B-ಟೌನಲ್ಲಿ ಆಕೆ ಒಬ್ಬಳೇ ಪ್ರಾಮಾಣಿಕವಾದ ವ್ಯಕ್ತಿ, ಅವಳನ್ನು ಮೆಚ್ಚುತ್ತೇನೆ: Raj Kundra

By Contributor Asianet  |  First Published Feb 5, 2022, 2:08 PM IST

ರಾಜ್‌ ಕುಂದ್ರಾ ಜೊತೆ ವಿಡಿಯೋ ಹಂಚಿಕೊಂಡ ರಾಖಿ ಸಾವಂತ್. ನನ್ನ ಪ್ರೀತಿಯ ಅಣ್ಣ ಎಂದ ನಟಿ... 
 


ಬಿಗ್ ಬಾಸ್ ಸೀಸನ್15 ಮುಗಿದ ನಂತರ ಸ್ಪರ್ಧಿಗಳು ಟಿವಿ, ಡಿಜಿಟಲ್ ಮತ್ತು ಪ್ರಿಂಟ್ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಮಯಕ್ಕೆ ನಟಿ ಶಮಿತಾ ಶೆಟ್ಟಿ ಹುಟ್ಟು ಹಬ್ಬ ಬಂದ ಕಾರಣ ಸಹೋದರಿ ಶಿಲ್ಪಾ ಶೆಟ್ಟಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಬಿಬಿ ಸ್ಪರ್ಧಿಗಳು ಹಾಗೂ ಆಪ್ತ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಪ್ಯಾಪರಾಜಿಗಳು ಸೆರೆ ಹಿಡಿದಿರುವ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಶಮಿತಾ ಶೆಟ್ಟಿ ಹೌಸ್ ಬರ್ತಡೇ ಪಾರ್ಟಿಯಲ್ಲಿ ಕಾಂಟ್ರೋವರ್ಸಿ ಕ್ವೀನ್‌ ಹಾಟ್ ನಟಿ ರಾಖಿ ಸಾವಂತ್ ಕಾಣಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟೀವ್ ಆಗಿರುವ ರಾಖಿ ಸ್ನೇಹಿತೆ ಶಮಿತಾ ಕೇಕ್ ಕಟ್ ಮಾಡುತ್ತಿರುವ ಫೋಟೋದಿಂದ ಹಿಡಿದು ಅಕೆಗೆ ತಿನ್ನಿಸುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಹೀಗೆ ಒಂದು ವಿಡಿಯೋದಲ್ಲಿ ರಾಜ್‌ ಕುಂದ್ರಾ ಕೂಡ ಕಾಣಿಸಿಕೊಂಡಿದ್ದಾರೆ. 

ಕ್ಯಾಮೆರಾ ಎದುರು ಪತಿಗೆ ಒತ್ತಾಯ ಮಾಡಿ ಮುತ್ತಿಟ್ಟ ನಟಿ Rakhi Sawant!

Tap to resize

Latest Videos

ಅಶ್ಲೀಲ ವಿಡಿಯೋ ದಂಧೆ ಪ್ರಕರಣದಿಂದ ಜೈಲು ಸೇರಿ ಕೆಲವು ತಿಂಗಳಿಗೆ ಹೊರ ಬಂದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಕ್ಯಾಮೆರಾಗಳ ಕಣ್ಣಿಗೆ ಕಾಣಿಸಿಕೊಳ್ಳದಂತೆ ಓಡಾಡುತ್ತಿದ್ದರು. ಅಪ್ಪಿ ತಪ್ಪಿ ಯಾರಾದರೂ ಮಾತನಾಡಿಸಲು ತಡೆದರೂ ಒಂದು ಕ್ಷಣವೂ ನಿಲ್ಲದಂತೆ ಹೊರಡುತ್ತಿದ್ದರು. ಆದರೆ ರಾಖಿ ವಿಡಿಯೋದಲ್ಲಿ ಕುಂದ್ರಾನ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇಬ್ಬರ ಆತ್ಮೀಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 

'ರಾಜ್‌ ನನ್ನ ಸಹೋದರ ನನ್ನ ಆತ್ಮೀಯ ಗೆಳೆಯ ನೀನು ಹೀಗೆ ಜೀವನದಲ್ಲಿ ಸದಾ ಖುಷಿಯಾಗಿರಬೇಕು. ನನಗಿರುವ ಏಕೈಕ ಸಹೋದರ ಅಂದ್ರೆ ರಾಜ್' ಎಂದು ರಾಖಿ ವಿಡಿಯೋದಲ್ಲಿ ಪದೇ ಪದೇ ಹೇಳಿದ್ದಾರೆ. 'ಬಾಲಿವುಡ್ ಚಿತ್ರರಂಗದಲ್ಲಿ ತುಂಬಾನೇ ಪ್ರಾಮಾಣಿಕವಾದ ವ್ಯಕ್ತಿ ಅಂದ್ರೆ ರಾಖಿ ಸಾವಂತ್. ಈ ಕಾರಣಕ್ಕೆ ನನಗೆ ಆಕೆ ಕಂಡರೆ ಇಷ್ಟವಾಗುತ್ತದೆ. ಸರಿಯಾದ ವಿಚಾರಗಳಿಗೆ ಆಕೆ ನಿಲುವು ತೆಗೆದುಕೊಳ್ಳುತ್ತಾರೆ.'ಎಂದು ರಾಜ್ ಕುಂದ್ರಾ ಮಾತನಾಡಿದ್ದಾರೆ. 

