ಶಿಲ್ಪಾ ಶೆಟ್ಟಿ, ಕತ್ರೀನಾ, ಅನುಷ್ಕಾ, ಅಮಿತಾಬ್ ಬಚ್ಚನ್.. ಈ ಸೆಲೆಬ್ರಿಟಿಗಳ ನಿಜವಾದ ಹೆಸರು ಕೇಳಿದ್ರೆ ಅಚ್ಚರಿಯಾಗತ್ತೆ!

By Suvarna NewsFirst Published Jan 11, 2024, 5:27 PM IST
Highlights

'ಹೆಸರಲ್ಲೇನಿದೆ' ಗುಲಾಬಿಗೆ ಬೇರೆ ಹೆಸರಿಟ್ಟರೂ ಅದರ ಗಂಧ, ರೂಪ ಅದೇ ಆಗಿರುತ್ತದೆ ಎನ್ನುತ್ತಾನೆ ಷೇಕ್ಸ್‌ಪಿಯರ್. ಆದರೆ ಈ ಸೆಲೆಬ್ರಿಟಿಗಳನ್ನು ಕೇಳಿ, ಅವರ ಜೀವನವು ಅವರ ಹೆಸರಿನ ಸುತ್ತ ಸುತ್ತುತ್ತದೆ. 

ಹೆಸರಲ್ಲೇನಿದೆ ಎನ್ನುತ್ತಾನೆ ಷೇಕ್ಸ್‌ಪಿಯರ್. ಹೌದಲ್ಲವೇ ಹೆಸರಿಗೂ ಜೀವನಕ್ಕೂ ಸಂಬಂಧವಿಲ್ಲ. ಇದ್ದಿದ್ದರೆ ಶಾಂತಿ ಎಂದು ಹೆಸರಿಟ್ಟುಕೊಂಡವರ ಮನಸ್ಸಲ್ಲಿ ಅಶಾಂತಿಯೇ ಬರಬಾರದಿತ್ತು, ಸತ್ಯ ಎಂಬ ಹೆಸರಿನವರು ಸುಳ್ಳು ಹೇಳಲೇಬಾರದಿತ್ತು ಎಂದುಕೊಳ್ಳುವವರೂ ಇದ್ದಾರೆ. ಆದರೆ, ಸೆಲೆಬ್ರಿಟಿಗಳು, ಸಾಮಾಜಿಕ ಜೀವನದಲ್ಲಿ ಹೆಸರು ಮಾಡಬೇಕೆನ್ನುವವರ ಬಗ್ಗೆ ಕೇಳಿ- ಅವರ ಜೀವನ ಅವರ ಹೆಸರಿನ ಸುತ್ತಲೇ ಸುತ್ತುತ್ತದೆ. ಹಾಗಾಗಿ, ಶೋಬಿಜ್‌ನಲ್ಲಿರುವ ಸೆಲೆಬ್ರಿಟಿಗಳು ಫೀಲ್ಡಿಗಿಳಿವ ಮುನ್ನ ತಮ್ಮ ಹೆಸರನ್ನು ಅದೃಷ್ಟಕ್ಕಾಗಿ ಬದಲಿಸಿಕೊಳ್ಳುವುದುಂಟು. 

ಹಾಗೆ ಬದಲಿಸಿಕೊಂಡು ಜನಪ್ರಿಯರಾದವರ ಸಂಖ್ಯೆ ನೋಡುತ್ತಿದ್ದರೆ ನಿಜಕ್ಕೂ ಹೆಸರಿನಲ್ಲಿ ಎಲ್ಲವೂ ಇದೆ ಎನಿಸುತ್ತದೆ. 

