ಬಾಲಿವುಡ್ ನಟ ಹಾಗೂ ಕಪೂರ್ ಕುಟುಂಬದ ಆದಾರ್ ಜೈನ್ ಮತ್ತೆ ಸುದ್ದಿಯಲ್ಲಿದ್ದಾರೆ. ಭಾವಿ ಪತ್ನಿಗೆ ಲಿಪ್ ಲಾಕ್ ಮಾಡಿರುವ ನಟನ ಫೋಟೋ ವೈರಲ್ ಆಗಿದೆ. ಕಪೂರ್ ಕುಟುಂಬದ ಭಾವಿ ಸೊಸೆ ಲುಕ್ ಎಲ್ಲರನ್ನು ಅಚ್ಚರಿಗೊಳಿಸಿದೆ.
ಬಾಲಿವುಡ್ ನಟ ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಸೋದರಸಂಬಂಧಿ ಆದಾರ್ ಜೈನ್ (Aadar Jain), ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನದಲ್ಲಿ ಹೆಚ್ಚು ಸುದ್ದಿಯಲ್ಲಿರ್ತಾರೆ. ಕೆಲ ದಿನಗಳ ಹಿಂದೆ ನಟಿ ತಾರಾ ಸುತಾರಿಯಾ (actress Tara Sutaria) ಜೊತೆ ಬ್ರೇಕ್ ಅಪ್ ಮಾಡ್ಕೊಂಡಿದ್ದ ಆದಾರ್ ಜೈನ್, ಅಲೇಖಾ ಅಡ್ವಾಣಿ (Alekha Advani) ಜೊತೆ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದ ಆದಾರ್ ಜೈನ್, ಎಲ್ಲರನ್ನು ಎಚ್ಚರಿಗೊಳಿಸಿದ್ದರು. ಇದೀಗ ಆದಾರ್ ಜೈನ್ ತಮ್ಮ ಭಾವಿ ಪತ್ನಿ ಅಲೇಖಾ ಬರ್ತ್ ಡೇಯನ್ನು ರೊಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ.
ಪ್ರೇಯಸಿ ಅಲೇಖಾ ಹುಟ್ಟು ಹಬ್ಬದಂದು ಆದಾರ್ ಜೈನ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ವೇಗವಾಗಿ ವೈರಲ್ ಆಗ್ತಿದೆ. ಇದ್ರಲ್ಲಿ ಲೇಖಾ ಮತ್ತು ಆದಾರ್ ಮಾದಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲೇಖಾ ಬಿಕಿನಿಯಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಆದಾರ್, ಬಿಕನಿಯಲ್ಲಿರುವ ಅಲೇಖಾ ಅವರನ್ನು ಹಗ್ ಮಾಡಿ, ಲಿಪ್ ಲಾಕ್ ಮಾಡಿದ್ದಾರೆ.
undefined
ಬೋಲ್ಡ್ ಲುಕ್ ಮೂಲಕ ಚಳಿಗಾಲದಲ್ಲೂ ಟೆಂಪ್ರೇಚರ್ ಹೆಚ್ಚಿಸಿದ ಚೈತ್ರಾ ಆಚಾರ್
ಎರಡನೇ ಫೋಟೋದಲ್ಲಿ ಅಲೇಖಾ, ಜೋಕಾಲಿ ಮೇಲೆ ಕುಳಿತಿದ್ದಾರೆ. Aadarjain ಇನ್ಸ್ಟಾ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಅನೇಕ ಬಳಕೆದಾರರು ಅಲೇಖಾಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅಲೇಖಾ ಲುಕ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಆದಾರ್ ಜೈನ್, ರೀಮಾ ಮತ್ತು ಮನೋಜ್ ಜೈನ್ ಅವರ ಮಗ. ರಾಜ್ ಕಪೂರ್ ಅವರ ಮೊಮ್ಮಗ. ಸೆಪ್ಟೆಂಬರ್ ನಲ್ಲಿ ಅಲೇಖಾ ಜೊತೆ ಆದಾರ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ಅಲೇಖಾಗೆ ಪ್ರಪೋಸ್ ಮಾಡಿದ್ದರು ಆದಾರ್. ಕಳೆದ ವರ್ಷ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಯಲ್ಲಿ ಈ ಜೋಡಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅಲೇಖಾ ಹಾಗೂ ಆದಾರ್ ಅನೇಕ ವರ್ಷಗಳಿಂದ ಸ್ನೇಹಿತರು. ಕಳೆದ ವರ್ಷ ಇಬ್ಬರ ಸ್ನೇಹ, ಪ್ರೀತಿಯಾಗಿ ಅರಳಿತ್ತು.
