ಪತ್ನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಬೆಲೆಯ ಆಸ್ತಿಯನ್ನು ಬರೆದ ರಾಜ್ ಕುಂದ್ರಾ. ದಿಢೀರ್ ನಿರ್ಧಾರಕ್ಕೆ ಕಾರಣ ಏನೆಂದು ಪ್ರಶ್ನೆ ಮಾಡಿದ ನೆಟ್ಟಿಗರು....
ಬಾಲಿವುಡ್ ಯಂಗ್ ಮಮ್ಮಿ, ಸೈಜ್ ಝಿರೋ ಫಿಗರ್ ಶಿಲ್ಪಾ ಶೆಟ್ಟಿ ಕುಟುಂಬದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಸುದ್ದಿಯಾಗುತ್ತದೆ. ಪತಿ ರಾಜ್ ಕುಂದ್ರಾ ಮಾಡಿಕೊಂಡ ಕೇಸ್, ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ಓಟಿಟಿ ಮತ್ತು ಟಿವಿ ಜರ್ನಿ ಹಾಗೂ ಪುತ್ರಿ ಸ್ಕೂಲ್ ಪ್ರಯಾಣ ಹೀಗೆ ಒಂದಾದ ಮೇಲೊಂದು. ಆದರೀಗ ಶಿಲ್ಪಾ ಸುದ್ದಿಯಲ್ಲಿರುವುದು ಆಸ್ತಿ ವಿಚಾರಕ್ಕೆ, ಎಷ್ಟು ಬೆಲೆಯ ಆಸ್ತಿ ಅಂತ ಕೇಳಿದ್ರೆ ಶಾಕ್ ಆಗ್ತೀರಾ...
ಹೌದು! ನಟಿ ಶಿಲ್ಪಾ ಶೆಟ್ಟಿಗೆ ಪತಿ ರಾಜ್ ಕುಂದ್ರಾ ಭರ್ಜರಿ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿರುವ ಫ್ಲ್ಯಾಟ್ ಮತ್ತು ಜೂಹುನಲ್ಲಿರುವ ಬಂಗಲೆಯನ್ನು ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಖಾಸಗಿ ವೆಬ್ ವರದಿ ಮಾಡಿದೆ. ಉದ್ಯಮಿಗಳು ಲೆಕ್ಕ ಹಾಕಿರುವ ಪ್ರಕಾರ ಇದು ಒಟ್ಟು 38.5 ಕೋಟಿ ರೂಪಾಯಿ ಬೆಲೆ ಇದೆ ಎನ್ನಲಾಗಿದೆ. ಇದು ಹೊರತುಪಡಿಸಿ ಮತ್ತೆ ಜುಹೂ ಬಲಿ ಸಮುದ್ರದ ಕಡೆ ಮುಖ ಮಾಡಿರುವ ಒಂದು ಫ್ಲೋರ್ ಫ್ಯ್ಲಾಟ್ ಅಂದ್ರೆ 5 ಮನೆ ಇರುವ ಒಂದು ಫ್ಲೋರ್‌ನ ಶಿಲ್ಪಾಗೆ ಬರೆಯಲಿದ್ದಾರೆ. ಇದು 5,995 sq ft ಇದ್ದು ಸ್ಟ್ಯಾಂಪ್ ಡ್ಯಾಟಿ ಮಾಡಿಸಲು 1.9 ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ.
ತಂಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ತನಗೆ ಕೆಲಸ ಸಿಗುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಭಯಪಟ್ಟಿದರಂತೆ!ಶಿಲ್ಪಾ ಹೆಸರಿಗೆ ಆಸ್ತಿ ಬರೆಯಲಾಗಿದೆ ಎಂದು ದೊಡ್ಡ ಸುದ್ದಿ ಆಗುತ್ತಿದ್ದಂತೆ ಆಪ್ತ ಮೂಲಗಳಿಂದ ಮಾಧ್ಯಮ ಮಿತ್ರರು ಮಾಹಿತಿ ಕಲೆ ಹಾಕಿದ್ದಾರೆ. ಜನವರಿ 21,2022ರಂದು ಶಿಲ್ಪಾ ಪೇಪರ್‌ಗೆ ಸಹಿ ಮಾಡಿದ್ದಾರೆ. ಸದ್ಯಕ್ಕೆ ಮಾರ್ಕೆಟ್‌ನಲ್ಲಿರುವ ಬೆಲೆ ಪ್ರಕಾರ ಈ ಜಾಗಕ್ಕೆ 65 ಸಾವಿರ per sq ft.ಹೀಗಾಗಿ ಶಿಲ್ಪಾ ಕೂಡ ಕೋಟಿ ಆಸ್ತಿಯ ಒಡತಿ.
