'ಬ್ರೌನ್​'ಗಾಗಿ ರಾತ್ರಿ ಊಟ ತೊರೆದು ಮದ್ಯ ಸೇವಿಸ್ತಿದ್ದ ಕರಿಷ್ಮಾ ಕಪೂರ್​!

By Suvarna News  |  First Published Apr 5, 2023, 2:21 PM IST

ಬ್ರೌನ್​ ವೆಬ್​ ಸಿರೀಸ್​ಗಾಗಿ ನಟಿ ಕರಿಷ್ಮಾ ಕಪೂರ್​ ಬಹುದೊಡ್ಡ ತ್ಯಾಗ ಮಾಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಏನದು? 
 


ಕರಿಷ್ಮಾ ಕಪೂರ್ (Karisma Kapoor) ಬಾಲಿವುಡ್‌ನ ಅತ್ಯಂತ ನೆಚ್ಚಿನ ನಟಿಯರಲ್ಲಿ ಒಬ್ಬರು. 1991ರಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಕರಿಷ್ಮಾ ಬಹಳ ದಿನಗಳ ನಂತರ ಮತ್ತೆ ನಟನಾ ಲೋಕಕ್ಕೆ ಮರಳಲಿದ್ದಾರೆ. ಅವರು ಈಗ 'ಬ್ರೌನ್' ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ರೀಟಾ ಬ್ರೌನ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ವಹಿಸಿದ್ದಾರೆ.  ಕರಿಷ್ಮಾ ಕಪೂರ್​ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಏನೆಲ್ಲಾ  ತ್ಯಾಗ ಮಾಡಿದ್ದಾರೆ ಎನ್ನುವುದು ನಿಮಗೆ ಗೊತ್ತೆ? ಇದಾಗಲೇ ಬಹುತೇಕ ಮಂದಿಗೆ ತಿಳಿದಿರುವಂತೆ ಒಂದು ಪಾತ್ರದ ಒಳಗೆ ಹೋಗಿ ಆ ಪಾತ್ರವನ್ನೇ ತಾವು ಎಂದು ಗ್ರಹಿಸಿ, ಆ ಪಾತ್ರವನ್ನು ನಿರ್ವಹಿಸುವಾಗ, ಸಾಕಷ್ಟು ತ್ಯಾಗ ಮಾಡುವುದು ಉಂಟು. ದೇಹವನ್ನು ಪಾತ್ರಕ್ಕೆ ತಕ್ಕಂತೆ ಸಿಕ್ಸ್​ ಪ್ಯಾಕ್​  ಮಾಡಿಕೊಳ್ಳುವುದು, ತೆಳ್ಳಗೆ ಶರೀರ ಮಾಡಿಕೊಳ್ಳುವುದು ಇಲ್ಲವೇ ತೂಕವನ್ನು ಹೆಚ್ಚಿಸಿಕೊಳ್ಳುವುದನ್ನು ನೋಡಿಬಹುದು. ಅದೇ ಇನ್ನೊಂದೆಡೆ  ದೇವರ ಪಾತ್ರವನ್ನು ಮಾಡುವಾಗ ನಟ, ನಟಿಯರು ಮಾಂಸಹಾರ ತ್ಯಜಿಸುವ ಸುದ್ದಿಗಳನ್ನು ಕೇಳಿರುತ್ತವೆ. ಅದೇ ರೀತಿ ಮದ್ಯ ಸೇವನೆ ವರ್ಜಿಸುವವರೂ ಇದ್ದಾರೆ.

