ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಕರೀನಾ ಡೆಲಿವರಿ ಡೇಟ್ಸ್ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಸೈಫ್
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪಟೌಡಿ ಕುಡಿ ತೈಮೂರ್ ಅಲಿ ಖಾನ್ ಪಟೌಡಿಗೆ ತಮ್ಮನೋ, ತಂಗಿಯೋ ಬರುವುದರಲಿದ್ದಾರೆ.
ಹಾಗೆಯೇ ಸೈಪ್ ಮೊದಲ ಪತ್ನಿಯ ಮಕ್ಕಳಾದ ನಟಿ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಕೂಡಾ ತಮ್ಮನನ್ನೋ, ತಂಗಿಯನ್ನೋ ಸ್ವಾಗತಿಸಲಿದ್ದಾರೆ. ತಮ್ಮ ಮ್ಯಾಟರ್ನಿಟಿ ಸ್ಟೈಲ್ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದಾರೆ ನಟಿ.
KGF ನಿರ್ದೇಶಕರ ನೆಕ್ಸ್ಟ್ ಸಿನಿಮಾ ಸಲಾರ್‌ನಲ್ಲಿ ಪ್ರಭಾಸ್ ಜೊತೆ ಶ್ರುತಿ ರೊಮ್ಯಾನ್ಸ್
ಕರೀನಾ ಡೆಲಿವರಿ ಡೇಟ್ ಯಾವಾಗ ಎಂಬ ಕುತೂಹಲಕ್ಕೆ ಸೈಫ್ ಅಲಿ ಖಾನ್ ಉತ್ತರ ಕೊಟ್ಟಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಕರೀನಾ ಕಪೂರ್ ತಾಯಿಯಾಗಲಿರುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಅಂದರೆ ಮುಂದಿನ ತಿಂಗಳು. ಮಾಟರ್ನಿಟಿ ಫ್ಯಾಷನ್ ಮೂಲಕ ಸುದ್ದಿಯಾಗುತ್ತಲೇ ಇರೋ ಕರೀನಾ ಕಪೂರ್ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಕಳೆಗಟ್ಟಿದೆ. ಇನ್ನು ಸೈಫ್ ಪತ್ನಿಯ ಕಾಳಜಿ ವಹಿಸೋದರ ಜೊತೆಜೊತೆಗೇ ಶೂಟಿಂಗ್‌ಗಳಲ್ಲಿಯೂ ಬ್ಯುಸಿ ಇದ್ದಾರೆ.