Latest Videos

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ ಅವರ ಹೆಸರು ರಾಜ್ ಅಥವಾ ದೀಪಕ್ ಎಂದು ಸಾಮಾನ್ಯವಾಗಿದ್ದಿದ್ದರೆ ಅವರನ್ನು ನಾವು ಇಷ್ಟು ದೊಡ್ಡ ವ್ಯಕ್ತಿಯಾಗಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಿಜವೆಂದರೆ ಅಮಿತಾಭ್ ಬಚ್ಚನ್ ಅವರ ನಿಜ ನಾಮಧೇಯ 'ಇಂಕ್ವಿಲಾಬ್ ಶ್ರೀವಾಸ್ತವ'!

ಸಲ್ಮಾನ್ ಖಾನ್
ಬಾಲಿವುಡ್ ನ ಭಾಯ್, ಸಲ್ಮಾನ್ ಖಾನ್ ಎಲ್ಲರ ಮನಗೆದ್ದ ವ್ಯಕ್ತಿ. ಆದರೆ ಅವರ ಹೆಸರು ಅವರ ನಿಜವಾದ ಹೆಸರಿನ ಚಿಕ್ಕ ಆವೃತ್ತಿಯಾಗಿದೆ ಎಂದು ನಿಮಗೆ ತಿಳಿದಿದೆಯೇ ? ಹೌದು, ಅವರ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್. ಆತ ಹೆಸರನ್ನು ಹಾಗೇ ಇಟ್ಟುಕೊಂಡಿದ್ದರೆ ಜನರು ಅವರನ್ನು ARSSK ಭಾಯ್ ಎಂದು ಕರೆಯುತ್ತಿದ್ದರೇನೋ!

ರಜನಿಕಾಂತ್
ಅವರನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರು ಪ್ರೀತಿಸುತ್ತಾರೆ. ಆದರೆ ಅವರು ಹೃದಯದಿಂದ ಮರಾಠರು ಮತ್ತು ಅವರ ಹೆಸರು ಶಿವಾಜಿ ರಾವ್ ಗಾಯಕ್ವಾಡ್ ಎಂದಾಗಿತ್ತು!

ಯಶ್​ ಜೊತೆ ಟಾಕ್ಸಿಕ್​ನಲ್ಲಿ ಕರೀನಾ ಕಪೂರ್​ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್​ಡೇಟ್​ ಏನು?

ಅಕ್ಷಯ್ ಕುಮಾರ್
ಅವರು ತಮ್ಮ ನಿಜವಾದ ಹೆಸರು ರಾಜೀವ್ ಹರಿ ಓಂ ಭಾಟಿಯಾವನ್ನು ರೀಲ್‌ಗಾಗಿ ಬಿಟ್ಟುಕೊಟ್ಟರು. ಆದರೆ ಅವರ ಹೋಮ್ ಪ್ರೊಡಕ್ಷನ್‌ಗೆ ಹರಿ ಓಂ ಎಂಟರ್‌ಟೈನ್‌ಮೆಂಟ್‌ನ ಹೆಸರನ್ನು ಬಳಸಿದ್ದಾರೆ. 

ಹೃತಿಕ್ ರೋಷನ್
ಹೃತಿಕ್  ಮೂಲ ಹೆಸರು ಹೃತಿಕ್ ನಾಗರತ್ ಎಂದು. 

ಶಿಲ್ಪಾ ಶೆಟ್ಟಿ
ಅಶ್ವಿನಿ ಶೆಟ್ಟಿ ಎಂಬ ಹೆಸರಿನೊಂದಿಗೆ ಬೆಳೆದ ಶಿಲ್ಪಾ, ಖ್ಯಾತಿ ಮತ್ತು ಅದೃಷ್ಟಕ್ಕಾಗಿ ಜ್ಯೋತಿಷಿ ಹೇಳಿದಂತೆ ಶಿಲ್ಪಾ ಶೆಟ್ಟಿ ಎಂದು ಹೆಸರು ಬದಲಾಯಿಸಿಕೊಂಡರು.