ಇದೀಗ ಅಂಥದ್ದೇ ಒಂದು ತ್ಯಾಗ ಮಾಡಿದ್ದಾರೆ ನಟಿ ಕರಿಷ್ಮಾ ಕಪೂರ್​. ಬ್ರೌನ್​ ಚಿತ್ರಕ್ಕಾಗಿ ಅವರು ಈ ತ್ಯಾಗ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಬ್ರೌನ್​ (Brown) ವೆಬ್​ಸೀರಿಸ್​ಗಾಗಿ ಅದರಲ್ಲಿನ ರೀಟಾ ಪಾತ್ರಕ್ಕಾಗಿ ರಾತ್ರಿಯಲ್ಲಿ ತಿನ್ನುವುದನ್ನು ತ್ಯಜಿಸಿರುವುದು ಮಾತ್ರವಲ್ಲದೇ ಮದ್ಯ ಸೇವನೆ ಮಾಡುತ್ತಿದ್ದೆ ಎಂದ ನಟಿ, ಇದೆಲ್ಲವರೂ ಸಿನಿಮಾದಲ್ಲಿನ ಪಾತ್ರಕ್ಕಾಗಿ ಎಂದು  ಬಹಿರಂಗಪಡಿಸಿದ್ದಾರೆ.  'ಗ್ಲಾಮರಸ್ ಇಮೇಜ್ ಬಿಟ್ಟು ಮೇಕಪ್ ಇಲ್ಲದೆ ಕಾಣಿಸಿಕೊಳ್ಳಲು ಹೇಳಿದ್ದರೆ ನೀವು ಒಪ್ಪಿಕೊಳ್ಳುತ್ತಿದ್ದಿರಾ' ಎಂಬ ಪ್ರಶ್ನೆಯನ್ನು  ಕರಿಷ್ಮಾ ಅವರಿಗೆ  ಕೇಳಿದಾಗ,  ಕರಿಷ್ಮಾ, ‘ಈ ಪಾತ್ರ ಹೇಗಿದೆ ಎಂಬುದನ್ನು ತೋರಿಸಲು ಬಯಸಿದ್ದೆ. ಮೇಕ್ಅಪ್ (Make up) ಇಲ್ಲದೆ ಕಾಣಿಸಿಕೊಳ್ಳಲು ನನಗೆ ಯಾವುದೇ ತೊಂದರೆ ಇರಲಿಲ್ಲ. ನಟಿಯಾಗಿ ಪ್ರತಿದಿನ ಬೆಳೆಯುವುದು, ಕಲಿಯುವುದನ್ನು  ನನ್ನ ವೃತ್ತಿಜೀವನದುದ್ದಕ್ಕೂ ನಾನು ಅಳವಡಿಸಿಕೊಂಡು ಬಂದವಳು ಎಂದಿದ್ದಾರೆ.

