ವಿಕ್ಕಿ ಕೌಶಲ್ ನೋಡಿ ಯಾರೀತ ಎಂದು ತಲೆಕೆಡಿಸಿಕೊಂಡಿದ್ದೆ; ಕತ್ರಿನಾ ಕೈಫ್

Published : Oct 19, 2022, 01:00 PM IST
 ವಿಕ್ಕಿ ಕೌಶಲ್ ನೋಡಿ ಯಾರೀತ ಎಂದು ತಲೆಕೆಡಿಸಿಕೊಂಡಿದ್ದೆ; ಕತ್ರಿನಾ ಕೈಫ್

ಸಾರಾಂಶ

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಮತ್ತ ವಿಕ್ಕಿ ಕೌಶಲ್ ಮದುವೆಯಾಗಿ ಒಂದು ವರ್ಷ ಪೂರೈಸುತ್ತಿದೆ. ಈ ವೇಳೆ ಕತ್ರಿನಾ ಪತಿಯ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಮತ್ತ ವಿಕ್ಕಿ ಕೌಶಲ್ ಮದುವೆಯಾಗಿ ಒಂದು ವರ್ಷ ಪೂರೈಸುತ್ತಿದೆ. ಡಿಸೆಂಬರ್ ಬಂದರೆ ಭರ್ತಿ ಒಂದು ವರ್ಷ ಆಗುತ್ತೆ. ಇಬ್ಬರೂ ಪ್ರೀತಿಸಿ ಮದುವೆಯಾದವರು. ಸದ್ಯ ಈ ಸ್ಟಾರ್ ಜೋಡಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಈ ವೇಳೆ ಕತ್ರಿನಾ ಸಂದರ್ಶನವೊಂದರಲ್ಲಿ ಪತಿ ವಿಕ್ಕಿ ಕೌಶಲ್ ಅವರ ನಟನೆ ನೋಡಿ ತಲೆಕೆಡಿಸಿಕೊಂಡಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ವಿಕ್ಕಿ ಕೌಶಲ್ ನಟನೆ ನೋಡಿ ಯಾರೀತ ಎಂದು ಕೇಳಿದ್ದೆ ಎಂದು ಕತ್ರಿನಾ ಹೇಳಿದ್ದಾರೆ. 2018ರಲ್ಲಿ ರಿಲೀಸ್ ಆಗಿದ್ದ ವಿಕ್ಕಿ ಕೌಶಲ್ ನಟನೆಯ ಮನ್ಮರ್ಜಿಯಾನ್‌ ನೋಡಿ ಇಷ್ಟು ಅದ್ಭುತವಾಗಿ ಮಾಡಿದ್ದಾರಲ್ಲಾ ಎಂದು ನಿರ್ಮಾಪಕರ ಬಳಿ  ಹೇಳಿದ್ದೆ ಎಂದು ಕತ್ರಿನಾ ಹೇಳಿದ್ದಾರೆ.  

ಮನ್ಮರ್ಜಿಯಾನ್‌ ನೋಡಿದ ಬಳಿಕ ವಿಕ್ಕಿ ಕೌಶಲ್ ಕಡೆ ಗಮನ ಹೆಚ್ಚಾಯಿತು ಎಂದು ಕತ್ರಿನಾ ಕೈಫ್ ಹೇಳಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕತ್ರಿನಾ, 'ನನಗೆ ಆನಂದ್ ಎಲ್ ರೈ (ನಿರ್ಮಾಪಕ) ಅವರು ಮನ್ಮರ್ಜಿಯಾನ್‌ ಸಿನಿಮಾದ ಪ್ರೋಮೋ ತೋರಿಸಿದರು. ನನಗೆ ಇನ್ನು ನೆನಪಿದೆ, ನಾನು ಈ ವ್ಯಕ್ತಿ ಯಾರು? ಎಂದು ಹೇಳಿದ್ದೆ. ಅದ್ಭುತವಾಗಿ ನಟಿಸಿದ್ದರು.  ತುಂಬಾ ನೈಜವಾಗಿ ನಟಿಸಿದ್ದರು. ಅವರಲ್ಲಿ ಅಪಾರ ಪ್ರತಿಭೆ ಇದೆ' ಎಂದು ಹೇಳಿದರು. ಅಲ್ಲಿಂದ ವಿಕ್ಕಿ ಕೌಶಲ್ ಮೇಲೆ ಗಮನ ಹೆಚ್ಚಾಯಿತು ಎಂದು ಕತ್ರಿನಾ ಹೇಳಿದ್ದಾರೆ. 

ಅಂದಹಾಗೆ  ಮನ್ಮರ್ಜಿಯಾನ್‌ ಸಿನಿಮಾಗೂ ಮೊದಲು ವಿಕ್ಕಿ ಕೌಶಲ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಲಸ್ಟ್ ಸ್ಟೋರೀಸ್, ಮಸಾನ್, ರಾಜಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ವಿಕ್ಕಿ ನಟನೆಯ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದ್ದವು. ಸದ್ಯ ವಿಕ್ಕಿ ಕೌಶಲ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೋವಿಂದ ನಾಮ್ ಮೇರಾ, ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ, ದುನ್ಕಿ ಸೇರಿದಂತೆ ಅನೇಕ ಸಿನಿಮಾಗಳಿವೆ. ಕೊನೆಯದಾಗಿ ವಿಕ್ಕಿ ಕೌಶಲ್ ಸರ್ದಾರ್ ಉದಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

ಶೇವ್ ಮಾಡ್ಕೊಂಡು ಲುಕ್ ಬದಲಾಯಿಸಿದ ವಿಕ್ಕಿ, ಮೊದಲ ಕರ್ವಾ ಚೌತ್ ಸಂಭ್ರಮದಲ್ಲಿ ಕತ್ರೀನಾ

ಇನ್ನು ಕತ್ರಿನಾ ಕೈಫ್ ಸದ್ಯ ಫೋನ್ ಬೂತ್ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾ ನವೆಂಬರ್ 4ರಂದು ರಿಲೀಸ್ ಆಗುತ್ತಿದೆ. ವಿಜಯ್ ಸೇತುಪತಿ ಜೊತೆ ಮೇರಿ ಕ್ರಿಸ್ಮಸ್ ಹಾಗೂ ಸಲ್ಮಾನ್ ಖಾನ್ ಜೊತೆ ಟೈಗರ್ 3 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

ಪತಿ ವಿಕ್ಕಿ ಕೌಶಲ್‌ ಜೊತೆಯ ರೊಮ್ಯಾಂಟಿಕ್ ಪೋಟೋ ಶೇರ್‌ ಮಾಡಿದ ಕತ್ರಿನಾ ಕೈಫ್‌

ರಾಜಸ್ಥಾನದಲ್ಲಿ ಮದುವೆ 

ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆ ಬಳಿಕ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?