ಒಳ್ಳೆ ಸೆಕ್ಸ್​ ಅಂದ್ರೆ ಒಳ್ಳೆ ಆಹಾರ ಇದ್ದಂತೆ: ಹಸಿಬಿಸಿಯಾಗಿ ಕಾಣಿಸಿಕೊಂಡ 'ನಟಸಾರ್ವಭೌಮ' ಬೆಡಗಿ ಅನುಪಮಾ ಹೇಳಿದ್ದೇನು?

By Suvarna News  |  First Published Feb 16, 2024, 5:15 PM IST

ಒಳ್ಳೆ ಸೆಕ್ಸ್​ ಅಂದ್ರೆ ಒಳ್ಳೆ ಆಹಾರ ಇದ್ದಂತೆ: ಹಸಿಬಿಸಿಯಾಗಿ ಕಾಣಿಸಿಕೊಂಡ 'ನಟಸಾರ್ವಭೌಮ' ಬೆಡಗಿ ಅನುಪಮಾ ಹೇಳಿದ್ದೇನು ಕೇಳಿ... 
 


ಈಗೀಗ ಲಿಪ್​ಲಾಕ್​, ಅರೆನಗ್ನ, ಸಂಪೂರ್ಣ ನಗ್ನ ಹೀಗೆಲ್ಲಾ ಮಾಡದೇ ಇದ್ದರೆ ಚಿತ್ರಗಳು ಓಡುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಬಂದಿದ್ಯೋ ಗೊತ್ತಿಲ್ಲ. ಇದೇ ಕಾರಣಕ್ಕೆ ಬಾಲಿವುಡ್​ ತಾರೆಯರು ಮಾತ್ರವಲ್ಲದೇ, ಬಹುತೇಕ ಎಲ್ಲಾ 'ವುಡ್'​ ತಾರೆಯರೂ ಇದೀಗ ಇದಕ್ಕೆ ಮೊರೆ ಹೋಗಿದ್ದಾರೆ. ಅದರಲ್ಲಿಯೂ ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ರಾತ್ರೋ ರಾತ್ರಿ ನ್ಯಾಷನಲ್​ ಕ್ರಷ್​ ಎಂಬ ಬಿರುದಿನ ಜೊತೆಗೆ ಏಕಾಏಕಿ ಎಲ್ಲರ ಗಮನ ಸೆಳೆದು ನಟಿ ತೃಪ್ತಿ ಡಿಮ್ರಿ ಸೂಪರ್​ಹಿಟ್​ ಆದ ಮೇಲಂತೂ ಇದೀಗ ಇಂಥದ್ದೊಂದು ಟ್ರೆಂಡ್​ ಶುರುವಾಗುತ್ತಿದೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡರಷ್ಟೇ ತಮಗೆ ಸಿನಿಮಾದಲ್ಲಿ ನೆಲೆಯೂರಲು ಸಾಧ್ಯ ಎಂದು ನಟಿಯರು ಕಂಡುಕೊಂಡಂತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಸೌತ್​ ಬ್ಯೂಟಿ  ಅನುಪಮಾ ಪರಮೇಶ್ವರನ್.  

 ಗುಂಗುರು ಕೂದಲಲ್ಲಿ ಈ ಸುಂದರಿ ಇದಾಗಲೇ ಕೆಲವೊಂದು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ ಅವರು ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸುದೀರ್ಘ ಲಿಪ್​ಲಾಕ್​  ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು ‘ಟಿಲ್ಲು ಸ್ಕ್ವೇರ್’. ಇದರಲ್ಲಿ ಕಾರಿನಲ್ಲಿ ನಟನ ಜೊತೆ ಲಿಪ್​ಲಾಕ್​ ಮಾಡಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಟ್ರೀಲರ್​ ಬಿಡುಗಡೆಯಾಗಿದೆ. 2015ರಲ್ಲಿ ಮಲಯಾಳಂ ಚಿತ್ರ  ಪ್ರೇಮಮ್‌ ಮೂಲಕ ಪದಾರ್ಪಣೆ ಮಾಡಿ ಭರ್ಜರಿ ಯಶಸ್ಸು ಕಂಡಿದ್ದರೂ, ಆ ಬಳಿಕ ನಟಿಸಿದ ಚಿತ್ರಗಳು ಅಷ್ಟೊಂದು ಯಶಸ್ಸು ಕಂಡಿರಲಿಲ್ಲ.  ಮೇರಿ ಜಾರ್ಜ್‌ ಪಾತ್ರದಲ್ಲಿ ಗುಂಗುರು ಕೂದಲಲ್ಲಿ ಕಂಗೊಳಿಸಿದ್ದ ನಟಿಗೆ ಅವಕಾಶಗಳು ಕಡಿಮೆಯೇ ಆದವು. ಆದ್ದರಿಂದ ಇದೀಗ ಇಂಟಿಮೇಟ್​ ಸೀನ್​ಗಳನ್ನು ಮಾಡುವ ಮೂಲಕ ಇಂಡಸ್ಟ್ರಿಯಲ್ಲಿ ನೆಲೆಯೂರುವ ಆಸೆ ವ್ಯಕ್ತಪಡಿಸಿದಂತಿದೆ ನಟಿ!  ‘ರೌಡಿ ಬಾಯ್ಸ್’ ಚಿತ್ರದಲ್ಲಿ ಬೋಲ್ಡ್ ಪಾತ್ರ ಮಾಡಿದ್ದರೂ ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.

