60ರ ಪ್ರಾಯದಲ್ಲಿ ಮತ್ತೆ ಮಗು ಮಾಡಿಕೊಳ್ಳದಂತೆ ಪತಿಗೆ ಸಲಹೆ ನೀಡಿದ ಕರೀನಾ

By Anusha Kb  |  First Published Mar 31, 2022, 9:14 PM IST
  • ಜೀವನದ ಪ್ರಮುಖ ದಶಕಗಳಲ್ಲೇ ಮಗು ಪಡೆದಿರುವ ಸೈಫ್
  • 60 ರ ಪ್ರಾಯದಲ್ಲಿ ಮಕ್ಕಳ ಪಡೆಯದಿರಿ ಎಂದ ಕರೀನಾ
  • ವೋಗ್‌ಗೆ ನೀಡಿದ ಸಂದರ್ಶನದಲ್ಲಿ ಕರೀನಾ ಮಾತು

ಪ್ರತಿ ದಶಕಗಳಿಗೊಮ್ಮೆ ಸೈಪ್‌ ಅಲಿಖಾನ್‌ ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ತಮ್ಮ 60 ರ ಪ್ರಾಯದಲ್ಲಿ ಮಕ್ಕಳನ್ನು ಪಡೆಯದಂತೆ ಸೈಫ್‌ ಅಲಿಖಾನ್‌ಗೆ ಪತ್ನಿ ಕರೀನಾ ಕಪೂರ್ ಎಚ್ಚರಿಕೆ ನೀಡಿದ್ದಾರೆ. 2012ರಲ್ಲಿ ವಿವಾಹವಾದ ಬಾಲಿವುಡ್‌ ಜೋಡಿ ಸೈಫ್‌ ಅಲಿಖಾನ್‌ (Saif Ali Khan) ಹಾಗೂ ಕರೀನಾ ಕಪೂರ್‌ (Kareena Kapoor) ದಂಪತಿಗಳು ಈಗಾಗಲೇ ತೈಮೂರ್ (Taimur)  ಮತ್ತು ಜೆಹ್ (Jeh) ಎಂಬ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಸೈಫ್‌ ಅಲಿಖಾನ್‌ಗೆ ತಮ್ಮ ಮೊದಲ ಮದುವೆಯಲ್ಲಿ ತಮ್ಮ ಮಾಜಿ ಪತ್ನಿ ಅಮೃತಾ ಸಿಂಗ್ (Amrita Singh) ಅವರ ಜೊತೆ,  ಸಾರಾ ಅಲಿ ಖಾನ್ (Sara Ali Khan) ಮತ್ತು ಇಬ್ರಾಹಿಂ ಅಲಿ ಖಾನ್ (Ibrahim Ali Khan) ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕರೀನಾ ತಮ್ಮ ಪತಿ ಸೈಫ್ ಜೀವನವನ್ನು ಗಮನಿಸಿದಂತೆ ಸೈಫ್‌ ತಮ್ಮ ಜೀವನದ ಪ್ರತಿ ದಶಕದಲ್ಲಿ  ಇಪ್ಪತ್ತು, ಮೂವತ್ತು, ನಲವತ್ತು ಮತ್ತು ಐವತ್ತರಲ್ಲಿ ಮಗುವನ್ನು ಪಡೆದಿದ್ದಾರೆ ಎಂದು ಹೇಳಿದ್ದು ಇನ್ನು 60ರ ದಶಕದಲ್ಲೂ ಮಗು ಪಡೆಯದಂತೆ ಆಕೆ ಪತಿಗೆ ಸಲಹೆ ನೀಡಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ಕರೀನಾ ಕಪೂರ್ ಹಾಕುವ  ಪೋಸ್ಟ್‌ಗಳಲ್ಲಿ ಆಗಾಗ್ಗೆ ಅವರ ಪತಿ ಸೈಫ್ ಅಲಿ ಖಾನ್ ಮತ್ತು ಪುತ್ರರಾದ ತೈಮೂರ್ ಮತ್ತು ಜೆಹ್  ಇರುತ್ತಾರೆ. ವೋಗ್‌ಗೆ ನೀಡಿದ ಸಂದರ್ಶನದಲ್ಲಿ ಕರೀನಾ ತನ್ನ ಪತಿಯ ಬಗ್ಗೆ ಕೊಂಡಾಡಿದ್ದರು. ಸೈಫ್ ಅಲಿ ಅವರು ತಮ್ಮ ಮಕ್ಕಳೊಂದಿಗೆ ಬೆಳೆಸಿದ ರೀತಿಗೆ ನಟಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಸೈಫ್ ಅವರ ಹಿರಿಯ ಮಗಳಾದ ಸಾರಾ ಮತ್ತು ಅವರ ನಾಲ್ಕು ಮಕ್ಕಳಲ್ಲಿ ಕಿರಿಯವನಾದದ ಜೆಹ್ ನಡುವೆ ಸುಮಾರು 25 ವರ್ಷಗಳ ಅಂತರವಿದೆ. ನಟಿ ಸೈಫ್ ಬಗ್ಗೆ ಮಾತನಾಡುತ್ತಾ, ಸೈಫ್ ಪ್ರತಿ ದಶಕದಲ್ಲಿ ಮಗುವನ್ನು ಹೊಂದಿದ್ದಾರೆ. ಸೈಫ್‌ ತಮ್ಮ ಇಪ್ಪತ್ತು, ಮೂವತ್ತು, ನಲವತ್ತು ಮತ್ತು ಈಗ ತನ್ನ ಐವತ್ತರ ವಯಸ್ಸಿನಲ್ಲಿ ಮಗು ಪಡೆದಿದ್ದಾರೆ. ಅವರ 60ರ ಪ್ರಾಯದಲ್ಲಿ ಇದು ಸಾಧ್ಯವಿಲ್ಲ ಎಂದು ಅವರಿಗೆ ನಾನು ಹೇಳಿದ್ದೇನೆ ಎಂದು ಕರೀನಾ ಸಂದರ್ಶನದಲ್ಲಿ ಹೇಳಿದ್ದಾರೆ.