ಜಾನ್ ಅಬ್ರಹಾಂ
ಸರಿ, ಅವರ ನಿಜವಾದ ಹೆಸರು ನಿಮ್ಮನ್ನು ದಿಗ್ಭ್ರಮೆಗೊಳಿಸಬಹುದು - ಫರ್ಹಾನ್ ಅಬ್ರಹಾಂ. 

12th Fail ಸಿನಿಮಾಗೆ ಇವರೇ ಸ್ಫೂರ್ತಿ, ಹಳೆಯ ಫೋಟೋ ಹಂಚಿಕೊಂಡ ಐಪಿಎಸ್ ಜೋಡಿ

ಕತ್ರಿನಾ ಕೈಫ್
ಅವರು ಕತ್ರಿನಾ ಟರ್ಕೋಟ್ ಎಂಬ ಹೆಸರಿನೊಂದಿಗೆ ಬಾಲಿವುಡ್‌ಗೆ ಬಂದರು ಮತ್ತು ಭಾರತೀಯ ಪ್ರೇಕ್ಷಕರು ತಮ್ಮನ್ನು ಒಪ್ಪಿಕೊಳ್ಳಲಿ ಎಂಬ ಕಾರಣಕ್ಕೆ ಕೈಫ್ ಎಂದು ಬದಲಾಯಿಸಿದರು.

ಅಜಯ್ ದೇವಗನ್
ಮುಂಚಿನ ಹೆಸರು ವಿಶಾಲ್ ದೇವಗನ್  ಚೆನ್ನಾಗಿದೆಯೋ? ಅಜಯ್ ದೇವಗನ್ ಚೆನ್ನಾಗಿದೆಯೋ?

ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿಯ ಮುಂಚಿನ ಹೆಸರು ಸ್ವೀಟಿ ಶೆಟ್ಟಿ. ಅರೆ, ಇದ್ಯಾಕೋ ಪೆಟ್ ನೇಮ್ ಹಾಗಿದೆಯಲ್ಲವೇ? 

ಜಾಕಿ ಶ್ರಾಫ್
ಬಾಲಿವುಡ್‌ನ 'ಭೀಡು' ಹುಟ್ಟಿದ್ದು 'ಜೈಕಿಶನ್ ಕಾಕು ಭಾಯ್' ಎಂಬ ಹೆಸರಿನೊಂದಿಗೆ.

ಟೈಗರ್ ಶ್ರಾಫ್
ಅವರ ತಂದೆಯ ಹೆಜ್ಜೆಗಳನ್ನು ಅನುಸರಿಸಿ, ಜೈ ಹೇಮಂತ್ ಶ್ರಾಫ್ ತಮ್ಮ ಹೆಸರನ್ನು ಟೈಗರ್ ಶ್ರಾಫ್ ಎಂದು ಬದಲಾಯಿಸಿಕೊಂಡರು.

ಶ್ರೀದೇವಿ
ಆಕೆಯ ನಿಜವಾದ ಹೆಸರು ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್! ಆಕೆ ಹೆಸರು ಬದಲಿಸಿಕೊಂಡು ಒಳ್ಳೆಯದೇ ಮಾಡಿದಳು ಎನ್ನುವಿರಾ? 

ಸನ್ನಿ ಲಿಯೋನ್
ಕರೆಂಜಿತ್ ಕೌರ್ ವೋಹ್ರಾ ಅಥವಾ ಸನ್ನಿ ಲಿಯೋನ್? ಯಾವುದು ಹೆಚ್ಚು ಚೆನ್ನಾಗಿದೆ?

ಕಿಯಾರಾ ಅದ್ವಾನಿ
ಆಲಿಯಾ ಅದ್ವಾನಿ ತನ್ನ ಹೆಸರನ್ನು ಕಿಯಾರಾ ಎಂದು ಬದಲಿಸಿಕೊಳ್ಳಲು ಮತ್ತೊಬ್ಬ ಆಲಿಯಾ ಬಾಲಿವುಡ್‌ನಲ್ಲಿರುವುದು ಕಾರಣವೇನೋ?!

click me!