Tap to resize

Latest Videos

ಮಾಜಿ ಪತ್ನಿಯನ್ನು ತಬ್ಬಿಕೊಂಡ ಬೆನ್ನಲ್ಲೇ ಹೃತಿಕ್​ಗೆ ಇದೇನಾಯ್ತು? ಊರುಗೋಲು ಹಿಡಿದ ಫೋಟೋ ವೈರಲ್​!

ಒಳ್ಳೆಯ ಸೆಕ್ಸ್‌ ಒಳ್ಳೆಯ ಆಹಾರ ಇದ್ದಂತೆ ಎಂದು ನಟಿ ಹೇಳುತ್ತಲೇ ಚಿತ್ರದ ಟ್ರೇಲರ್​ ಆರಂಭವಾಗುತ್ತದೆ. ಮಲ್ಲಿಕ್‌ ರಾಮ್ ನಿರ್ದೇಶನದ ಈ ಚಿತ್ರದಲ್ಲಿ ಏನು ಇರಬಹುದು ಎಂಬ ಬಗ್ಗೆ ನಟಿಯ ಬಾಯಲ್ಲಿ ಹೇಳಿಸಲಾಗಿದೆ. ಅಂದಹಾಗೆ ಚಿತ್ರವು ಮಾರ್ಚ್‌ 29ರಂದು ಬಿಡುಗಡೆ ಆಗಲಿದೆ.  

ಇನ್ನು ಟಿಲ್ಲು ಸ್ಕ್ವೇರ್‌ ಚಿತ್ರದ ಕುರಿತು ಹೇಳುವುದಾದರೆ  ತೆಲುಗಿನಲ್ಲಿ ಡಿಜೆ ಟಿಲ್ಲು ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅದರ ಸೀಕ್ವೆಲ್​ ಈ ಚಿತ್ರ. ಇದರಲ್ಲಿ ಅನುಪಮಾ ಅವರ ಬೋಲ್ಡ್​ ಅವತಾರವನ್ನು ವೀಕ್ಷಕರು ಮೆಚ್ಚಿಕೊಳ್ಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಅಷ್ಟಕ್ಕೂ ನಟಿ ಮಲಯಾಳಂ ಬಳಿಕ ತೆಲುಗಿಗೆ ಕಾಲಿಟ್ಟವರು. ತೆಲುಗು ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿತು. ಟಾಲಿವುಡ್​ನಿಂದ ಕಾಲಿವುಡ್​ ಪ್ರವೇಶಿಸಿದ್ದ ನಟಿ, ಅಲ್ಲಿಂದ  ಪುನೀತ್‌ ರಾಜ್‌ಕುಮಾರ್‌ ಜೊತೆ ನಟಸಾರ್ವಭೌಮದಲ್ಲಿಯೂ  ನಟಿಸಿದರು. ಇನ್ನು ಟಿಲ್ಲು ಸ್ಕ್ವೇರ್‌ ಕುರಿತು ಹೇಳುವುದಾದರೆ, ಇದರಲ್ಲಿ  ಸಿಧು ನಾಯಕನಾಗಿದ್ದಾರೆ.  ಮಲ್ಲಿಕ್‌ ರಾಮ್‌ ನಿರ್ದೇಶನದ ಈ ಚಿತ್ರಕ್ಕೆ ಸಿತಾರಾ ಎಂಟರ್‌ಟೈನ್‌ಮೆಂಟ್‌ ಬಂಡವಾಳ ಹೂಡಿದೆ. ಸದ್ಯ ಬಿಡುಗಡೆ ಆಗಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಲಿಪ್‌ಲಾಪ್‌ ದೃಶ್ಯಗಳಲ್ಲಿ ಅನುಪಮಾ ಮಿಂಚು ಹರಿಸಿದ್ದಾರೆ. ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರೀತಿ, ಕಾಮದ ಟಿಪ್ಸ್​ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್​ ವಿಷ್ಯ ಹೇಳಿದ ನಟಿ ಜೀನತ್​ ಅಮಾನ್​!

click me!