Tap to resize

Latest Videos

ಒಬ್ಬನಿಗಾಗಿ ಇಬ್ಬರು ಬಾಲಿವುಡ್​ ನಟಿಯರ ಫೈಟ್​: ನಿಜ ಜೀವನದ ಇಂಟರೆಸ್ಟಿಂಗ್​ ಲವ್​ ಸ್ಟೋರಿ
 
ಇದೇ ವೇಳೆ ಪಾತ್ರಕ್ಕಾಗಿ ತಾವು ಮಾಡಿರುವ ತ್ಯಾಗವನ್ನು ಹೇಳಿದ್ದಾರೆ. ಮುಖದಲ್ಲಿ ಸುಸ್ತಾಗಿ, ಬೇಸರವಾಗಿ ಕಾಣಲು ಶೂಟಿಂಗ್ ವೇಳೆ ಮಲಗುವ ಮುನ್ನ ಊಟ (dinner) ಮಾಡುವುದನ್ನು ಬಿಟ್ಟು ರಾತ್ರಿಯೆಲ್ಲಾ ಮದ್ಯ ಸೇವನೆ ಮಾಡಿದ್ದೆ ಎಂದು ಕರಿಷ್ಮಾ ಹೇಳಿದ್ದಾರೆ. ಮದ್ಯವ್ಯಸನಿ ಪಾತ್ರವನ್ನು ನಿರ್ವಹಿಸಲು, ಅಪರೂಪವಾಗಿ ಮದ್ಯಪಾನ ಮಾಡುವ ನಟ, ರಾತ್ರಿಯ ಊಟವನ್ನು ಬಿಟ್ಟು ಕೆಲವು ಪಾನೀಯಗಳನ್ನು ಸೇವಿಸಿದ ನಂತರ ಮಲಗುತ್ತಾನೆ. ನಾನೂ ಹಾಗೆಯೇ ಮಾಡಿದ್ದೇನೆ. ನಾನು ಸಾಮಾನ್ಯವಾಗಿ ಮಾಡದ ಕೆಲವು ಕೆಲಸಗಳನ್ನು ಅದರಲ್ಲಿ ಮಾಡಲು ನಾನು ಉತ್ಸುಕಳಾಗಿದ್ದೆ. ಹಾಗಾಗಿ ಇದು ನನಗೆ ತುಂಬಾ ಆಸಕ್ತಿದಾಯಕವಾಗಿತ್ತು. ರೀಟಾ (Reeta) ನನ್ನನ್ನು ನನ್ನ ಆರಾಮ ವಲಯದಿಂದ ಹೊರಗೆ ಕರೆದೊಯ್ದಿದ್ದಾಳೆ ಎಂದಿದ್ದಾರೆ. 

ತಮ್ಮನ್ನು ತಾವು  ಪರಿಪೂರ್ಣವಾಗಿ ತೋರಿಸಿಕೊಳ್ಳುವ ಭರದಲ್ಲಿ ಎಂದಾದರೂ ಒತ್ತಡವನ್ನು ಅನುಭವಿಸಿದ್ದೀರಾ ಎಂದು ಪ್ರಶ್ನೆ ಕೇಳಿದಾಗ,  ಕರಿಷ್ಮಾ, ' ಎಲ್ಲಾ ಸಮಯದಲ್ಲೂ ಪರಿಪೂರ್ಣ ಚಿತ್ರವನ್ನು ನೋಡಬೇಕು ಎಂದು ನಾನು ಭಾವಿಸುವುದಿಲ್ಲ. ನಾನು ನನ್ನನ್ನು ಮಾತ್ರ ನಂಬುತ್ತೇನೆ. ಅದರಲ್ಲೂ ಪಾತ್ರವನ್ನು ನಿರ್ವಹಿಸುವಾಗ ಆ ಪಾತ್ರವನ್ನು ಅನುಭವಿಸಬೇಕಾಗುತ್ತದೆ. ನಾನು ಅಂತಹ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ನಾನು ಯೋಚಿಸುವುದಿಲ್ಲ. ನಾನು ನಟಿಯಾಗಿ ಎಲ್ಲಾ ಗ್ಲಾಮರ್ (Glamour) ಮತ್ತು ಗ್ಲಿಟ್ಜ್‌ಗಳಿಂದ ದೂರವಿಡಬೇಕಾಗಿ ಬಂದರೂ ಅದಕ್ಕೆ ಸಿದ್ಧ. ಒತ್ತಡ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಇಬ್ಬರು ಮಕ್ಕಳ ಅಪ್ಪನೊಂದಿಗೆ ಲವ್​ ಆದಾಗ... ನೆನಪು ಬಿಚ್ಚಿಟ್ಟ ನಟಿ ಶಬನಾ ಅಜ್ಮಿ
 
ಇನ್ನು, ರೀಟಾ ಬ್ರೌನ್ ಪಾತ್ರದ ಬಗ್ಗೆ ಹೇಳುವುದಾದರೆ,  ಕರಿಷ್ಮಾ ಪಾತ್ರಕ್ಕೆ ಬರಲು, ದಣಿದ ಮತ್ತು ದುಃಖದಿಂದ ಕಾಣಲು ಮೇಕಪ್ ಮಾಡಲಿಲ್ಲ, ಬದಲಿಗೆ ನಟಿ, ಪಾತ್ರಕ್ಕಾಗಿ ಮಾಡುವ ತಂತ್ರಗಳನ್ನು ಅಳವಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
 

click me!