
ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಜೂನ್ 20 ಬೆಳಗ್ಗೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಅಭಿಮಾನಿಗಳು ಸಿನಿಮಾ ಗಣ್ಯರು, ಆಪ್ತರು ಸೇರಿದಂತೆ ಅನೇಕರು ವಿಶ್ ಮಾಡುತ್ತಿದ್ದಾರೆ. ತಾತ ಮೆಗಾಸ್ಟಾರ್ ಚಿರಂಜೀವಿ ಮೊಮ್ಮಗಳನ್ನು ಪ್ರೀತಿಯಿಂದ ಸ್ವಾಗತಿಸಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.
ನಿನ್ನೆ ಬೆಳಗ್ಗೆ ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ವೈದ್ಯಕೀಯ ಬುಲೆಟಿನ್ ಮೂಲಕ ಮಗು ಜನಿಸಿದ ಸುದ್ದಿಯನ್ನು ಬಹಿರಂಗ ಪಡಿಸಿದರು. ಹೇಳಿಕೆಯಲ್ಲಿ, 'ಉಪಾಸನಾ ಕಾಮಿನೇನಿ ಕೊನಿಡೇಲಾ ಮತ್ತು ರಾಮ್ ಚರಣ್ ಕೊನಿಡೇಲಾ 2023 ರ ಜೂನ್ 20 ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ' ಎಂದು ಬಹಿರಂಗ ಪಡಿಸಿದರು.
ರಾಮ್ ಚರಣ್ ಮತ್ತು ಉಪಾಸನಾ ಮಗಳ ಜಾತಕಫಲ ಈಗ ವೈರಲ್ ಆಗಿದೆ. ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಲಿಟ್ಲ್ ಪ್ರಿನ್ಸ್ ಮಂಗಳವಾರ, ಜೂನ್ 20, 1:49 AM ನಲ್ಲಿ ಜನಿಸಿದರು. ಇದು ರಾಮ್ ಚರಣ್ ಮತ್ತು ಉಪಾಸನಾ ಅವರನ್ನು ಪೋಷಕರಾಗಿ ನೋಡಲು ಹಲವಾರು ವರ್ಷಗಳಿಂದ ಕಾಯುತ್ತಿದ್ದ ಮೆಗಾ ಕುಟುಂಬಕ್ಕೆ ಇದು ಅತ್ಯಂತ ವಿಶೇಷ ದಿನವಾಗಿದೆ. ಅನೇಕ ವರ್ಷಗಳ ನಂತರ ದೇವರ ಆಶೀರ್ವಾದದಿಂದ ಅವರ ಆಸೆ ಈಡೇರಿದೆ. ಚರಣ್ ಅವರ ವೃತ್ತಿಜೀವನದ ಏರಿಕೆ, ಅವರ ಸಾಧನೆಗಳು ಮತ್ತು ಇತ್ತೀಚೆಗೆ ನಡೆದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಸೇರಿದಂತೆ ಎಲ್ಲಾ ಒಳ್ಳೆಯದಾಗುತ್ತಿದೆ. ಮಗುವಿನ ಅದೃಷ್ಟ ಮತ್ತು ಆಶೀರ್ವಾದ ಸಿಕ್ಕಿದೆ' ಎಂದು ಮೆಗಾ ಕುಟುಂಬ ಹೇಳಿದೆ ಎಂದು ವರದಿಯಾಗಿದೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಕುಟುಂಬ ಆಂಜನೇಯ ಸ್ವಾಮಿಯ ಭಕ್ತರು. ಅಲ್ಲದೇ ಮಂಗಳಕರ ಮಂಗಳವಾರದಂದು ಮಗು ಜನಿಸಿರುವುದು ಒಂದು ಆಶೀರ್ವಾದವಾಗಿದೆ. ಅಪೋಲೋ ಆಸ್ಪತ್ರೆಯ ಅತ್ಯುತ್ತಮ ವೈದ್ಯರ ತಂಡದಿಂದ ಹೆರಿಗೆ ಸುಗಮವಾಗಿ ನಡೆದಿದೆ ಎಂದು ಮೆಗಾ ಕುಟುಂಬ ಹೇಳಿದೆ. ಮಗು ಮಿಥುನಾ ರಾಶಿಯಲ್ಲಿ ಜನಿಸಿದೆ. ಇಂಥ ಮಕ್ಕಳು ವಿಶಿಷ್ಟ ಮತ್ತು ಆಸಕ್ತಿದಾಯಕ ಪಾತ್ರವನ್ನು ಹೊಂದಿದ್ದಾರೆ. ಅವರು ತಮ್ಮ ಪ್ರೀತಿಯ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಮೊಮ್ಮಗಳ ಆಗಮನ: ಭಾವುಕ ಪೋಸ್ಟ್ ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ
ವೈದ್ಯರ ಹೇಳಿಕೆ
ಅಪೋಲೋ ಆಸ್ಪತ್ರೆಯ ಡಾ.ಸುಮನಾ ಮನೋಹರ್ ಪ್ರತಿಕ್ರಿಯೆ ನೀಡಿ, ಉಪಾಸನಾ ಅವರು ಇಂದು ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೇಗ ಮನೆಗೆ ಹೋಗಲಿದ್ದಾರೆ. ಡಾ. ರೂಮಾ ಸಿನ್ಹಾ ಅವರು ಉಪಾಸನಾ ಅವರನ್ನು ಪರೀಕ್ಷಿಸುತ್ತಿದ್ದಾರೆ ಮತ್ತು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಿದ್ದಾರೆ. ಡಾ. ಲತಾ ಕಂಚಿ ಪಾರ್ಥಸಾರಥಿ ಅವರು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡಿದರು. ಉಪಾಸನಾ ಅವರು ಗರ್ಭಾವಸ್ಥೆಯಲ್ಲಿ ಆಹಾರ ಮತ್ತು ಫಿಟ್ನೆಸ್ನಲ್ಲಿ ತೀವ್ರ ಕಾಳಜಿ ವಹಿಸಿದರು. ಅವರ ಕಾಳಜಿ ಮತ್ತು ಮುನ್ನೆಚ್ಚರಿಕೆಗಳಿಂದಾಗಿ ಸುಲಭವಾಗಿ ಹೆರಿಗೆಯಾಯಿತು' ಎಂದು ಹೇಳಿದ್ದಾರೆ.
ಹೆಣ್ಣು ಮಗುವಿಗೆ ತಂದೆಯಾದ RRR ರಾಮ್ ಚರಣ್; ಮೆಗಾ ಫ್ಯಾಮಿಲಿಯಲ್ಲಿ ಫುಲ್ ಸಂಭ್ರಮ!
ರಾಮ್ ಚರಣ್ ಮತ್ತು ಉಪಾಸನಾ ದಂಪತಿ 2012 ರಲ್ಲಿ ಜೂನ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಮದುವೆಯಾಗಿ 10 ವರ್ಷಗಳ ಬಳಿಕ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಉಪಾಸನಾ ಗರ್ಭಿಣಯಾಗಿರುವ ವಿಚಾರವನ್ನು ಡಿಸೆಂಬರ್‌ನಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ಮಗಳು ಬಂದ ಖುಷಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.