Katrina Kaif wedding: ಸೆಲೆಬ್ರಿಟಿ ವಿವಾಹ ಸಂದರ್ಭ ಭದ್ರತೆ ಕುರಿತು ರಾಜಸ್ಥಾನ ಜಿಲ್ಲಾಡಳಿತ ಸಭೆ

Published : Dec 03, 2021, 10:53 PM ISTUpdated : Dec 03, 2021, 11:06 PM IST
Katrina Kaif wedding: ಸೆಲೆಬ್ರಿಟಿ ವಿವಾಹ ಸಂದರ್ಭ ಭದ್ರತೆ ಕುರಿತು ರಾಜಸ್ಥಾನ ಜಿಲ್ಲಾಡಳಿತ ಸಭೆ

ಸಾರಾಂಶ

Katrina Kaif Wedding: ರಾಜಸ್ಥಾನ ಜಿಲ್ಲಾಡಳಿತದಿಂದ ಮಹತ್ವದ ಸಭೆ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಬಗ್ಗೆ ಅಧಿಕಾರಿಗಳ ಚರ್ಚೆ

ಬಾಲಿವುಡ್ (Bollywood)ನಟಿ ಕತ್ರೀನಾ ಕೈಫ್(Katrina Kaif) ಹಾಗೂ ನಟ ವಿಕ್ಕಿ ಕೌಶಲ್ ಮದುವೆ ಸಂಭ್ರಮ ಶುರುವಾಗಿದೆ. ಮದುವೆ(Wedding) ಸಿದ್ಧತೆಗಳೆಲ್ಲವೂ ಭರದಿಂದ ಸಾಗಿದ್ದು ರಾಜಸ್ಥಾನದಲ್ಲಿ ಸೆಲೆಬ್ರಿಟಿ ಕಪಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಕತ್ರೀನಾ ವಿವಾಹ ಕುರಿತು ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಟಿ ತಮ್ಮ ವಿವಾಹದ ಬಗ್ಗೆ ಒಂದೇ ಒಂದು ಸೂಚನೆ ನೀಡದ ಹೊರತಾಗಿಯೂ ಮದುವೆ ಸುದ್ದಿಗಳು ತಿಂಗಳ ಹಿಂದೆಯೇ ಸದ್ದು ಮಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಈಗ ರಾಜಸ್ಥಾನದಲ್ಲಿ ವಿವಾಹದ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಸವಾಲು ಜಿಲ್ಲಾಡಳಿತ ಮೇಲಿದೆ. ಡಿ.7ರಿಂದ ಆರಂಭವಾಗಿ 9ರ ತನಕ ನಡೆಯುವ ಮದುವೆ ಕಾರ್ಯಕ್ರಮದ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಬಗ್ಗೆ ರಾಜಸ್ಥಾನ(Rajasthan) ಜಿಲ್ಲಾಡಳಿತ ಸಭೆ(Meeting) ನಡೆಸಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಕುರಿತ ಬಝ್ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಆದರೂ ಸ್ಟಾರ್ ದಂಪತಿಗಳು ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಡಿಸೆಂಬರ್ 9 ಹತ್ತಿರವಾಗುತ್ತಿದ್ದಂತೆ, ಇದೀಗ ರಾಜಸ್ಥಾನ ಜಿಲ್ಲಾಡಳಿತ ಬಾಲಿವುಡ್ ಮದುವೆಗೆ ಸಿದ್ಧವಾಗುತ್ತಿರುವುದು ವರದಿಯಾಗಿದೆ. ಸವಾಯಿ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಮುಂದಿನ ವಾರ ವಿವಾಹವಾಗಲಿರುವ ವಿಕ್ಕಿ ಮತ್ತು ಕತ್ರಿನಾ, ಬಿಗ್‌ಡೇ ಸಿದ್ಧತೆಗಳಿಗಾಗಿ ಸ್ಥಳೀಯ ಅಧಿಕಾರಿಗಳನ್ನು ಓವರ್‌ಡ್ರೈವ್‌ಗೆ ಕಳುಹಿಸಿದ್ದಾರೆ.

