ಸಂಭಾವನೆ ಕಿರಿಕ್, ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ ನಟ ಶಿವಕಾರ್ತಿಕೇಯನ್!

Published : Mar 31, 2022, 12:48 PM IST
ಸಂಭಾವನೆ ಕಿರಿಕ್, ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ ನಟ ಶಿವಕಾರ್ತಿಕೇಯನ್!

ಸಾರಾಂಶ

ಸಿನಿಮಾ ರಿಲೀಸ್ ಅಗಿ ಮೂರು ವರ್ಷ ಆದರೂ ನಟನಿಗೆ ಸಂಭಾವನೆ ಕೊಟ್ಟಿಲ್ಲ. ಮಾತಿನ ಚಕಾಮಕಿ ಬೇಡವೆಂದು ಕೋರ್ಟ್‌ ಮೆಟ್ಟಿಲೇರಿದ ನಟ. 

ತಮಿಳು ಚಿತ್ರರಂಗದ ಸಿಂಪಲ್ ಮತ್ತು ಹಂಬಲ್ ನಟ ಶಿವಕಾರ್ತಿಕೇಯನ್ ಸಿನಿಮಾ ಪ್ರಚಾರ ಹೊರತು ಪಡಿಸಿ ಎಂದೂ ಹೆಡ್‌ಲೈನ್‌ ಆದವರಲ್ಲ. ಪರ್ಸನಲ್ ವಿಚಾರ ಅಂದ್ರೆ ಮಗಳ ಗಾಯನ ಮಗನ ಜನನ, ಈ ಎರಡೇ ಸುದ್ದಿ ಆಗಿದ್ದು. ತಾನಾಯ್ತು ತನ್ನ ಕೆಲಸವಾಯ್ತು ಅಂದುಕೊಂಡು ಕೂಲ್ ಅಗಿರುವ ನಟ ಇದೀಗ ಸಂಭಾವನೆ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ಚಿತ್ರತಂಡದ ವಿರುದ್ಧ ದೂರು ದಾಖಲಿಸಿ ಹೈ ಕೋರ್ಟ್‌ ಮೆಟ್ಟಿಲೇರಿದ್ದಾರೆ. 

ಮಿಸ್ಟರ್ ಲೋಕಲ್ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದಾರೆ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಅದರೂ ನಿರ್ಮಾಪಕರು ಮಾತ್ರ ಮಾತುಕತೆ ಮಾಡಿದ ರೀತಿಯಲ್ಲಿ ಸಂಭಾವನೆ ಕೊಟ್ಟಿಲ್ಲ. ಎಷ್ಟೇ ಕೇಳಿದರೂ ದಿನ ತೆಳ್ಳುತ್ತಿದ್ದಾರೆ ಎಂದು ಸ್ಟುಡಿಯೋ ಗ್ರೀನ್ ಫಿಲಂಸ್‌ನ ನಿರ್ಮಾಪಕ ಜ್ಞಾನವೇಲ್ ರಾಜಾ ವಿರುದ್ಧ ಶಿವಕಾರ್ತಿಕ್ ಮದ್ರಾಸ್‌ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. 

ದೂರಿನಲ್ಲಿ ಏನಿದೆ:

ಮಿಸ್ಟರ್ ಲೋಕಲ್ ಸಿನಿಮಾ ಮಾಡಲು ಶಿವಕಾರ್ತಿಕೇಯನ್  15 ಕೋಟಿ ಸಂಭಾವನೆ ಎಂದು ಮಾತನಾಡಿದ್ದರಂತೆ. ನಿರ್ಮಾಪಕರು 11 ಕೋಟಿ ಕೊಟ್ಟು 4 ಕೋಟಿ ಉಳಿಸಿಕೊಂಡಿದ್ದಾರೆ. ಈ ಹಣವನ್ನು ನೀಡುವಂತೆ ಹಲವು ಬಾರಿ ಹೇಳಿದ್ದರೂ ಕೂಡ ನಿರ್ಮಾಣ ಸಂಸ್ಥೆ ಕೊಡುತ್ತಿಲ್ಲ. ನಮ್ಮ ನಡುವೆ ಮಾತಿನ ಚಕಾಮಕಿ ನಡೆದರೆ ಚಿತ್ರರಂಗದಲ್ಲಿ ಕಷ್ಟವಾಗುತ್ತದೆ ಕಾನೂನಿನ ಪ್ರಕಾರವೇ ನಡೆಯಲಿ ಎಂದು ಚಿತ್ರತಂಡ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ನಾಲ್ಕು ಕೋಟಿ ದೊಡ್ಡ ಮೊತ್ತವಾಗಿದ್ದು ನಿರ್ಮಾಪಕರು ನಟನಿಗೆ ಕೊಡಬೇಕಾದ ಹಣ ಮತ್ತು ಗೌರವ ಕೊಟ್ಟಿಲ್ಲ ಎಂದು ಸದ್ಯಕ್ಕೆ ಅವರು ಬ್ಯಾನರ್‌ನಲ್ಲಿ ಬರುವ ಎಲ್ಲಾ ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಇಂದು ಮಾರ್ಚ್ 31ರಂದು ನಡೆಸುತ್ತಿದಾರೆ.

ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಮಿಸ್ಟರ್ ಲೋಕಲ್ ಸಿನಿಮಾದಲ್ಲಿ ನಯನತಾರಾ ಅಭಿನಯಿಸಿದ್ದಾರೆ. ಈ ಸಿನಿಮಾ 2019ರಲ್ಲಿ ರಿಲೀಸ್ ಅಗಿತ್ತು. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಆಗಿದ್ದು ಎಂ ರಾಜೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಪ್ರಚಾರ ವೇಳೆನೂ ಸುದ್ದಿ ಆಗಲಿಲ್ಲ ಹಾಗೆ ಬಾಕ್ಸ್‌ ಆಫೀಸ್‌ನಲ್ಲಿ ಸೋತು  ಫ್ಲಾಪ್ ಸಿನಿಮಾಗಳ ಸಾಲು ಸೇರಿಕೊಂಡಿತ್ತು.

Puneeth Rajkumar Death: ಅಶ್ವಿನಿ ಅವರನ್ನು ಭೇಟಿಯಾಗಿ ಅಪ್ಪು ಅಗಲಿಕೆಗೆ ಸಾಂತ್ವನ ಹೇಳಿದ ನಟ ಶಿವ ಕಾರ್ತಿಕೇಯನ್

    ಶಿವ ಸಿನಿಮಾ ಸುದ್ದಿ:

    ಶಿವಕಾರ್ತಿಕೇಯನ್‌ ತಮ್ಮ ಮುಂದಿನ ಚಿತ್ರಕ್ಕೆ ಸಮಂತಾಳನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.  2018ರಲ್ಲಿ ಇಬ್ಬರು ಸೀಮರಾಜು ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು, ಆನ್‌ಸ್ಕ್ರೀನ್ ಕಾಂಬಿನೇಷನ್‌ ಸೂಪರ್ ಆಗಿದೆ ಮತ್ತೆ ಒಟ್ಟಿಗೆ ಅಭಿನಯಿಸಿ ಎಂದು ಅಭಿಮಾನಿಗಳು ಒತಾಯ ಮಾಡುತ್ತಿದ್ದರು. ಹೀಗಾಗಿ ಒಬ್ಬರು ಸೇರಿಕೊಂಡು ಬಿಗ್ ನ್ಯೂಸ್ ಬ್ರೇಕ್ ಮಾಡಿದ್ದಾರೆ. Vels Films International ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭಿಸಲು ತಂಡ ಪ್ಲ್ಯಾನ್ ಮಾಡುತ್ತಿದೆ. 

    18 ವರ್ಷಗಳ ನಂತರ ತಂದೆನೇ ಕೈ ಹಿಡಿದರು; ಗಂಡು ಮಗು ಬರ ಮಾಡಿಕೊಂಡ ನಟ ಶಿವ ಕಾರ್ತಿಕೇಯನ್!

    ಪ್ರಿಯಾಂಕಾ ಮೋಹನ್‌ ಜೊತೆ ಶಿವಕಾರ್ತಿಕೆಯನ್ ಅಭಿನಯಿಸಿರುವ ಡಾನ್ ಸಿನಿಮಾ ಮೇ 13ರಂದು ಬಿಡುಗಡೆಯಾಗುತ್ತಿದೆ.  ಅನುದೀಪ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಚಿತ್ರೀಕರಣ ಮಾಡುತ್ತಿದ್ದು ಶೀಘ್ರವೇ ಟೈಟಲ್ ಅನೌನ್ಸ್ ಮಾಡಬೇಕಿದೆ. ಹಾಗೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾ, ರಾಜ್‌ಕುಮಾರ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಶಿವ ನಟಿಸುತ್ತಿದ್ದು ಚಿತ್ರದ ಬಗ್ಗೆ ಯಾವ ಮಾಹಿತಿನೂ ರಿವೀಲ್ ಮಾಡಿಲ್ಲ. ಒಟ್ಟಿನಲ್ಲಿ ಈ ವರ್ಷ ಶಿವಕಾರ್ತಿಕೇಯನ್ ಸಖತ್ ಬ್ಯುಸಿಯಾಗಿದ್ದಾರೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ: ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ
    Funky Movie: ತೆಲುಗು ಸ್ಟಾರ್ ನಾಯಕರ ಚಿತ್ರಗಳಿಗೆ ಪೈಪೋಟಿ; ಹೆಸರೇ ಸೂಚಿಸುವಂತೆ ನಗುವಿನ ಸುರಿಮಳೆ ಗ್ಯಾರಂಟಿ!