ಇದೇ ಮೊದಲ ಬಾರಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದು ಹೀಗಾಗಿ ನಿಜಕ್ಕೂ ಸಹೋದರನಾ ಅಥವಾ ಯಾವುದಾದರೂ ರೀತಿ ಸಹಾಯ ಮಾಡಿದ್ದಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 'ರಾಜ್ ಕುಂದ್ರಾ ಭಾಯ್ ನೀನು ರಾಕ್‌ಸ್ಟಾರ್ ನೀನು ಬೆಸ್ಟ್‌ ವ್ಯಕ್ತಿ ನೀವು ಬೆಸ್ಟ್‌ ಗಂಡ ನೀವು ಬೆಸ್ಟ್‌ ಗಂಡ ನಿಮ್ಮಂತೆ ಒಳ್ಳೆ ವ್ಯಕ್ತಿ ಇಲ್ಲ'ಎಂದು ರಾಖಿ ಬರೆದುಕೊಂಡಿದ್ದಾರೆ.

ಬ್ಯಾಂಕಲ್ಲಿ ಹಣ ಮತ್ತು ಪಾಸ್‌ಬುಕ್‌ ನೋಡಿ ಮದುವೆಗೆ ಒಪ್ಪಿಕೊಂಡೆ: Rakhi Sawant

ಶಮಿತಾ ಹುಟ್ಟುಹಬ್ಬಕ್ಕೆ ರಾಖಿ ಪ್ರಯಾಣ ಮಾಡುವಾಗ ಕಾರಿನಲ್ಲಿ ವಿಡಿಯೋ ಸೆರೆ ಹಿಡಿದು ಶಮಿ ಶಮಿ ಎಂದು ಜೋರಾಗಿ ಕೂಗುತ್ತಾ ಆಕೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ನೀಲಿ ಬಟ್ಟೆ, ನೀಲಿ ಮೇಕಪ್ ಮತ್ತು ನೀಲಿ ಕನ್ನಡಕದಲ್ಲಿ ರಾಖಿ ಕಾಣಿಸಿಕೊಂಡಿರುವುದು 'ಬ್ಲೂ ಕ್ವೀನ್‌' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಶಮಿತಾ ಕೇಕ್ ಕಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡು 'ಹಾ ಹಾ ಹಾ' ಎಂದು ಸೌಂಡ್ ಮಾಡಿದ್ದಾರೆ ರಾಖಿ ಡ್ರಾಮ ನೋಡಿ ಶಿಲ್ಪಾ ಶೆಟ್ಟಿ ತಾಯಿ ರಾಖಿ ಇದು ಸಕ್ಕರೆ ಹಾಕದೇ ಮಾಡಿರುವ ಕೇಕ್ ಎಂದು ಹೇಳಿದ್ದಾರೆ. ತಕ್ಷಣವೇ ರಾಖಿ ಅದರ ಮೇಲಿದ್ದ ಸ್ಟ್ರಾಬೆರಿಯನ್ನು ಶಮಿತಾಗೆ ತಿನ್ನಿಸಿ ನನಗೂ ತಿನ್ನಿಸು ಶಮಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. 

ರಾಖಿ ಜೊತೆ ಫೋಟೋ ಕ್ಲಿಕಿಸಿಕೊಳ್ಳಲು ಶಿಲ್ಪಾ ಶೆಟ್ಟಿ ಮುಂದಾದರು. ಆದರೆ ಫೋಟೋ ಬದಲು ವಿಡಿಯೋ ರೆಕಾರ್ಡ್ ಆಗುತ್ತಿತ್ತು ಅದಕ್ಕೆ ರಾಖಿ ತುಂಬಾ ಒಳ್ಳೆ ವ್ಯಕ್ತಿ ನಿಜ ಹೇಳಬೇಕು ಅಂದ್ರೆ ಆಕೆ ನಿಜವಾದ ಬಿಗ್ ಬಾಸ್ ಎಂದಿದ್ದಾರೆ. ಕುಂದ್ರಾ ಮತ್ತು ಶೆಟ್ಟಿ ಕುಟುಂಬದಲ್ಲಿ ಇಷ್ಟೊಂದು ಒಳ್ಳೆಯ ಹೆಸರು ಪಡೆದುಕೊಂಡಿರುವ ನಿಮ್ಮ ಜೀವನ ಸಾರ್ಥಕ ಎಂದಿದ್ದಾರೆ ಫಾಲೋವರ್ಸ್.

 

click me!