ವಿಚ್ಛೇದನ ಬಳಿಕ ಮೊದಲ ಬಾರಿಗೆ ಮಾಜಿ ಪತಿ ಜೊತೆ ಕಾಣಿಸಿಕೊಂಡ ಕರಿಶ್ಮಾ ಕಪೂರ್

Published : Mar 12, 2023, 04:26 PM IST
ವಿಚ್ಛೇದನ ಬಳಿಕ ಮೊದಲ ಬಾರಿಗೆ ಮಾಜಿ ಪತಿ ಜೊತೆ ಕಾಣಿಸಿಕೊಂಡ ಕರಿಶ್ಮಾ ಕಪೂರ್

ಸಾರಾಂಶ

ಬಾಲಿವುಡ್ ನಟಿ ಕರಿಶ್ಮಾ ಕಪೂರ್ ಮತ್ತು ಮಾಜಿ ಪತಿ ಸಂಜಯ್ ಕಪೂರ್ ದೂರ ಆದ ಬಳಿಕ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. 

ಬಾಲಿವುಡ್ ಖ್ಯಾತ ನಟಿ ಕರಿಶ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಇಬ್ಬರೂ ದೂರ ದೂರ ಆಗಿ ಅನೇಕ ವರ್ಷಗಳೇ ಆಗಿವೆ. ಇಬ್ಬರೂ 2016ರಲ್ಲಿ ವಿಚ್ಛೇದನ ಪಡೆದು ದೂರ ಆದರು. 2003ರಲ್ಲಿ ಸಂಜಯ್ ಕಪೂರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ಕರಿಶ್ಮಾ 13 ವರ್ಷಗಳಲ್ಲೇ ಪತಿಯಿಂದ ದೂರ ಆದರು. ಇಬ್ಬರೂ ವಿಚ್ಛೇದನ ಬಳಿಕ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಮೊದಲ ಬಾರಿಗೆ ಮಾಜಿ ಪತಿಯನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಉದ್ಯಮಿ ಸಂಜಯ್ ಕಪೂರ್ ಅವರನ್ನು ಭೇಟಿಯಾದ ಕರಿಶ್ಮಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟಕ್ಕೂ ಇಬ್ಬರೂ ದಿಢೀರ್  ಭೇಟಿಯಾಗಿದ್ದು ಯಾಕೆ ಅಂತೀರಾ? ಮಗನ ಹಟ್ಟುಹಬ್ಬದ ಕಾರಣ. 

ಕರಿಶ್ಮಾ ಮತ್ತು ಸಂಜಯ್ ಕಪೂರ್ ಪುತ್ರ ಕಿಯಾನ್ ಹುಟ್ಟುಹಬ್ಬ ಕಾರಣ ಭೇಟಿಯಾಗಿದ್ದರು. ಮಗನ ಹುಟ್ಟುಹಬ್ಬವನ್ನು ಇಬ್ಬರೂ ಸೇರಿ ಅದ್ದೂರಿಯಾಗಿ ಆಚರಿಸಿದ್ದಾರೆ. ಅಂದಹಾಗೆ ಕರಿಶ್ಮಾ ಮಾಜಿ ಪತಿ ಹಾಲಿ ಪತ್ನಿ ಜೊತೆ ಭೇಟಿ ನೀಡಿದ್ದರು. ಸಂಜಯ್ ಕಪೂರ್ ಪತ್ನಿ ಪ್ರಿಯಾ ಸಚ್‌ದೇವ್ ಮತ್ತು ಅವರ ಮಗ ಅಜಾರಿಯಾಸ್ ಕಪೂರ್ ಕೂಡ ಜೊತೆಯಲ್ಲಿದ್ದರು. ಎಲ್ಲರೂ ಒಟ್ಟಿಗೆ ಸೇರಿ ಪಾರ್ಟಿ ಮಾಡಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.     

35 ವರ್ಷಗಳ ಕಾಲ ದೂರವಿದ್ದು ಮತ್ತೆ ಒಂದಾದ ಕರೀನಾ ಕಪೂರ್‌ ತಂದೆ ತಾಯಿ!

