'ದೋಬಾರಾ' ಆಸ್ಕರ್‌ಗೆ ಹೋಗಲಿದೆ; ಅನುರಾಗ್ ಕಶ್ಯಪ್‌ಗೆ ವ್ಯಂಗ್ಯವಾಡಿದ ವಿವೇಕ್ ಅಗ್ನಿಹೋತ್ರಿ

By Shruiti G KrishnaFirst Published Aug 19, 2022, 1:52 PM IST
Highlights

ಅನುರಾಗ್ ಕಶ್ಯಪ್ ವಿರುದ್ಧ ಗುಡುಗಿರುವ ವಿವೇಕ್ ಅಗ್ನಿಹೋತ್ರಿ ಅನುರಾಗ್ ಕಶ್ಯಪ್ ಅವರ ದೋಬಾರಾ ಸಿನಿಮಾ ಆಸ್ಕರ್ ಗೆ ಹೋಗಲಿದೆ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದ್ದಾರೆ. 

ಬಾಲಿವುಡ್ ಖ್ಯಾತ ನಟ ಅನುರಾಗ್ ಕಶ್ಯಪ್ ಮತ್ತು ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಡುವಿನ ಮಾತಿನ ವಾರ್ ಮುಂದುವರೆದಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಸ್ಕರ್ ಹೋಗಲು ತನ್ನ ಸಹಮತ ಇಲ್ಲ ಎಂದಿದ್ದ ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದರು. ಕಾಶ್ಮೀರ್ ಫೈಲ್ಸ್ ಸಿನಿಮಾ ವಿರುದ್ಧ ಅಭಿಯಾನ ಮಾಡಲಾಗುತ್ತಿದೆ. ಇದಕ್ಕೆ ಅನುರಾಗ್ ಕಶ್ಯಪ್ ಮುಂದಾಳತ್ವ ವಹಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮತ್ತೆ ಅನುಗಾರ್ ಕಶ್ಯಪ್ ವಿರುದ್ಧ ಗುಡುಗಿರುವ ವಿವೇಕ್ ಅಗ್ನಿಹೋತ್ರಿ ಅನುರಾಗ್ ಕಶ್ಯಪ್ ಅವರ ದೋಬಾರಾ ಸಿನಿಮಾ ಆಸ್ಕರ್ ಗೆ ಹೋಗಲಿದೆ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದ್ದಾರೆ. 

ಇಂಡಿಯಾ ಟುಡೇ ಜೊತೆ ಮಾತಾಡಿದ ವಿವೇಕ್ ಅಗ್ನಿಹೋತ್ರಿ, 'ಅನುರಾಗ್ ಅವರ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ದೋಬಾರಾ ಸಿನಿಮಾ ಈ ಬಾರಿ ಆಸ್ಕರ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಿನಿಮಾವಾಗಲಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಜನರು ಹೋಗಿ ದೋಬಾರಾ ಚಿತ್ರವನ್ನು ವೀಕ್ಷಿಸುತ್ತಾರೆ ಮತ್ತು ಕಾಶ್ಮೀರ ಫೈಲ್‌ಗಳಿಗಿಂತ ಹೆಚ್ಚು ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಆಸ್ಕರ್ ಪ್ರಶಸ್ತಿಗೆ ಹೋಗುತ್ತದೆ ಎಂದು ಭಾವಿಸುತ್ತೇವೆ' ಎಂದು ವ್ಯಂಗ್ಯವಡಿದರು. 

ಇದೇ ವಿವೇಕ್ ಅಗ್ನಿಹೋತ್ರಿ, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಅಥವಾ ಆರ್ ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಆಸ್ಕರ್‌ಗೆ ಭಾರತವನ್ನು ಪ್ರತಿನಿಧಿಸಿದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು. ಇದು ನನ್ನ ಕೈಯಲ್ಲಿಲ್ಲ. ತೀರ್ಪುಗಾರರ ತಂಡವಿರುತ್ತದೆ ಮತ್ತು ಆಸ್ಕರ್ ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿದೆ. ಯಾವ ಚಿತ್ರ ಹೋಗಬೇಕೆಂದು ನಿರ್ಧರಿಸುವ ನಂಬಲರ್ಹ ಜನರಿದ್ದಾರೆ. ಇದು ಕಳುಹಿಸಲು ಯೋಗ್ಯವಾಗಿದೆ ಎಂದು ಅವರು ಭಾವಿಸಿದರೆ, ಅವರು ಅದನ್ನು ಕಳುಹಿಸುತ್ತಾರೆ. ಇದು ದೊಡ್ಡ ವಿಷಯವಲ್ಲ. RRR ಹೋದರೆ ತುಂಬಾ ಖುಷಿಯಾಗುತ್ತೆ. ವಾಸ್ತವವಾಗಿ, ನೀವು ನನ್ನನ್ನು ಆಸ್ಕರ್ ಪ್ರಶಸ್ತಿಗೆ ಹೋಗಲು ಬಯಸುವ ಒಂದು ಚಲನಚಿತ್ರವನ್ನು ಕೇಳಿದರೆ, ಅದು ಆರ್ ಮಾಧವನ್ ಅವರ ರಾಕೆಟ್ರಿ' ಎಂದು ಹೇಳಿದರು. 

ದ್ವೇಷ ಹರಡುವ ಕಸ ಕಾಶ್ಮೀರ್ ಫೈಲ್ಸ್ ಆಸ್ಕರ್‌ಗೆ ಕಳಿಸಿದ್ರೆ ಭಾರತಕ್ಕೆ ಮುಜುಗರ; ಕೆನಡಾ ನಿರ್ದೇಶಕ

ಈ ದೇಶದಲ್ಲಿ ಶೋಷಣೆಗೆ ಒಳಗಾಗುತ್ತಿರುವುದು ಹಿಂದೂಗಳಷ್ಟೇ ಅಲ್ಲ, ಕೆಲವು ಶ್ರೇಷ್ಠ ವಿಜ್ಞಾನಿಗಳು ಕೂಡ ಕಿರುಕುಳಕ್ಕೊಳಗಾಗಿದ್ದಾರೆ ಎಂಬುದನ್ನು ಜಗತ್ತು ತಿಳಿದುಕೊಳ್ಳಬೇಕು ಎಂದು ವಿವೇಕ್ ಹೇಳಿದರು.

ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್

ಅನುರಾಗ್ ಕಶ್ಯಪ್ ಹೇಳಿದ್ದೇನು?

ಈ ವರ್ಷ ಭಾರತದಿಂದ ಆಸ್ಕರ್‌ಗೆ ಅಧಿಕೃತ ಆಯ್ಕೆಯಾಗುವ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತೆಲುಗಿನ ಆರ್ ಆರ್ ಆರ್  ಪರ ಬ್ಯಾಟ್ ಬೀಸಿದ್ದಾರೆ.  ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನುರಾಗ್ ಕಶ್ಯಪ್, 'ಆಸ್ಕರ್‌ಗೆ ಕಳುಹಿಸಲು ಭಾರತದಲ್ಲಿ ಅಂತಿಮವಾಗಿ 5 ಸಿನಿಮಾಗಳ ಪಟ್ಟಿಯಲ್ಲಿ ನನ್ನ ಆಯ್ಕೆ ಆರ್ ಆರ್ ಆರ್. ಯಾರು ಯಾವ ಸಿನಿಮಾವನ್ನು ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಕಾಶ್ಮೀರ ಫೈಲ್ಸ್ ಅಂತು ಆಗಿರಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದರು. 

click me!