Prithviraj ಸಿನಿಮಾದಿಂದ ರಜಪೂತ ಸಮುದಾಯದ ಭಾವನೆಗೆ ಧಕ್ಕೆಯಾಗಿದೆ; ಹೈಕೋರ್ಟ್‌ ಮೆಟ್ಟಿಲೇರಿದ ಕರಿನ್ ಸೇನೆ

Suvarna News   | Asianet News
Published : Feb 05, 2022, 02:36 PM IST
Prithviraj ಸಿನಿಮಾದಿಂದ ರಜಪೂತ ಸಮುದಾಯದ ಭಾವನೆಗೆ ಧಕ್ಕೆಯಾಗಿದೆ; ಹೈಕೋರ್ಟ್‌ ಮೆಟ್ಟಿಲೇರಿದ ಕರಿನ್ ಸೇನೆ

ಸಾರಾಂಶ

ಅಲಹಾಬಾದ್ ಹೈ ಕೋರ್ಟ್‌ ಮೆಟ್ಟಿಲೇರಿದ ಕರಿನ್ ಸೇನೆ. ಮಾನುಷಿ ಚಿಲ್ಲರ್ ಮೊದಲ ಸಿನಿಮಾ ಬ್ಯಾಕ್ ಆಗುತ್ತಾ?   

ಬಾಲಿವುಡ್ ಸಿರಿವಂತ ನಟ ಅಕ್ಷಯ್ ಕುಮಾರ್ ಮತ್ತು ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಟನೆಯ 'ಪೃಥ್ವಿರಾಜ್‌' ಸಿನಿಮಾ ಬಿಡುಗಡೆಗೆ ಸಜ್ಜಾದರೂ ರಜಪೂತ ಸಮುದಾಯದವರಿಂದ ತಡೆ ತರಲಾಗಿದೆ. ಇನ್ನೂ ಕರಿನ್ ಸೇನೆ ಸಿನಿಮಾ ಬ್ಯಾನ್ ಮಾಡಬೇಕು ಎಂದು ಅಲಹಾಬಾದ್‌ ಹೈ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ನಿರ್ದೇಶಕರು ಏನು ತಪ್ಪು ಮಾಡಿದ್ದಾರೆ, ಯಾವ ಸಂದೇಶ ತಪ್ಪಾಗಿದೆ ಎಂದು ತಿಳಿಯದೆ ಗೊಂದಲದಲ್ಲಿರುವ ಜನರಿಗೆ ನಿಖರವಾದ ಮಾಹಿತಿ ಇಲ್ಲಿದೆ...

ಅಕ್ಷಯ್ ಮತ್ತು ಮಾನುಷಿ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದ್ದು ಅವರಿಬ್ಬರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ. ವಿಶ್ವ ಸುಂದರಿ ಚಿತ್ರರಂಗಕ್ಕೆ ಕಾಲಿಡುವುದರ ಬಗ್ಗೆ ಮಾಹಿತಿ ನೀಡಿರಲಿಲ್ಲ ಹೀಗಾಗಿ ಪ್ಯಾಪರಾಜಿಗಳ ಒತ್ತಾಯದಿಂದ ಇದು ಐತಿಹಾಸಿಕ ಸಿನಿಮಾ ಎಂದು ಅಭಿಮಾನಿಗಳ ಕಿವಿ ಮುಟ್ಟಿತ್ತು.

ಚೀನಾ ಬೀಚ್‌ನಲ್ಲಿ ಹಾಟ್ ಲುಕ್‌ನಲ್ಲಿ ಮಾನುಷಿ ಛಿಲ್ಲರ್!

ಲಾಕ್‌ಡೌನ್‌ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಿದ ಕಾರಣ ಹಾಗೂ ಇದು ರಜಪೂತ್ ರಾಜರಿಗೆ ಸಂಬಂಧಿಸಿದ ಕಥೆ ಆಗಿರುವ ಕಾರಣ ಇಡೀ ತಂಡ ಕೆಲವೊಂದು ಪೂಜೆ ಹೋಮ ಮಾಡಿಸಿದ ನಂತರ ಚಿತ್ರೀಕರಣ ಆರಂಭಿಸಿದ್ದರು. ಆಗಲೇ ತಿಳಿದಿದ್ದು ಚಿತ್ರದ ಟೈಟಲ್ 'ಪೃಥ್ವಿರಾಜ್‌' ಎಂದು. ರಜಪೂತ್ ರಾಜ ಪೃಥ್ವಿರಾಜ್ ಚೌಹಾಣ್ ಜೀವನಾಧಾರಿತ ಸಿನಿಮಾ ಇದಾಗಿದ್ದು ಅನೇಕ ನೈಜ ಘಟನೆಗಳನ್ನು ತೋರಿಸಲಾಗಿದೆ. 

