ಉಪಾಸನಾ ಬಗ್ಗೆ ಕೆಟ್ಟದಾಗಿ ಮಾತಾಡಿದ ವ್ಯಕ್ತಿ: ಹಿಗ್ಗಾಮುಗ್ಗಾ ಥಳಿಸಿದ ರಾಮ್ ಚರಣ್ ಫ್ಯಾನ್ಸ್, ವಿಡಿಯೋ ವೈರಲ್

Published : May 17, 2023, 03:59 PM IST
ಉಪಾಸನಾ ಬಗ್ಗೆ ಕೆಟ್ಟದಾಗಿ ಮಾತಾಡಿದ ವ್ಯಕ್ತಿ: ಹಿಗ್ಗಾಮುಗ್ಗಾ ಥಳಿಸಿದ ರಾಮ್ ಚರಣ್ ಫ್ಯಾನ್ಸ್, ವಿಡಿಯೋ ವೈರಲ್

ಸಾರಾಂಶ

ಉಪಾಸನಾ ಬಗ್ಗೆ ಕೆಟ್ಟದಾಗಿ ಮಾತಾಡಿದ ವ್ಯಕ್ತಿಗೆ ರಾಮ್ ಚರಣ್ ಅಭಿಮಾನಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಟಾಲಿವುಡ್ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಬಗ್ಗೆ ಕೆಟ್ಟದಾಗಿ ಮಾಡಿದ್ದಾರೆ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರಿಯಾಗಿ ಗೂಸ ತಿನ್ನುತ್ತಿರುವ ವ್ಯಕ್ತಿ ಸಂದರ್ಶದಲ್ಲಿ ಉಪಾಸನಾ ಬಗ್ಗೆ ಅವಹೇಳಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಭಿಮಾನಿಗಳು ಸರಿಯಾಗಿ ಹೊಡೆದಿದ್ದಾರೆ. ಹೊಡೆತ ತಿಂದ ವ್ಯಕ್ತಿ ಸುನಿಸಿತ್ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸುನಿಸಿತ್ ಎನ್ನುವ ವ್ಯಕ್ತಿ ಯೂಟ್ಯೂಬ್ ಸಂದರ್ಶನದಲ್ಲಿ ಉಪಾಸನಾ ಮತ್ತು ರಾಮ್ ಚರಣ್ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ರಾಮ್ ಚರಣ್ ಅಭಿಮಾನಿಗಳು ಆ ವ್ಯಕ್ತಿಯನ್ನು ಹುಡುಕಿ ಸರಿಯಾಗಿ ಥಳಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ, ಯಾರ ಬಗ್ಗೆಯಾದರೂ ಅಸಂಬದ್ಧವಾಗಿ ಮಾತನಾಡಿ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವವರಿಗೆ ಇದು ಭಯವುಂಟು ಮಾಡುತ್ತಿದೆ' ಎಂದು ಹೇಳಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ ಹೀಗೆ ದೈಹಿಕಾವಾಗಿ ಹಿಂಸೆ ಮಾಡುವುದು ತಪ್ಪು ಎಂದು ಹೇಳುತ್ತಿದ್ದಾರೆ. ಈ ವ್ಯಕ್ತಿ ಯಾವಾಗಲೂ ಅಂಥ ಅಸಂಬದ್ಧ ಮಾತುಗಳನ್ನು ಹೇಳುತ್ತಿರುತ್ತಾರೆ. ಅನಗತ್ಯವಾಗಿ ತೊಂದರೆಗೆ ಸಿಲುಕುತ್ತಿರುತ್ತಾರೆ' ಎಂದು ಹೇಳಿದ್ದಾರೆ.

ಮದುವೆಯಾದ ಪ್ರಾರಂಭದಲ್ಲೇ Egg Freeze ಮಾಡಿದ್ದ ರಾಮ್ ಚರಣ್ - ಉಪಾಸನಾ ದಂಪತಿ

ಆ ವ್ಯಕ್ತಿ ಹೇಳಿದ್ದೇನು?

'ನಾನು ಉಪಾಸನಾ ಜೊತೆ ಲಾಂಗ್ ಡ್ರೈವ್ ಹೋಗಿದ್ದೆ. ಅವಳು ನನ್ನ ಸ್ನೇಹಿತೆ. ಅವಳು ಆಡಿ ಎಲೆಕ್ಟ್ರಿಕ್ ವಾಹನವನ್ನು ಹೊಂದಿದ್ದಾಳೆ ಮತ್ತು ನಾವು ಆ ಕಾರಿನಲ್ಲಿ ಗೋವಾಗೆ ಹೋಗಿದ್ದೇವೆ. ರಾಮ್ ಚರಣ್ ಕೂಡ ನನ್ನ ಸ್ನೇಹಿತ. ಒಮ್ಮೆ ಉಪಾಸನೆಯನ್ನು ನನ್ನ ಮೇಲೆ ಬೀಳುವಂತೆ ಮಾಡು ಎಂದು ಕೇಳಿಕೊಂಡಿದ್ದರು' ಎಂದು ಹೇಳಿದರು. ಅದೇ ವಿಡಿಯೋದಲ್ಲಿ ಮಾತನಾಡಿ, ಚಿರಂಜೀವಿ ಅವರ ಮಗಳು ಸುಶ್ಮಿತಾ ಅವರೊಂದಿಗೂ ಲಾಂಗ್ ಡ್ರೈವ್ ಹೋಗಿದ್ದೀನಿ ಎಂದು ಹೇಳಿದ್ದಾರೆ. ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡಿ ಸ್ಟಾರ್ ವ್ಯಕ್ತಿಗಳ ಘನತೆ ಹಾಳು ಮಾಡುತ್ತೀರಾ ಎಂದು ಸರಿಯಾಗಿ ಥಳಿಸಿದ್ದಾರೆ.

Mothers day spl: ಅಮ್ಮಂದಿರ ದಿನಕ್ಕೆ ರಾಮ್ ಚರಣ್ ಪತ್ನಿ ಉಪಾಸನಾ ಬೇಬಿ ಬಂಪ್ ಷೋ!

ಕೆಲವು ಅಭಿಮಾನಿಗಳು ಬುದ್ಧವಾದ ಹೇಳುತ್ತಿದ್ದಾರೆ. ನೀವು ಮಾಡಿದ್ದ ತಪ್ಪು. ಯಾವುದೇ ಕುಟುಂಬದ ಮಹಿಳೆಯರ ಬಗ್ಗೆ ನೀವು ಕಾಮೆಂಟ್‌ಗಳನ್ನು ಮಾಡಬಾರದು. ಇತ್ತೀಚಿನವರೆಗೂ ನೀವು ಸಿನಿಮಾಗಳನ್ನು ಟೀಕಿಸುತ್ತಿದ್ದಿರಿ, ಆಗ ಯಾರೂ ಏನನ್ನೂ ಹೇಳಲಿಲ್ಲ. ಇನ್ನುಮುಂದೆ, ಯಾವುದೇ ನಾಯಕನ ವೈಯಕ್ತಿಕ ಜೀವನದ ಬಗ್ಗೆ ಇಂತಹ ಕಾಮೆಂಟ್‌ಗಳನ್ನು ಮಾಡಬೇಡಿ' ಎಂದು ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?