Priyanka Chopra: ನಿನ್ನದು ಸ್ಯಾಂಪಲ್​ ಸೈಜ್​ ಅಲ್ಲ ಎಂದ್ರು, ಪತಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತೆ ಎಂದ ಪಿಂಕಿ

Published : Mar 12, 2023, 03:28 PM ISTUpdated : Mar 12, 2023, 04:50 PM IST
Priyanka Chopra: ನಿನ್ನದು ಸ್ಯಾಂಪಲ್​ ಸೈಜ್​ ಅಲ್ಲ ಎಂದ್ರು, ಪತಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತೆ ಎಂದ ಪಿಂಕಿ

ಸಾರಾಂಶ

ಬಾಡಿ ಶೇಮಿಂಗ್​ ಕುರಿತು ಇದಾಗಲೇ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ಇದೀಗ ಸ್ಯಾಂಪಲ್​  ಸೈಜ್​ನಿಂದ ತಮಗಾಗಿರುವ ನೋವಿನ ಕುರಿತು ತಿಳಿಸಿದ್ದಾರೆ. ಏನಿದು ವಿಷಯ?  

ಬಾಡಿ ಶೇಮಿಂಗ್ (Body Shaming) ಎನ್ನುವುದು  ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ತಮ್ಮ ದೇಹದ ಕುರಿತು ದಿನನಿತ್ಯವೂ ಹಲವು ನಟ ನಟಿಯರು  ಹಿಂಸೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ಇದನ್ನು ತಾತ್ಸಾರ ಮಾಡಿದರೆ, ಇನ್ನು ಕೆಲವರು ಡಿಪ್ರೆಷನ್​ಗೆ (Depresion) ಹೋಗುವುದೂ ಇದೆ. ಇನ್ನು ಸೆಲೆಬ್ರಿಟಿಗಳು ಅದರಲ್ಲಿಯೂ ಸಿನಿಮಾ ತಾರೆಯರು ಹೀಗೆಯೇ ಇರಬೇಕು ಎಂದು ಬಯಸುವವರೇ ಹೆಚ್ಚು. ತೆಳ್ಳಗೆ, ಬೆಳ್ಳಗೆ, ಬಳಕುವ ಬಳ್ಳಿಯಂತೆ ಇರಬೇಕು ಎಂದು ಬಯಸಿದರೆ ಅವರ ದೇಹ ಸೌಂದರ್ಯ ಎದ್ದು ಕಾಣುವಂತಿರಬೇಕು ಎಂದೂ ಬಯಸುತ್ತಾರೆ. ಅದೇ ಕಾರಣಕ್ಕೆ ನಟಿಯರು ಏನೆಲ್ಲಾ ಚಿಕಿತ್ಸೆಗಳ ಮೊರೆ ಹೋಗುವುದೂ ಉಂಟು. ತಾವು ಅನುಭವಿಸಿರುವ ಬಾಡಿ ಶೇಮಿಂಗ್​ ಕುರಿತು ಇದಾಗಲೇ ಹಲವು ನಟಿಯರು ಮನಬಿಚ್ಚಿ ಮಾತನಾಡಿದ್ದರು.  ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಇತ್ತೀಚೆಗೆ ಈ ಕುರಿತು ಹೇಳಿಕೊಂಡಿದ್ದರು.  ದಕ್ಷಿಣ ಏಷ್ಯಾಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ  ತಾವು ಬಹಳಷ್ಟು ಸಂದರ್ಭಗಳಲ್ಲಿ ನೋವು, ಅವಮಾನ ಅನುಭವಿಸಿದ್ದುದಾಗಿ ಅವರು  ನೆನಪಿಸಿಕೊಂಡಿದ್ದರು.

'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು Black Cat) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ' ಎಂದಿದ್ದಾರೆ. ಮೈಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು ಎಂದು ಅವರು ವೇದಿಕೆಯಲ್ಲಿ ಹೇಳಿದ್ದಾರೆ. 'ನಾನು ಅಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಂಬಿದವಳು. ಆದರೆ ನನ್ನ ಚರ್ಮದ ಬಣ್ಣದಿಂದ ತುಂಬಾ  ಹಿಂಸೆ ಅನುಭವಿಸಿದೆ' ಎಂದಿದ್ದರು. 

