ಖ್ಯಾತ ಕಿರುತೆರೆ ನಟಿ ಕವಿತಾ ಹೃದಯಾಘಾತದಿಂದ ನಿಧನ! ಸರ್ಫ್​ ಎಕ್ಸೆಲ್​ ಲಲಿತಾಜೀ ಎಂದೇ ಫೇಮಸ್​...

By Suvarna NewsFirst Published Feb 16, 2024, 5:46 PM IST
Highlights

ಖ್ಯಾತ ಕಿರುತೆರೆ ನಟಿ, ಸರ್ಫ್​ ಎಕ್ಸೆಲ್​ ಲಲಿತಾಜೀ ಎಂದೇ ಫೇಮಸ್​ ಆಗಿದ್ದ  ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
 

ದೂರದರ್ಶನದಲ್ಲಿ ಪ್ರಸಾರ ಆಗುತ್ತಿದ್ದ ಪ್ರಸಿದ್ಧ ಧಾರಾವಾಹಿ 'ಉಡಾನ್' ನಲ್ಲಿ IPS ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದ ಮೂಲಕ ಎಲ್ಲರ ಮನ ಗೆದ್ದಿದ್ದ ನಟಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾದರು. ಉಡಾನ್​ನಷ್ಟೇ ಅವರಿಗೆ ಹೆಸರು ತಂದುಕೊಟ್ಟಿದ್ದು ಜಾಹೀರಾತು ಕ್ಷೇತ್ರ. ಅದರಲ್ಲಿಯೂ ಸರ್ಫ್​ ಎಕ್ಸೆಲ್​ ಲಲಿತಾಜೀ ಎಂದೇ ಫೇಮಸ್​ ಆಗಿದ್ದರು ಕವಿತಾ. ಅವರಿಗೆ ಈಗ 67 ವರ್ಷ ವಯಸ್ಸಾಗಿತ್ತು.  1980 ರ ದಶಕದ ಆರಂಭದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದ ಕವಿತಾ  1989 ರಲ್ಲಿ ಪ್ರಸಾರವಾದ 'ಉಡಾನ್' ಹಾಗೂ ಆ ನಂತರ  'ಯುವರ್ ಆನರ್' ಮತ್ತು 'ಐಪಿಎಸ್ ಡೈರೀಸ್' ಸೇರಿದಂತೆ ಹಲವಾರು ಸೀರಿಯಲ್​ಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದರು ಕವಿತಾ.
 
ಕವಿತಾ ಅವರು ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರನ್ನು  ಅಮೃತಸರದ ಪಾರ್ವತಿ ದೇವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಕೆಲ ವರ್ಷಗಳಿಂದ  ಕ್ಯಾನ್ಸರ್​ನಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇನ್ನು ಕವಿತಾ ಕುರಿತು ಕೆಲವು ಮಾಹಿತಿ ನೀಡುವುದಾದರೆ, ಇವರು  ಕೋಲ್ಕತ್ತಾದಲ್ಲಿ ಜನಿಸಿದರು. ಪೊಲೀಸ್ ಅಧಿಕಾರಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರ ತಂಗಿಯಾಗಿದ್ದ ಕವಿತಾ ಅವರಿಗೆ ಸೀರಿಯಲ್​ಗಳಲ್ಲಿಯೂ ಪೊಲೀಸ್​ ಪಾತ್ರದಲ್ಲಿಯೇ ಮಿಂಚಿದರು. ಏಕೆಂದರೆ ಕಾಂಚನ್​ ಅವರು,  ಕಿರಣ್ ಬೇಡಿ ನಂತರ ಕಾಂಚನ್ ಎರಡನೇ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ಡಿಜಿಪಿ ಆದ ಮೊದಲ ಮಹಿಳೆ.

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗರಿ! ​ಪ್ರತಿಷ್ಠಿತ ಫೋರ್ಬ್ಸ್​ ಪಟ್ಟಿಯಲ್ಲಿ ದಕ್ಕಿದೆ ಸ್ಥಾನ
  
ಉಡಾನ್​ನಲ್ಲಿ ಇವರು ಖ್ಯಾತಿ ಪಡೆಯಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಉಡಾನ್​ ಎಂಬ ಯೋಜನೆಯಲ್ಲಿಯೂ ಕವಿತಾ ಪ್ರಮುಖ ಭಾಗವಾಗಿದ್ದರು.  ಮಹಿಳಾ ಸಬಲೀಕರಣದ ಪ್ರಗತಿಪರ ಕಾರ್ಯಕ್ರಮವಾಗಿತ್ತು ಉಡಾನ್​. ಅದೇ ಕಾರಣಕ್ಕೆ 'ಉಡಾನ್' ಸೀರಿಯಲ್​ನಲ್ಲಿಯೂ ಇವರು ಮಿಂಚಿದರು. ಇವರ  ಕಲ್ಯಾಣಿ ಪಾತ್ರ ಇಂದಿಗೂ ಮನೆಮಾತಾಗಿದೆ.  ಶೇಖರ್ ಕಪೂರ್ ಜೊತೆ ಕವಿತಾ ನಟಿಸಿದ್ದರು. ಇದು ಐಪಿಎಸ್ ಅಧಿಕಾರಿಯಾಗಲು ಬಯಸುವ ಮಹಿಳೆಯ ಹೋರಾಟದ ಸುತ್ತ ಕಥೆ ಹೊಂದಿತ್ತು. ನಂತರ ತಮ್ಮ ವೃತ್ತಿಜೀವನದಲ್ಲಿ ಕವಿತಾ ಅವರು 'ಯುವರ್ ಆನರ್' ಮತ್ತು 'ಐಪಿಎಸ್ ಡೈರೀಸ್' ನಂತಹ ಸೀರಿಯಲ್​ಗಳಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ಮಿಂಚಿದರು. 

ಕೋವಿಡ್​ ಸಂದರ್ಭದಲ್ಲಿಯೂ ದೂರದರ್ಶನದಲ್ಲಿ ಉಡಾನ್​ ಸೀರಿಯಲ್​ ಪುನಃ ಪ್ರಸಾರವಾಗಿದ್ದು ವಿಶೇಷ.  ಕವಿತಾ ಅವರು 1980 ಮತ್ತು 1990 ರ ದಶಕದಲ್ಲಿ ಪ್ರಸಿದ್ಧವಾದ ಸರ್ಫ್ ಡಿಟರ್ಜೆಂಟ್ ಪೌಡರ್ ಜಾಹೀರಾತುಗಳಲ್ಲಿ ಲಲಿತಾಜಿ ಪಾತ್ರದಲ್ಲಿ ಹೆಸರುವಾಸಿಯಾಗಿದ್ದರು. ಕವಿತಾ ಅವರ ನಿಧನಕ್ಕೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬರುತ್ತಿದೆ. 
 
ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ?
 

click me!