Tap to resize

Latest Videos

ಜೇಹ್ Birthday ದಿನ ಒಂದೇ ಫ್ರೇಮ್‌ನಲ್ಲಿ ಸೈಫ್ 4 ಮಕ್ಕಳು ಸೆರೆಯಾಗಿದ್ಹೀಗೆ!

'ಸೈಫ್‌ನಷ್ಟು ವಿಶಾಲ ಮನಸ್ಸಿನ ವ್ಯಕ್ತಿ ಮಾತ್ರ ವಿಭಿನ್ನ ಹಂತಗಳಲ್ಲಿ ನಾಲ್ಕು ಮಕ್ಕಳ ತಂದೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ಅವರು ಎಲ್ಲರಿಗೂ ತಮ್ಮ ಸಮಯವನ್ನು ನೀಡುತ್ತಾರೆ. ಮತ್ತು ಈಗ, ಜೆಹ್ ಜೊತೆಯೂ ಕಾಲ ಕಳೆಯುತ್ತಿದ್ದು, ನಾವು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ಯಾವುದಾದರೂ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾದಾಗ ನಾನು ಅದೇ ಸಮಯದಲ್ಲಿ ಕೆಲಸ ಮಾಡದಿರಲು ಪ್ರಯತ್ನಿಸುತ್ತೇನೆ. ಹೀಗೆ ನಾವು ಬದುಕನ್ನು ಪರಸ್ಪರ ಬ್ಯಾಲೆನ್ಸ್ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು. 

ತಮ್ಮ ಮಗ ತೈಮೂರ್ ಜೊತೆ ಸೈಫ್ ಹಂಚಿಕೊಂಡಿರುವ ಬಾಂಧವ್ಯದ ಬಗ್ಗೆಯೂ ಕರೀನಾ ಮಾತನಾಡಿದ್ದಾರೆ. ಟಿಮ್ ಜನರನ್ನು ಇಷ್ಟಪಡುತ್ತಾನೆ. ಮನೆಯಲ್ಲಿ ಜನರಿದ್ದರೆ, ಅವನು ಅದರ ಭಾಗವಾಗಲು ಬಯಸುತ್ತಾನೆ. ಅವನು ಮಿನಿ ಸೈಫ್ ಕೂಡ, ರಾಕ್ ಸ್ಟಾರ್ ಆಗಲು ಬಯಸುತ್ತಾನೆ, ತನ್ನ ತಂದೆಯೊಂದಿಗೆ ಎಸಿ / ಡಿಸಿ ಮತ್ತು ಸ್ಟೀಲಿ ಡ್ಯಾನ್ ಕೇಳುತ್ತಾನೆ. ಅವರು ನಂಬಲಸಾಧ್ಯವಾದ ಬಂಧವನ್ನು ಹೊಂದಿದ್ದಾರೆ. ಟಿಮ್ ಕೂಡ 'ಅಬ್ಬಾ(ಅಪ್ಪ) ನನ್ನ ಉತ್ತಮ ಸ್ನೇಹಿತ.' ಎಂದು ಹೇಳುತ್ತಾನೆ ಎಂದು ಕರೀನಾ ಹೇಳಿಕೊಂಡಿದ್ದಾರೆ. 

ಶಾಹಿದ್‌ ಕಪೂರ್‌ ಹಿಂದೆ ಬಿದ್ದು ಪ್ರಪೋಸ್‌ ಮಾಡಿದ್ದರಂತೆ ಕರೀನಾ!

ಲಾಲ್‌ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮೀರ್‌ ಖಾನ್‌ಗೆ ನಾಯಕಿಯಾಗಿ ಕರೀನಾ ಕಪೂರ್‌ ನಟಿಸುತ್ತಿದ್ದರು ಚಿತ್ರೀಕರಣ ನಡೆಯುತ್ತಿದೆ. 
 

click me!