ಸುದ್ದಿ ಸಂಸ್ಥೆ ಐಎಎನ್‌ಎಸ್‌ನ ವರದಿಯ ಪ್ರಕಾರ, ಹೈ-ಪ್ರೊಫೈಲ್ ವಿವಾಹದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಗಳು ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಲು ಶುಕ್ರವಾರ ಬೆಳಗ್ಗೆ 10.15 ಕ್ಕೆ ಸಭೆ ಕರೆಯುವಂತೆ ಜಿಲ್ಲಾಡಳಿತ ಗುರುವಾರ ಆದೇಶ ಹೊರಡಿಸಿತ್ತು.

Katrina -Vicky wedding: ಸೊಸೆ ಆಗೋಳ ಬಗ್ಗೆ ದೊಡ್ಡೋರಿಗಿಲ್ಲ ಖುಷಿ!

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳು, ಹೋಟೆಲ್ ಪ್ರತಿನಿಧಿಗಳು, ಅರಣ್ಯ ರಕ್ಷಕರು ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೂರಜ್ ಸಿಂಗ್ ನೇಗಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿತ್ತು. ಯಾವುದೇ ಪಾಪರಾಜಿ ಅಥವಾ ಮಾಧ್ಯಮದ ಮೂಲಕ ಫೋಟೊ ವಿಡಿಯೋ ಲೀಕ್  ತಪ್ಪಿಸಲು ದಂಪತಿಗಳು ಬೆಲೆಬಾಳುವ ಹೋಟೆಲ್‌ಗೆ ಹೆಲಿಕಾಪ್ಟರ್ ಪ್ರಯಾಣವನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಮದುವೆಯ ಸಂಭ್ರಮಾಚರಣೆಯ ದೃಶ್ಯಗಳನ್ನು ಕದಿಯಲು ಮಾಧ್ಯಮದ ಸಿಬ್ಬಂದಿ ಬಳಸಬಹುದಾದ ಡ್ರೋನ್‌ಗಳನ್ನು ಹೋಟೆಲ್ ಭದ್ರತೆಯು 'ಶೂಟ್ ಡೌನ್' ಮಾಡುತ್ತದೆ ಎಂದು ಹೇಳಲಾಗಿದೆ.

ಕ್ಯಾಟ್ ಮತ್ತು ವಿಕ್ಕಿ 2019 ರ ನಂತರ ಲವ್‌ನಲ್ಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ದೀಪಾವಳಿ ಪಾರ್ಟಿಯಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡ ನಂತರ ಅಂಬಾನಿಯವರ ಹೋಳಿ ಬ್ಯಾಷ್‌ನಲ್ಲಿ ಒಟ್ಟಿಗೆ ಭಾಗವಹಿಸಿದ ನಂತರವೇ ಅವರ ಸಂಬಂಧದ ಬಗ್ಗೆ ಹೆಚ್ಚು ಸುದ್ದಿ ಕೇಳಿ ಬರಲಾರಂಭಿಸಿತು.

ಹೋಟೆಲ್‌ಗಳು ಫುಲ್:

ಸ್ಟಾರ್ ಜೋಡಿಯ ವಿವಾಹಕ್ಕಾಗಿ 40 ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ರೆಸಾರ್ಟ್, ಬರ್ವಾರದಲ್ಲಿ ಸೋವೈ ಮಾಧೋಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ. ರಣಥಂಬೋರ್‌ನಲ್ಲಿ(Ranathambor) ಸುಮಾರು 45 ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಡಿಸೆಂಬರ್ 7 ರಿಂದ ಇಲ್ಲಿಗೆ ಬಹಳಷ್ಟು ಸ್ಟಾರ್‌ಗಳು ಆಗಮಿಸಲಿದ್ದಾರೆ. ಸಲ್ಮಾನ್ ಖಾನ್ ಕೂಡ ಡಿಸೆಂಬರ್ 9 ರಂದು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಅವರು ಬರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?