ಮುಂಬೈನ ಈ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ ಆಲಿಯಾ; ಆಸ್ಪತ್ರೆಗು ರಿಷಿ ಕಪೂರ್‌ಗೂ ಇದೆ ಲಿಂಕ್

Published : Oct 18, 2022, 02:49 PM IST
ಮುಂಬೈನ ಈ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ ಆಲಿಯಾ; ಆಸ್ಪತ್ರೆಗು ರಿಷಿ ಕಪೂರ್‌ಗೂ ಇದೆ ಲಿಂಕ್

ಸಾರಾಂಶ

ಅಲಿಯಾ ಭಟ್ ಯಾವಾಗ ಮಗುವಿಗೆ ಜನ್ಮ ನೀಡಲಿದ್ದಾರೆ, ಯಾವ ಆಸ್ಪತ್ರೆ ಎನ್ನುವ ಮಾಹಿತಿ ಈಗ ರಿವೀಲ್ ಆಗಿದೆ. ಅಂದಹಾಗೆ ಅಲಿಯಾ ಭಟ್ ತನ್ನ ಮಗುವಿಗೆ ಜನ್ಮ ನೀಡುವ ಆಸ್ಪತ್ರೆಗು ಮಾವ ರಿಷಿ ಕಪೂರ್ ಅವರಿಗೂ ಸಂಪರ್ಕವಿದೆ. 

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿ ಅಲಿಯಾ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ. ಅಲಿಯಾ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಅಲಿಯಾ ಮತ್ತ ರಣಬೀರ್ ದಂಪತಿ ಪೋಷಕರಾಗುತ್ತಿದ್ದಾರೆ. ಪುಟ್ಟ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಅಂದಹಾಗೆ ಅಲಿಯಾ ಭಟ್ ಯಾವಾಗ ಮಗುವಿಗೆ ಜನ್ಮ ನೀಡಲಿದ್ದಾರೆ, ಯಾವ ಆಸ್ಪತ್ರೆ ಎನ್ನುವ ಮಾಹಿತಿ ಈಗ ರಿವೀಲ್ ಆಗಿದೆ. ಅಂದಹಾಗೆ ಅಲಿಯಾ ಭಟ್ ತನ್ನ ಮಗುವಿಗೆ ಜನ್ಮ ನೀಡುವ ಆಸ್ಪತ್ರೆಗು ಮಾವ ರಿಷಿ ಕಪೂರ್ ಅವರಿಗೂ ಸಂಪರ್ಕವಿದೆ. 

ಅಲಿಯಾ ಡೆಲಿವರಿ ಯಾವಾಗ?

ಆಲಿಯಾ ಭಟ್ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ತುಂಬು ಗರ್ಭಿಣಿ ಆಲಿಯಾ ನವೆಂಬರ್ ಅಂತ್ಯದಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಆಂಗ್ಲ ವೆಬ್ ಸೈಟ್ ಪಿಂಕ್ ವಿಲ್ಲಾ ವರದಿ ಮಾಡಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ಅಲಿಯಾ ಭಟ್ ಒಂದು ವರ್ಷಗಳ ಕಾಲ ಸಂಪೂರ್ಣ ರಜೆ ಪಡೆಯಲಿದ್ದಾರೆ ಎನ್ನಲಾಗಿದೆ. ಅಲಿಯಾ ಗರ್ಭಿಣಿ ಆಗಿದ್ದಾಗಲು ಸಿನಿಮಾ ಶೂಟಿಂಗ್‌ಗಳಲ್ಲಿ ಭಾಗಿಯಾಗಿದ್ದರು. ಬಾಲಿವುಡ್ ಸೇರಿದಂತೆ ಹಾಲಿವುಡ್ ಸಿನಿಮಾದ ಶೂಟಿಂಗ್‌ ಕೂಡ ಮಾಡಿದ್ದರು. ಹಾಗಾಗಿ ಮಗುವಿಗೆ ಜನ್ಮ ನೀಡಿದ ಬಳಿಕ ಒಂದು ವರ್ಷಗಳ ಕಾಲ ಸಂಪೂರ್ಣ ವಿರಾಮ ಪಡೆದು ತನ್ನ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಲಿದ್ದಾರೆ. 

Alia Bhatt 10 ವರ್ಷದ ಸಿನಿ ಜರ್ನಿ, ಬಿ-ಟೌನ್‌ ನಿರ್ಮಾಪಕಿಯರ ಜೀವನ ತುಂಬಾ ಕಷ್ಟ: ಆಲಿಯಾ ಭಟ್

ಯಾವ ಆಸ್ಪತ್ರೆ?

ಅಂದಹಾಗೆ ಅಲಿಯಾ ಭಟ್ ತನ್ನ ಹೆರಿಗೆಗೆ ಆಯ್ಕೆ ಮಾಡಿಕೊಂಡ ಆಸ್ಪತ್ರೆ ಮುಂಬೈನ ಎಚ್ ಎನ್ ರಿಲಯನ್ಸ್ ಫೌಂಡೇಶನ್. ಇದೇ ಆಸ್ಪತ್ರೆಯಲ್ಲಿ ಅಲಿಯಾ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ ಅಲಿಯಾ ಇದೇ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಅವರ ಮಾವ, ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಕೊನೆಯುಸಿರೆಳೆದಿದ್ದು ಅದೇ ಆಸ್ಪತ್ರೆ. ಹಾಗಾಗಿ ಅದೇ ಆಸ್ಪತ್ರೆಯಲ್ಲಿ ಅಲಿಯಾ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. 

ಬೇಬಿ ಶವರ್‌ ಫೋಟೋಗಳನ್ನು ಹಂಚಿಕೊಂಡ ಆಲಿಯಾ ಭಟ್‌!

ಸದ್ಯ ಅಲಿಯಾ ಭಟ್ ಯಾವುದೇ ಸಿನಿಮಾಗಳಲ್ಲಿ ತೊಡಗಿಕೊಂಡಿಲ್ಲ. ಹಾಗಂತ ಸುಮ್ಮನೆ ಕುಳಿತಿಲ್ಲ. ಅನೇಕ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಅನೇಕ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಅಲಿಯಾ ಮತ್ತು ರಣಬೀರ್ ದಂಪತಿ ಜೊತೆಗೆ ಅನೇಕ ಸ್ಟಾರ್ಸ್ ಕೂಡ ನಟಿಸಿದ್ದರು. ಸದ್ಯ ಮೊದಲ ಭಾಗ ರಿಲೀಸ್ ಆಗಿದ್ದು ಎರಡನೇ ಭಾಗ ರಿಲೀಸ್‌ಗೆ ರೆಡಿಯಾಗುತ್ತಿದೆ. ಆಲಿಯಾ ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಶೂಟಿಂಗ್ ಅರ್ಧಕ್ಕೆ ಮುಗಿಸಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!