ಸಂಪೂರ್ಣ ಸಿನಿಮಾ ಚಿತ್ರೀಕರಣ ನಡೆದ ನಂತರ ಚಿತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಲಾಗಿತ್ತು. ಆಗ ಈ ಸಿನಿಮಾ ಇತಿಹಾಸವನ್ನು ವಾಸ್ತವಿಕವಾಗಿ ತಿರುಚಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕಾರಣದಿಂದ ಎರಡು ಸಮಾಜಗಳ ನಡುವೆ ವಾದಗಳು ಶುರುವಾಗಿದೆ. ಸಿನಿಮಾವನ್ನು ವಿರೋಧಿಸಿ, ರಾಜಸ್ಥಾನದ ಗುರ್ಜರ್ ಸಮಾಜದ ಜನರು ಸಿನಿಮಾದ  ಪ್ರದರ್ಶನವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪೃಥ್ವಿರಾಜ್ ಗುರ್ಜರ್ ಅನ್ನು ಸಿನಿಮಾದಲ್ಲಿ  ರಜಪೂತ ಎಂದು ತೋರಿಸಲಾಗುತ್ತಿದೆ ಎಂದು ಗುರ್ಜರ್ ಸಮಾಜ ಹೇಳುತ್ತದೆ. ಮತ್ತೊಂದೆಡೆ, ರಜಪೂತ ಸಮಾಜದ ಜನರು ಗುರ್ಜರ್ ಸಮಾಜದ ಈ ಹಕ್ಕನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಹೊಟ್ಟೆಪಾಡಿಗೆ ಏನ್ ಮಾಡ್ತಾರೆ ಈ ವಿಶ್ವ ಸುಂದರಿ ?

ಈ ಹಿಂದೆ ರಜಪೂತ ಕರ್ಣಿ ಸೇನೆಯ ಜನರು ಸಿನಿಮಾದ ಶೀರ್ಷಿಕೆಯಲ್ಲಿನ ಅಪೂರ್ಣ ಹೆಸರಿನ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರು. ಸಿನಿಮಾದಲ್ಲಿ ಅಗತ್ಯ ಬದಲಾವಣೆ ಮಾಡದಿದ್ದರೆ ಯಾವುದೇ ಸಂದರ್ಭದಲ್ಲೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎನ್ನುತ್ತಾರೆ ಈ  ವಿವಿಧ ಸಮಾಜದವರು. ಪೃಥ್ವಿರಾಜ್ ಚೌಹಾಣ್ ಅವರಿಗೆ 'ರಜಪೂತ್' ಸರ್‌ನೆಮ್‌ ಬಳಸುವುದನ್ನು ಮುಂದುವರೆಸಿದರೆ, ಸಿನಿಮಾವನ್ನು ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ ಎಂದು ಗುರ್ಜರ್ ಸಮಾಜ ಹೇಳಿದೆ. ಅದೇ ಸಮಯದಲ್ಲಿ, ಶ್ರೀ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ವಕ್ತಾರ ವಿಜೇಂದರ್ ಸಿಂಗ್ ಸಕ್ತಾವತ್ ಅವರು ಆರಂಭದಲ್ಲಿ ಗುರ್ಜರ್‌ಗಳು ಗೌಚರ್‌ಗಳಾಗಿದ್ದು, ನಂತರ ಅದು ಗುಜ್ಜರ್‌ಗಳು ಮತ್ತು ನಂತರ ಗುರ್ಜರ್‌ಗಳಾಗಿ ಮಾರ್ಪಟ್ಟಿದೆ ಮತ್ತು ಅವರು ಮೂಲತಃ ಗುಜರಾತಿನವರು ಮತ್ತು ಆದ್ದರಿಂದ ಗುರ್ಜರ್ಸ್ ಎಂದು ಕರೆಯುತ್ತಾರೆ. ಗುರ್ಜರ್ ಎಂಬ ಪದವು ಸ್ಥಳಕ್ಕೆ ಸಂಬಂಧಿಸಿದೆ ಹೊರತು, ಯಾವುದೇ ಜಾತಿಗೆ ಸಂಬಂಧಿಸಿಲ್ಲ ಎಂದು ಹೇಳುತ್ತಾರೆ.

ಚಿತ್ರತಂಡ ಯಾವುದೇ ಬದಲಾವಣೆಗಳನ್ನು ಮಾಡದ ಕಾರಣ ಕರಿನ್‌ ಸೇನೆ ಈಗ ಅಲಹಾಬಾದ್‌ ಹೈ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಬ್ಯಾನ್ ಮಾಡಲೇ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್  'ಪೃಥ್ವಿರಾಜ್ ಚೌಹಾಣ್ ಅವರ ಜೀವನದಲ್ಲಿ ಯಾವುದೇ ಭಯದ ಮಾತು ಇರಲಿಲ್ಲ. ಈ ಸಿನಿಮಾವು ಅವರ ಶೌರ್ಯ ಮತ್ತು ಜೀವನಕ್ಕೆ ನಮ್ಮ ಗೌರವವಾಗಿದೆ' ಎಂದು  ಚಿತ್ರದ ಬಗ್ಗೆ ಹೇಳಿದ್ದಾರೆ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?