾಗಿರುವ ಫೋಟೋ ನೋಡ್ತಿದ್ರೆ ಅನುಮಾನ ಮೂಡಿಸುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಫೋಟೋ ಶೇರ್ ಮಾಡಿ ಫರ್ಹಾನ್‌ಗೆ ವಿಶ್ ಮಾಡಿದ್ದರು. ಫರ್ಹಾನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇಬ್ಬರ ಮಾತುಕತೆ ಅಭಿಮಾನಿಗಳಿಗೆ ಮತ್ತಷ್ಟು ಅನುಮಾನ ಮೂಡಿಸಿತ್ತು. 

ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ರಾ 'ಮಹಾನಟಿ'? #JusticeForSangeetha ಟ್ರೆಂಡ್

ಈ ಬಗ್ಗೆ ಕೀರ್ತಿ ಆಪ್ತ ಮೂಲಗಳು ಬಹಿರಂಗ ಪಡಿಸಿದ್ದು, ಇಬ್ಬರೂ ಸ್ನೇಹಿತರು ಅಷ್ಟೆ, ವದಂತಿ ಹಬ್ಬಿಸಬೇಡಿ ಎಂದು ಹೇಳುತ್ತಿದ್ದಾರೆ. ಇದು ನಿಜಕ್ಕೂ ಸ್ನೇಹನಾ ಅಥವಾ ಪ್ರೀತಿನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಕೀರ್ತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಮಟಾನಟಿ ಕೈಯಲ್ಲಿ 5 ಸಿನಿಮಾಗಳಿವೆ.  ತೆಲುಗಿನ 'ಭೋಳಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ನಟಿಸುತ್ತಿದ್ದಾರೆ. ತಮಿಳಿನ 'ಮಾಮನನ್', 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ರಘು ತಾತ' ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. 

click me!