ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ; ಧರ್ಮದ ಬಗ್ಗೆ ಮಾತನಾಡಿದ್ದ ರಾಜಮೌಳಿಗೆ ಕಂಗನಾ ಬೆಂಬಲ

Published : Feb 19, 2023, 11:59 AM ISTUpdated : Feb 19, 2023, 12:06 PM IST
ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ; ಧರ್ಮದ ಬಗ್ಗೆ ಮಾತನಾಡಿದ್ದ ರಾಜಮೌಳಿಗೆ ಕಂಗನಾ ಬೆಂಬಲ

ಸಾರಾಂಶ

ಧರ್ಮದ ಬಗ್ಗೆ ಮಾತನಾಡಿದ್ದ ರಾಜಮೌಳಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಕಂಗನಾ ಆರ್ ಆರ್ ಆರ್ ನಿರ್ದೇಶಕರಿಗೆ ಬೆಂಬಲ ನೀಡಿದ್ದಾರೆ. 

ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ವಿಶ್ವದ ಗಮನ ಸೆಳೆದಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ನಾಟು ನಾಟು...ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದು ಬೀಗಿತ್ತು. ಇದೀಗ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತಿಮ ರೇಸ್ ನಲ್ಲಿದೆ. ಈ ನಡುವೆ ರಾಜಮೌಳಿ ನೀಡಿದ ಸಂದರ್ಶನ ಈಗ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ದಿ ನ್ಯೂಯಾರ್ಕರ್‌‌ಗೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಧರ್ಮದ ಬಗ್ಗೆ ಮಾತನಾಡಿದ್ದರು. ತಾನು ನಾಸ್ತಿಕ ಎನ್ನುವುದನ್ನು ಬಹಿರಂಗ ಪಡಿಸಿರುವ ರಾಜಮೌಳಿ ಧರ್ಮದಿಂದ ದೂರ ಉಳಿದಿರುವುದಾಗಿ ಹೇಳಿದ್ದಾರೆ. ಅಲ್ಲದೇ 'ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ' ಎಂದು ಎಸ್‌ಎಸ್ ರಾಜಮೌಳಿ ಹೇಳಿದ್ದರು. 

ರಾಜಮೌಳಿ ಅವರ ಈ ಮಾತುಗಳು ಅನೇಕರನ್ನು ಕೆರಳಿಸಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ಅನೇಕರು ರಾಜಮೌಳಿ ಅವರನ್ನು ಟೀಕಿಸುತ್ತಿದ್ದಾರೆ. ಬಾಹುಬಲಿ ನಿರ್ದೇಶಕರನ್ನು ಟೀಕಿಸಿದವರಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಎಚ್ಚರಿಕೆ ನೀಡಿದ್ದಾರೆ. ಆರ್ ಆರ್ ಆರ್ ನಿರ್ದೇಶಕರ ಪರ ಬ್ಯಾಟ್ ಬೀಸಿರುವ ಕಂಗನಾ, ಇದಕ್ಕೆ ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

'ಹಿಂದು ದೇವರ ಕಥೆಗಳನ್ನು ಓದಿ ಅನುಮಾನ ಬಂದವು..' ಧರ್ಮದ ಬಗ್ಗೆ ರಾಜಮೌಳಿ ಮಾತು!

'ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ಎಲ್ಲಾ ಕಡೆ ಬಾವುಟ ತೆಗೆದುಕೊಂಡು ಹೋಗಬೇಕಾಗಿಲ್ಲ. ನಮ್ಮ ಕ್ರಿಯೆಗಳು ಮಾತಿಗಿಂತ ಜೋರಾಗಿ ಮಾತನಾಡುತ್ತವೆ. ನಾವು ಎಲ್ಲರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇವೆ, ವಿಶೇಷವಾಗಿ ಬಲಪಂಥೀಯರು ಎಂದು ಕರೆಯುವವರಿಂದ ನಮಗೆ ಯಾವುದೇ ಬೆಂಬಲ ಸಿಗದ ಕಾರಣ, ನಾವು ಸಂಪೂರ್ಣವಾಗಿ ನಮ್ಮ ಕಾಲ ಮೇಲೆ ನಿಂತಿದ್ದೇವೆ. ದಯವಿಟ್ಟು ಕುಳಿತುಕೊಳ್ಳಿ, ಧೈರ್ಯ ಮಾಡಬೇಡಿ. ಮಳೆಯಲ್ಲೂ ಬೆಂಕಿಯಂತೆ ಇರುವ ರಾಜಮೌಳಿ ವಿರುದ್ಧ ಮಾತನಾಡಿದರೆ ನಾನು ಏನನ್ನೂ ಸಹಿಸುವುದಿಲ್ಲ. ಅವರು ಒಬ್ಬ ಮೇಧಾವಿ ಮತ್ತು ರಾಷ್ಟ್ರವಾದಿ. ಅವರು ನಮ್ಮ ಜೊತೆ ಇರೋದು ನಮ್ಮ ಪುಣ್ಯ' ಎಂದು ಹೇಳಿದ್ದಾರೆ. 

ನನಗೆ ಇತಿಹಾಸ ಗೊತ್ತಿಲ್ಲ, ಸ್ಕ್ರಿಪ್ಟ್ ಓದಿ ಅಳುನೇ ಬಂತು; ತಂದೆಯ RSS ಸ್ಕ್ರಿಪ್ಟ್‌ಗೆ ರಾಜಮೌಳಿ ರಿಯಾಕ್ಷನ್

ಧರ್ಮದ ಬಗ್ಗೆ ರಾಜಮೌಳಿ ಮಾತು 

'ಚಿಕ್ಕವನಾಗಿದ್ದಾಗ ಹಿಂದು ದೇವರ ಕುರಿತಾದ ಕಥೆಗಳನ್ನು ಕೇಳುವಾಗ ಹಾಗೂ ಓದುವಾಗ ಸಾಕಷ್ಟು ಅನುಮಾನಗಳು ಬರುತ್ತಿದ್ದವು. ಇದಾವುದೂ ಕೂಡ ನಿಜವಲ್ಲ ಎನ್ನುವ ಯೋಚನೆ ನನಗೆ ಬರುತ್ತಿದ್ದವು. ನಂತರ ನಾನು ನನ್ನ ಕುಟುಂಬದ ಧಾರ್ಮಿಕ ಅತ್ಯುತ್ಸಾಹದ ಒಳಗೆ ಸಿಕ್ಕಿಹಾಕಿಕೊಂಡೆ. ನಾನು ಧಾರ್ಮಿಕ ಗ್ರಂಥಗಳನ್ನು ಓದಲು ಪ್ರಾರಂಭಿಸಿದೆ, ತೀರ್ಥಯಾತ್ರೆಗೆ ಹೋಗಲು ಆರಂಭಿಸಿದೆ. ಕೇಸರಿ ಬಟ್ಟೆಯನ್ನು ಧರಿಸಿ ಕೆಲ ವರ್ಷಗಳ ಕಾಲ ಆಸ್ತಿಕನಾಗಿ ಸಂನ್ಯಾಸಿಯ ರೀತಿ ಬದುಕಿದೆ. ಆ ಬಳಿಕ ನನಗೆ ಕ್ರಿಶ್ಚಿಯನ್‌ ಧರ್ಮ ಸೆಳೆಯಿತು. ಇದಕ್ಕಾಗಿ ನನ್ನ ಸ್ನೇಹಿತರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಬೈಬಲ್‌ ಓದುತ್ತೇನೆ. ಚರ್ಚ್‌ಗೆ ಹೋಗುತ್ತೇನೆ. ಎಲ್ಲಾ ರೀತಿಯ ವಿಷಯಗಳನ್ನೂ ಕೂಡ ಅಧ್ಯಯನ ಮಾಡುತ್ತೇನೆ. ಕ್ರಮೇಣ, ಈ ಎಲ್ಲಾ ವಿಷಯಗಳು ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆ ಎಂದು ನನಗೆ ಅನಿಸಿದೆ' ಎಂದು ಅವರು ಹೇಳಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?