ಜನರಿಗಾಗಿ ಏನು ಮಾಡ್ತೀರಾ: ಬೊಂಬಾಟ್ ಉತ್ತರ ಕೊಟ್ಟ 'ಜವಾನ್' ಶಾರುಖ್!

Published : Sep 23, 2023, 06:33 PM ISTUpdated : Sep 23, 2023, 06:34 PM IST
ಜನರಿಗಾಗಿ ಏನು ಮಾಡ್ತೀರಾ: ಬೊಂಬಾಟ್ ಉತ್ತರ ಕೊಟ್ಟ 'ಜವಾನ್' ಶಾರುಖ್!

ಸಾರಾಂಶ

ಶಾರುಖ್ ಖಾನ್ ನಟನೆಯ 'ಪಠಾನ್' ಚಿತ್ರವು ಈ ವರ್ಷದಲ್ಲಿ ಇದಕ್ಕೂ ಮೊದಲು ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿತ್ತು. ಜವಾನ್ ಸಕ್ಸಸ್ ಮೂಲಕ ಶಾರುಖ್ ಎರಡನೇ ಚಿತ್ರ ಕೂಡ ಹಿಟ್ ದಾಖಲಿಸಿದೆ. 'ಜವಾನ್' ಚಿತ್ರವನ್ನು ಗೌರಿ ಖಾನ್ ಮತ್ತು ಶಾರುಖ್ ಖಾನ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ನಟನೆಯ ಜವಾನ್ ಚಿತ್ರ ಸೂಪರ್ ಹಿಟ್ ದಾಖಲಿಸಿದ್ದು ಗೊತ್ತೇ ಇದೆ. ಸೆಪ್ಟೆಂಬರ್ 7ಕ್ಕೆ ಬಿಡುಗಡೆಗೊಂಡ ಚಿತ್ರವು ಬರೋಬ್ಬರಿ 600 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇತ್ತೀಚೆಗೆ ಜವಾನ್ ಚಿತ್ರದ ಸಕ್ಸಸ್ ಮೀಟ್ ಮುಂಬೈನಲ್ಲಿ ಆಯೋಜನೆಗೊಂಡಿತ್ತು. ಈ ವೇಳೆ ಚಿತ್ರದ ನಿರ್ಮಾಪಕರೂ ಆಗಿರುವ ಶಾರುಖ್ ಖಾನ್ ಕುಟುಂಬಕ್ಕೆ ಪ್ರಶ್ನೆಯೊಂದನ್ನು ಕೇಳಲಾಯಿತು. ಅದಕ್ಕೆ ತಕ್ಷಣ ಉತ್ತರವನ್ನು ಸಹ ಶಾರುಖ್ ನೀಡಿದ್ದಾರೆ. 

"ಜವಾನ್ ಸಕ್ಸಸ್ ದಾಖಲಿಸಿ ಸಾಕಷ್ಟು ದುಡ್ಡು ಬಾಚಿಕೊಂಡಿದೆ. ಈಗ ಜನರಿಗಾಗಿ ನೀವು ಏನು ಮಾಡುವ ಪ್ಲಾನ್ ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆ" ಶಾರುಖ್ ಖಾನ್ ಅವರಿಗೆ ಕೇಳಲಾಯಿತು. "ನಮ್ಮ ರೆಡ್ ಚಿಲ್ಲೀಸ್' ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ನಮ್ಮ ಇಡೀ ಕುಟುಂಬವು ಈ ಬಗ್ಗೆ ಉತ್ಸುಕತೆಯಿಂದ ಮಾತನಾಡುತ್ತಿದೆ. ಮೀರ್ ಫೌಂಡೇಶನ್ ವತಿಯಿಂದ ಕೆಲಸ ಮಾಡುವ ಎಲ್ಲ ಜನರಿಗೆ ಸಿನಿಮಾ ತೋರಿಸುವ ಪ್ಲಾನ್ ಮಾಡಿಕೊಂಡಿದ್ದೇವೆ. ನಮ್ಮ ಎಲ್ಲ ಪಾಲುದಾರರೊಂದಿಗೆ ಈ ಕೆಲಸ ಮಾಡಲಿದ್ದೇವೆ. 

ನಾನು ನಂದಿನಿ... ಹಾಡಿಗೆ ನಟಿ ರಮ್ಯಾ ರೀಲ್ಸ್​ ವೈರಲ್​: ಇವ್ಳು ನಮ್​ ನಂದು ಎಂದ ಫ್ಯಾನ್ಸ್​

ನಮ್ಮ ಯಾವುದೇ ಕೆಲಸದಿಂದ ನಮ್ಮೆಲ್ಲರ ಮುಖದಲ್ಲಿ ನಗು ತರಿಸಲು ಸಾಧ್ಯವಾದರೆ ಅದು ನಿಜವಾದ ಎಂಟರ್‌ಟೈನ್ಮೆಂಟ್. ಇದನ್ನು ನಾನು ನಮ್ಮ Red Chillies Entertainment ಸಂಸ್ಥೆಗೆ ಹೇಳುತ್ತಿದ್ದೇನೆ. ನೀವು ಐಡಿಯಾ ಕೊಟ್ಟಿದ್ದಕ್ಕೆ ನಿಮಗೆ ಥ್ಯಾಂಕ್ಸ್' ಎಂದಿದ್ದಾರೆ ನಟ ಶಾರುಖ್ ಖಾನ್. ಅಂದಹಾಗೆ ಈ 'ಜವಾನ್' ಚಿತ್ರವನ್ನು ಗೌರಿ ಖಾನ್ ಮತ್ತು ಶಾರುಖ್ ಖಾನ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. 

ತಮಿಳುನಾಡಲ್ಲಿ ಕಾಂತಾರ ಗಣಪತಿ ಸೃಷ್ಟಿ- ಅದ್ಭುತ ದೃಶ್ಯಕಾವ್ಯಕ್ಕೆ ಮನಸೋತ ಜನರು

ಶಾರುಖ್ ಖಾನ್ ನಟನೆಯ 'ಪಠಾನ್' ಚಿತ್ರವು ಈ ವರ್ಷದಲ್ಲಿ ಇದಕ್ಕೂ ಮೊದಲು ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿತ್ತು. ಜವಾನ್ ಸಕ್ಸಸ್ ಮೂಲಕ ಶಾರುಖ್ ಎರಡನೇ ಚಿತ್ರ ಕೂಡ ಹಿಟ್ ದಾಖಲಿಸಿದೆ. ಹೀಗೆ ಒಂದೇ ವರ್ಷದಲ್ಲಿ ಎರಡು ಚಿತ್ರಗಳು ಸೂಪರ್ ಹಿಟ್ ಆಗುವ ಮೂಲಕ ಶಾರುಖ್ ಖಾನ್ ಬಾಲಿವುಡ್ ಅಂಗಳದಲ್ಲಿ ಹೊಸ ದಾಖಲೆ ನಿರ್ಮಿಸಿದಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!