undefined
ಕಳೆದ ವರ್ಷ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ರಾಜ್ ಕುಂದ್ರಾ ಕೆಲವು ತಿಂಗಳುಗಳ ಕಾಲ ಕಂಬಿ ಎಣಿಸುತ್ತಿದ್ದರು. ಜಾಮೀನು ಪಡೆದುಕೊಂಡು ಹೊರ ಬಂದ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಏಕಾಏಕಿ ರಾಜ್ ಫ್ಯಾಮಿಲಿ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಮನೆ ರಿನೋವೇಟ್ ಹೀಗೆ ಒಂದೊಂದೆ ಬದಲಾವಣೆ ಮಾಡುತ್ತಿದ್ದಾರೆ. ಪ್ರಕರಣದಿಂದ ಬೇಸರಗೊಂಡಿರುವ ಶಿಲ್ಪಾಗೆ ಇದು ಗಿಫ್ಟಾ ಅಥವಾ ಪತಿ ಈ ರೀತಿ ಮಾಡದಿದ್ದರೆ ಮತ್ತೆ ಫ್ಯಾಮಿಲಿಗೆ ಸೇಫ್ಟಿ ಇರುವುದಿಲ್ಲ ಎಂಬ ಭಯದಿಂದ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
Obscenity Case: ಅಶ್ಲೀಲ ಕಿಸ್ಸಿಂಗ್ ಕೇಸ್‌ನಲ್ಲಿ 15 ವರ್ಷದ ನಂತರ ಶಿಲ್ಪಾ ಶೆಟ್ಟಿಗೆ ರಿಲ್ಯಾಕ್ಸ್15 ವರ್ಷ ಹಿಂದಿನ ಅಶ್ಲೀಲತಾ ಪ್ರಕರಣದಲ್ಲಿ (obscenity case) ನಟಿ ಶಿಲ್ಪಾಶೆಟ್ಟಿಯನ್ನು(Actress Shilpa Shetty ) ಕೃತ್ಯದ ಬಲಿಪಶು ಎಂದಿರುವ ಸ್ಥಳೀಯ ನ್ಯಾಯಾಲಯ ಅವರಿಗೆ ಕ್ಲೀನ್‌ಚಿಟ್ ನೀಡಿದೆ. 2007ರಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ನಟ ರಿಚರ್ಡ್ ಗೇರ್ (Hollywood star Richard Gere), ನಟಿ ಶಿಲ್ಪಾ ಶೆಟ್ಟಿಗೆ ಮುತ್ತಿಕ್ಕಿದ್ದರು. ಏಕಾಏಕಿ ನಡೆದ ಈ ಘಟನೆಯಿಂದ ಶಿಲ್ಪಾ ತಬ್ಬಿಬ್ಬಾಗಿದ್ದರೂ, ತಕ್ಷಣಕ್ಕೆ ಯಾವುದೇ ಪ್ರತಿರೋಧ ತೋರಿರಲಿಲ್ಲ. ಈ ಘಟನೆಗೆ ದೇಶದ ಹಲವು ನಗರಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಶಿಲ್ಪಾ ವಿರುದ್ಧ ಅಶ್ಲೀಲತೆ ಪ್ರಕರಣ ದಾಖಲಿಸಲಾಗಿತ್ತು. ಮುಂಬೈ ನ್ಯಾಯಾಲಯವು ಜನವರಿ 18 ರಂದು ಶಿಲ್ಪಾ ಶೆಟ್ಟಿಯನ್ನು ಪ್ರಕರಣದಿಂದ ಸಂಪೂರ್ಣವಾಗಿ ನಿರಪರಾಧಿ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. 46 ವರ್ಷದ ನಟಿ ನ್ಯಾಯಾಲಯದ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಅವರು ಇಂದು ಸಂತೋಷದ ಕಲ್ಪನೆಯ ಕುರಿತು ಸೈಕಲಾಜಿಕಲ್ ಪೋಸ್ಟ್ ಅನ್ನು ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.