ಕಪೂರ್ ಕಾಂದಾನ್ ಸೊಸೆಯಾಗಲಿರುವ ಅಲೇಖಾ ಅಡ್ವಾಣಿ ಉದ್ಯಮಿ. ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿರುವ ಅಲೇಖಾ, ಲಾಸ್ ಏಂಜಲೀಸ್‌ನಲ್ಲಿ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ನಂತ್ರ ಮುಂಬೈಗೆ ಮರಳಿದ ಅವರು ಜುಹುದಲ್ಲಿ ಕೆಲಸ ಮಾಡಿದ್ದರು. ಈಗ ಸ್ವಂತ ಬ್ಯುಸಿನೆಸ್ ಹೊಂದಿದ್ದಾರೆ. 2020 ರಲ್ಲಿ ಅಲೇಖಾ, ಆರೋಗ್ಯಕ್ಕೆ ಸಂಬಂಧಿಸಿದ ವಿ ವೆಲ್ ಕಂಪನಿ ಸ್ಥಾಪಿಸಿದ್ದಾರೆ. ಕಾರ್ಪೊರೇಟ್ ಕೆಲಸ ಬಿಟ್ಟು ದಿಟ್ಟ ಹೆಜ್ಜೆಯಿಟ್ಟು, ಯಶಸ್ಸು ಸಾಧಿಸಿದ್ದಾರೆ. ಅಲೇಖಾ ಫ್ಯಾಶನ್ ಇಂಡಸ್ಟ್ರಿಯಲ್ಲಿಯೂ ಫೇಮಸ್ ಆಗಿದ್ದಾಳೆ. ಮಾಡೆಲಿಂಗ್ ಜಗತ್ತಿನಲ್ಲೂ ಅಲೇಖಾ ಗುರುತಿಸಿಕೊಂಡಿದ್ದಾರೆ. ಆಭರಣ ಮತ್ತು ಬಟ್ಟೆ ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮಾಡ್ತಿದ್ದಾರೆ.
ದುಬಾರಿ ಕಾರು ಖರೀದಿಸಿದ ದಿವ್ಯಾ; ಅರವಿಂದ್ ಪಕ್ಕದಲ್ಲಿದ್ದರೂ 'ಬಘೀರ'ನೇ ಇಷ್ಟ
ಆದಾರ್ ಜೈನ್ ನಟಿ ತಾರಾ ಸುತಾರಿಯಾ ಜೊತೆ ಸಂಬಂಧದಲ್ಲಿದ್ದರು. ಸುಮಾರು ಮೂರು ವರ್ಷಗಳ ಕಾಲ ಅವರಿಬ್ಬರು ಒಟ್ಟಿಗಿದ್ದರು. ತಾರಾ ಸುತಾರಿಯಾ ಜೊತೆ ಸಂಬಂಧದಲ್ಲಿರುವಾಗ್ಲೇ ಆದಾರ್, ಅಲೇಖಾ ಜೊತೆ ಕೂಡ ಕಾಣಿಸಿಕೊಂಡಿದ್ದರು. ತಾರಾ ಸುತಾರಿಯಾ ಹಾಗೂ ಆದಾರ್ ಮಧ್ಯೆ ಬಿರುಕು ಕಾಣಿಸಿಕೊಳ್ಳಲು ಅಲೇಖಾ ಕಾರಣ ಎಂದು ಜನರು ನಂಬುತ್ತಾರೆ. ತಾರಾ ಸುತಾರಿಯಾ ಹಾಗೂ ಅಲೇಖಾ ಸ್ನೇಹಿತೆಯರಾಗಿದ್ದರು. ಈಗ ತಾರಾ ಸುತಾರಿಯಾ ಮಾಜಿಯನ್ನು ಅಲೇಖಾ ಮದುವೆ ಆಗ್ತಿದ್ದಾರೆ. ಅಲೇಖಾ ಹಾಗೂ ಆದಾರ್ ಎಂಗೇಜ್ಮೆಂಟ್ ಗೆ ತಾರಾ ಸುತಾರಿಯಾ ಬಂದು ಎಲ್ಲರನ್ನು ಅಚ್ಚರಿಗೊಳಿಸಿದ್ದರು.