
200 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ಸನ್ ಟಿವಿ ಮಾಲೀಕ ಹಾಗೂ ಜಯಲಲಿತಾ ಅವರ ಸೋದರಳಿಯ ಎಂದು ಪರಿಚಯಿಸಿಕೊಂಡಿದ್ದ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ. 'ಸುಕೇಶ್ ತನ್ನನ್ನು ಶೇಖರ್ ರತ್ನ ವೇಲಾ ಎಂದು ಪರಿಚಯಿಸಿಕೊಂಡರು ಮತ್ತು ಸನ್ ಟಿವಿಯ ಮಾಲೀಕ ಮತ್ತು ಜಯಲಲಿತಾ ಅವರ ಸೋದರಳಿಯ ಎಂದು ಪರಿಚಯಿಸಿಕೊಂಡಿದ್ದರು ಎಂದು ರಾ..ರಾ..ರಕ್ಕಮ್ಮ ನಟಿ ಮುಖಾಮುಖಿ ವಿಚಾರಣೆಯ ಸಮಯದಲ್ಲಿ ಸುಕೇಶ್ ಚಂದ್ರಶೇಖರ್ ಬಗ್ಗೆ ಬಾಯ್ಬಿಟ್ಟಿದ್ದಾರೆ.
ವಿಚಾರಣೆ ಸಮಯದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಇಬ್ಬರೂ ಚೆನ್ನೈನಲ್ಲಿ ಕೇವಲ ಎರಡು ಬಾರಿ ಭೇಟಿಯಾದರು ಮತ್ತು ಸುಮಾರು ಆರು ತಿಂಗಳ ಕಾಲ ದೂರವಾಣಿ ಸಂಪರ್ಕದಲ್ಲಿದ್ದೆವು ಎಂದು ಹೇಳಿಕೊಂಡರು. ಫೆಬ್ರವರಿ 2021 ರಿಂದ ಆಗಸ್ಟ್ 2021 ರವರೆಗೆ ಫೋನ್‌ನಲ್ಲಿ ಮಾತನಾಡಿರುವುದಾಗಿ ಜಾಕ್ವೆಲಿನ್ ಫರ್ನಾಂಡೀಸ್ ಹೇಳಿದರು. ಆದರೆ ಸೇಕೇಶ್ ಚಂದ್ರಶೇಖರ್ ಜನವರಿ-2021 ರಿಂದ ಆಗಸ್ಟ್ 2021 ರವರೆಗೆ ಎಂದು ಹೇಳಿದರು.
ಚಂದ್ರಶೇಖರ್‌ಗೆ ಸಂಬಂಧಿಸಿದ ಬಹುಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಹೆಸರಿಸಿ ಜಾರಿ ನಿರ್ದೇಶನಾಲಯ (ಇಡಿ) ಆರೋಪಟ್ಟಿ ಸಲ್ಲಿಸಿದೆ. ಆರೋಪ ಪಟ್ಟಿ ಸಲ್ಲಿಸಿದ ಒಂದು ದಿನದ ಬಳಿಕ ಜಾಕ್ವೆಲಿನ್ ಫರ್ನಾಂಡೀಸ್ ಪರ ವಕೀಲರು ನಟಿ 'ಪಿತೂರಿಯ ಬಲಿಪಶು' ಎಂದು ಹೇಳಿದ್ದಾರೆ.
ಇಡಿ ಮುಂದೆ ಜಾಕ್ವೆಲಿನ್ ಮತ್ತು ಸುಕೇಶ್ ಪೂರ್ತಿ ಕಥೆ ಬಯಲು; ನಟಿಗೆ ಹೆಚ್ಚಿದ ಸಂಕಷ್ಟ
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ನಡೆಸಿರುವ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ 10 ಕೋಟಿ ಮೌಲ್ಯದ ಉಡುಗೊರೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಸುಕೇಶ್ ಚಂದ್ರಶೇಖರ್, ರಾನ್‌ಬಾಕ್ಸಿಯ ಮಾಜಿ ಪ್ರವರ್ತಕ ಅದಿತಿ ಸಿಂಗ್ ಮತ್ತು ಶಿವಿಂದರ್ ಸಿಂಗ್ ಅವರಿಗೆ ವಂಚನೆ ಮಾಡಿದ ಆರೋಪದ ಮೇರೆಗೆ ದೆಹಲಿ ಪೊಲೀಸರು ಸುಕೇಶನ್ನು ಬಂಧಿಸಿದ್ದರು. ಚಂದ್ರಶೇಖರ್ ಹೊರತುಪಡಿಸಿ ಇಡಿ ಈ ಪ್ರಕರಣದಲ್ಲಿ ಅವರ ಪತ್ನಿ ಲೀನಾ ಮರಿಯಾ ಪಾಲ್, ಪಿಂಕಿ ಇರಾನಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದು ದೆಹಲಿ ನ್ಯಾಯಾಲಯಕ್ಕೆ ಎರಡು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ.
ಮಾದಕ ಕಪ್ಪುಡುಗೆಯಲ್ಲಿ ವಿಕ್ರಾಂತ್ ರೋಣಾ ನಟಿಯ ಹಾಟ್ ಲುಕ್!
ಜಾಕ್ವೆಲಿನ್ ಫರ್ನಾಂಡಿಸ್ ಪೋಸ್ಟ್
ಚಾರ್ಜ್ ಶೀಟ್ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದು, ಇದು ನನಗೆ ಪರೀಕ್ಷೆಯ ಸಮಯವಾಗಿದ್ದು, ಮತ್ತಷ್ಟು ಬಲಿಷ್ಠವಾಗುವುದಾಗಿ ಹೇಳಿದ್ದರು. ಡಿಯರ್ ಮಿ ಎಂದು ಪೋಸ್ಟ್ ಆರಂಭಿಸಿರುವ ಜಾಕ್ವೆಲಿನ್, ನಾನು ಬಲಿಷ್ಠವಾಗಿದ್ದೇನೆ, ನನ್ನನ್ನು ನಾನು ಒಪ್ಪಿಕೊಳ್ಳುತ್ತೇನೆ, ಎಲ್ಲವೂ ಸರಿಯಾಗಲಿದೆ. ನಾನು ನನ್ನ ಗುರಿಯನ್ನು ಸಾಧಿಸುತ್ತೇನೆ, ಕನಸನ್ನು ನನಸಾಗಿಸುತ್ತೇನೆ, ನನಗದು ಸಾಧ್ಯವಿದೆ ಎಂದು ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.