ಕರಿಶ್ಮಾ ಕಪೂರ್ ಮಗ ಕಿಯಾನ್ ಮತ್ತು ಮಗಳು ಸಮೈರಾ ಜೊತೆ ಭೇಟಿ ನೀಡಿದ್ದರು. ಕರಿಶ್ಮಾ ಪತಿಯಿಂದ ದೂರ ಆದ ಮೇಲೆ ಇದೇ ಮೊದಲ ಬಾರಿಗೆ ಪತಿ ಸಂಜಯ್ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಕರಿಶ್ಮಾ ಕಪೂರ್ ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಿರುವಾಗ ಪಾಪರಾಜಿಗಳಿಗೆ ಕೈ ಬೀಸಿ ಹೋಗಿದ್ದಾರೆ. ಇನ್ನೂ ಸಂಜಯ್ ಕಪೂರ್ ಪುತ್ರನ ಜೊತೆ ಎಂಟ್ರಿ ಕೊಟ್ಟರು. ಕರಿಶ್ಮಾ ಮತ್ತು ಸಂಜಯ್ ಕಪೂರ್ ಪುತ್ರ ಕಿಯಾನ್ 13ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಿಯಾನ್‌ಗೆ ಚಿಕ್ಕಮ್ಮ ಕರೀನಾ ಕಪೂರ್ ಕೂಡ ವಿಶೇಷವಾದ ವಿಶ್ ತಿಳಿಸಿದ್ದಾರೆ. 

ಒಬ್ಬನಿಗಾಗಿ ಇಬ್ಬರು ಬಾಲಿವುಡ್​ ನಟಿಯರ ಫೈಟ್​: ನಿಜ ಜೀವನದ ಇಂಟರೆಸ್ಟಿಂಗ್​ ಲವ್​ ಸ್ಟೋರಿ

ಕರಿಶ್ಮಾ ಕಪೂರ್ ವಿಚ್ಛೇದನದ ಬಳಿಕ ಒಂಟಿಯಾಗಿ ಜೀವಿಸುತ್ತಿದ್ದಾರೆ. ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಕರಿಶ್ಮಾ ಸಿನಿಮಾದಿಂದ ದೂರ ಇದ್ದಾರೆ. ಅನೇಕ ವರ್ಷಗಳ ಬಳಿಕ ಕರಿಶ್ಮಾ ಬಣ್ಣ ಹಚ್ಚುತ್ತಿದ್ದು ಮರ್ಡರ್ ಮುಬಾರಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ಇನ್ನು ಕರಿಶ್ಮಾ ಅವರಿಂದ ದೂರ ಆದ ಸಂಜಯ್ ಕಪೂರ್ 2017ರಲ್ಲಿ   ಪ್ರಿಯಾ ಸಚ್‌ದೇವ್ ಅವರನ್ನು ಮದುವೆಯಾದರು. ಅವರಿಗೆ ಅಜಾರಿಯಾಸ್ ಕಪೂರ್ ಎನ್ನುವ ಮಗನಿದ್ದಾರೆ. ಪ್ರಿಯಾ ಸಚ್‌ದೇವ್ ಆಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಮೊದಲ ಪತಿಯಿಂದ ಸಫೀರಾ ಎನ್ನುವ ಮಗಳಿದ್ದಾಳೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ ಸಲೀಮ್ ಅಂತಿಮ ನಮನಕ್ಕಾದರೂ ದಾರಿ ಬಿಡಿ, ಪಾಪಾರಾಜಿ ವರ್ತನೆಗೆ ಸಹನೆ ಕಳೆದುಕೊಂಡ ಮಗ
Peddi Piracy: HD ಕ್ವಾಲಿಟಿಯಲ್ಲಿ 'ಪೆದ್ದಿ' ಪೈರಸಿ.. ರಿಲೀಸ್ ಆದ 3ನೇ ದಿನಕ್ಕೆ ರಾಮ್ ಚರಣ್ ಟೀಮ್‌ಗೆ ಶಾಕ್!