ಇದೀಗ ತಾವು ಅನುಭವಿಸಿದ ಇನ್ನೊಂದು ಆಘಾತಕಾರಿ ವಿಷಯವನ್ನೂ ಪ್ರಿಯಾಂಕಾ ಬಹಿರಂಗಗೊಳಿಸಿದ್ದಾರೆ.  ತಮ್ಮ 22 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪುರುಷ ಸಹನಟನ ಸಂಭಾವನೆಗೆ ಸಮನಾದ ಮೊತ್ತವನ್ನು ಪಡೆದಿದ್ದೆ ಎಂದು ನಿನ್ನೆಯಷ್ಟೇ ಹೇಳಿಕೊಂಡಿದ್ದ ಪ್ರಿಯಾಂಕಾ, ಇದೇ ಸಂದರ್ಭದಲ್ಲಿ ಬಾಡಿ ಷೇಮಿಂಗ್​ ಕುರಿತು ಮಾತನಾಡಿದ್ದಾರೆ.  ತಮ್ಮ ವೆಬ್‌ಸರಣಿಯ ಪ್ರಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸೌತ್ ಬೈ ಸೌತ್‌ವೆಸ್ಟ್ ಫಿಲ್ಮ್ ಫೆಸ್ಟಿವಲ್ (SXSW) 2023 ನಲ್ಲಿ ಅಮೆಜಾನ್ ಸ್ಟುಡಿಯೋಸ್ (Amazon Studios) ಮುಖ್ಯಸ್ಥ ಜೆನ್ನಿಫರ್ ಸಾಲ್ಕೆ ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ಈ ವಿಷಯವನ್ನು ತಿಳಿಸಿದ್ದಾರೆ. 'ನನಗೆ ಕೇಳಲು ತುಂಬಾ ಕಷ್ಟಕರವಾದ ಅನೇಕ ವಿಷಯಗಳನ್ನು ಹೇಳಲಾಗಿದೆ, ನಿನ್ನದು ಸ್ಯಾಂಪಲ್​ ಸೈಜ್​ ಅಲ್ಲ ಎಂದು ಪದೇ ಪದೇ ಬಾಡಿ ಷೇಮಿಂಗ್​ ಮಾಡಲಾಯಿತು. ಇದರಿಂದ ನನಗೆ ತುಂಬಾ  ಬೇಸರವಾಯಿತು' ಎಂದು ಪ್ರಿಯಾಂಕಾ ಹೇಳಿದರು.

ಆರಂಭದ ದಿನಗಳಲ್ಲಿ ಕರಿಬೆಕ್ಕು ಎನ್ನುತ್ತಿದ್ದರು: ಘಟನೆ ನೆನೆದು ಭಾವುಕರಾದ Priyanka Chopra

ನನ್ನದು ಮಾದರಿಯ ಗಾತ್ರದಲ್ಲಿ ಇಲ್ಲ ಎಂಬ ಬಗ್ಗೆ ಮೇಲಿಂದ ಮೇಲೆ ಹೇಳಿದಾಗ, ನನಗೆ ದುಃಖ ತಡೆಯಲು ಆಗಲಿಲ್ಲ. ಈ ಬಗ್ಗೆ  ನನ್ನ ಕುಟುಂಬದೊಂದಿಗೆ ಮಾತನಾಡಿದೆ. ನಾನು ನನ್ನ ಪತಿ ಮತ್ತು ತಂಡದ ಮುಂದೆ ಇದೇ ವಿಷಯವಾಗಿ ತುಂಬಾ ಅಳುತ್ತಿದ್ದೆ. ನನ್ನದು ಸ್ಯಾಂಪಲ್​ ಸೈಜ್​ (Sample Size) ಅಲ್ಲದಿದ್ದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾರೆ. ಸ್ಯಾಂಪಲ್​ ಸೈಜ್​ ಹೀಗೆಯೇ ಇರಬೇಕು ಎಂದು ಹೇಳಿದವರು ಯಾರು? ಇದು ಬಹುತೇಕ ಎಲ್ಲರ ಸಮಸ್ಯೆ.  ಸ್ಯಾಂಪಲ್​ ಸೈಜ್​ ಅಂದರೆ ಹೇಗಿರಬೇಕು? ಪ್ಲಸ್​ 2 ಸೈಜ್​ ಅನ್ನೇ ಸ್ಯಾಂಪಲ್​ ಸೈಜ್​ ಎಂದುಕೊಂಡು ಮಾತನಾಡಿದರೆ ಅದು ಎಷ್ಟರಮಟ್ಟಿಗೆ ಸರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಇದೇ ವೇಳೆ, ಇದೇ ಮೊದಲ ಬಾರಿಗೆ ತಾವು ನಟನಷ್ಟೇ ಸಂಭಾವನೆ ಪಡೆದುಕೊಂಡಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.  ನನ್ನ 22 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ  ವೆಬ್ ಸರಣಿ 'ಸಿಟಾಡೆಲ್' ಗಾಗಿ  ಸಹ -ನಟನಿಗೆ ಸಮಾನವಾದ ಶುಲ್ಕವನ್ನು ಪಡೆದಿದ್ದೇನೆ ಎಂದಿದ್ದಾರೆ.   ನಾನು 22 ವರ್ಷಗಳಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು 70 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಎರಡು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಯಾವಾಗ ನಾನು ಸಿಟಾಡೆಲ್ (Citadel) ಮಾಡಿದ್ದೇನೆ, ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಬಾರಿಗೆ ನನಗೆ ಸಮಾನ ವೇತನ ಸಿಕ್ಕಿತು' ಎಂದು  ಪ್ರಿಯಾಂಕಾ ಹೇಳಿದರು. 

Priyanka Chopra: ಮೊದಲ ಬಾರಿಗೆ ಸಹನಟನಷ್ಟೇ ಸಂಭಾವನೆ ಪಡೆದ ಪ್ರಿಯಾಂಕಾ ಚೋಪ್ರಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