ಕರೀನಾ ಕಪೂರ್‌ಗೆ ಹೆಣ್ಣು ಮಗು ಬೇಕಂತೆ! ಮತ್ತೇನಿವೆ ನಟಿಯ ಬಯಕೆ?

Suvarna News   | Asianet News
Published : Jan 24, 2021, 03:07 PM ISTUpdated : Jan 24, 2021, 03:38 PM IST
ಕರೀನಾ ಕಪೂರ್‌ಗೆ ಹೆಣ್ಣು ಮಗು ಬೇಕಂತೆ! ಮತ್ತೇನಿವೆ ನಟಿಯ ಬಯಕೆ?

ಸಾರಾಂಶ

ಕರೀನಾ ಕಪೂರ್ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ತನಗೆ ಹೆಣ್ಣು ಮಗು ಬೇಕು ಅನ್ನೋ ಆಸೆ ತುಂಬಾ ಕಾಡ್ತಿದೆಯಂತೆ.  

ಪ್ರೆಗ್ನೆಂಟ್ ಕರೀನಾ ಕಪೂರ್ ಇವತ್ತೂ ನಾಳೇನೋ ಡೆಲಿವರಿ ಮಾಡ್ಕೋಬಹುದು ಎಂಬ ನಿರೀಕ್ಷೆಯಲ್ಲಿದೆ ಬಾಲಿವುಡ್. ಕಳೆದ ವರ್ಷ ಆಗಸ್ಟ್‌ನಲ್ಲೇ ಕರೀನಾ- ಸೈಫ್ ಜೋಡಿ ತಮ್ಮ ಎರಡನೇ ಮಗುವಿನ ಆಗಮನದ ಸೂಚನೆ ಕೊಟ್ಟಿದ್ದರು. ಆಗ ಟ್ವಿಟ್ಟರ್‌ನಲ್ಲೂ ಮೀಡಿಯಾದಲ್ಲೂ ತುಂಬಾ ಮಂದಿ ಆಕೆಗೆ ಶುಭಹಾರೈಕೆ ಹೇಳಿದ್ದಲ್ಲದೆ ಪ್ರೆಗ್ನೆನ್ಸಿ ಡಯಟ್ ಮತ್ತು ಎಕ್ಸರ್‌ಸೈಸ್‌ನ ಬಿಟ್ಟಿ ಸಲಹೆಗಳನ್ನೂ ಕೊಟ್ಟಿದ್ದರು. ಅದಿರಲಿ.


ಮೊದಲ ಬಾರಿ ಪ್ರೆಗ್ನೆಂಟ್ ಆದಾಗ ಕರೀನಾ, ತಮಗೆ ಹೆಣ್ಣು ಮಗು ಆಗಲಿ ಅಂತ ತುಂಬಾ ಆಶೆಪಟ್ಟಿದ್ದರು. ಹೋದಲ್ಲಿ ಬಂದಲ್ಲಿ ಅವರನ್ನು ಕೆಲವು ಮಂದಿ, ನಿಮ್ಮ ಹೊಟ್ಟೇಲಿರೋ ಮಗು ಯಾವುದು, ಗೊತ್ತಾ ಅಂತ ಕೇಳಿದ್ದೂ ಉಂಟು. ಹಾಗೆ ಪತ್ತೆ ಮಾಡೋದು ಅಪರಾಧ ಮಾತ್ರವಲ್ಲ, ಪತ್ತೆ ಮಾಡಿ ಏನಾಗಬೇಕಿದೆ? ಮಗು ಹೆಣ್ಣಾಗಲಿ, ಗಂಡಾಗಲಿ, ಅದರಿಂದ ಏನು ವ್ಯತ್ಯಾಸ ಆಗುತ್ತೆ? ಇಂದು ಎಷ್ಟೋ ಮಂದಿ ಒಂದು ಹೆಣ್ಣು ಮಗುವಿಗೇ ತಮ್ಮ ತಾಯ್ತನ- ತಂದೆತನ ಸಾಕು ಅಂತ ಮುಂದಿನ ಮಗು ಮಾಡಿಕೊಳ್ಳದೆ ಸ್ಟಾಪ್ ಮಾಡ್ತಾ ಇಲ್ವೇ? ಯಾಕೆಂದರೆ ಪಿತೃತ್ವ- ಮಾತೃತ್ವ ಅನುಭವಿಸೋಕೆ ಮಗು ಹೆಣ್ಣಾಗಲಿ- ಗಂಡಾಗಲಿ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಹೆಣ್ಣು ಮಗುವೇ ಗಂಡಿಗಿಂತ ಹೆಚ್ಚು ನನ್ನ ಆಯ್ಕೆ. ಹೆಣ್ಣು ಮಕ್ಕಳು ಇಂದು ಯಾವ ರೀತಿಯಲ್ಲೂ ಗಂಡಿಗೆ ಹೋಲಿಸಲಾಗದ ರೀತಿಯಲ್ಲಿ ಉನ್ನತ ಮಟ್ಟದಲ್ಲಿದ್ದಾರೆ. ಅದರಲ್ಲೂ ಹೆತ್ತವರನ್ನು ಪ್ರೀತಿಸುವ ಮತ್ತು ನೋಡಿಕೊಳ್ಳುವ ವಿಚಾರದಲ್ಲಿ ಅವರಷ್ಟು ಆತ್ಮೀಯತೆ ಸಾಧಿಸೋಕೆ ಗಂಡಿನಿಂದ ಸಾಧ್ಯವಿಲ್ಲ. ನಂಗೆ ಹೆಣ್ಣು ಮಗುವಾಗೋದೇ ಇಷ್ಟ. ಆದರೆ ಗಂಡು ಮಾಗುವಾದರೂ ಇಷ್ಟವೇ, ಅಂತ ಹೇಳಿದ್ದರು ಕರೀನಾ ಕಪೂರ್. 

ಈ ನಟನಿಗಾಗಿ ಕರೀನಾ ರಕ್ತನಾಳವನ್ನೇ ಕತ್ತರಿಸಿ ಕೊಂಡಿದ್ರಾ? ...

ಹಾಗೆ ಮೊದಲ ಮಗು ಗಂಡಾಯಿತು. ಎರಡನೇ ಪ್ರೆಗ್ನೆನ್ಸಿಯ ಹೊತ್ತಿಗೆ ಕರೀನಾ ಮನೆಯಿಂದ ಹೊರ ಬಂದಿರಲಿಲ್ಲ, ಯಾವ ಶೂಟಿಂಗ್‌ನಲ್ಲೂ ಕಾಣಿಸಕೊಂಡಿಲ್ಲ. ಕಾರಣ ಕೊರೊನಾ ಪ್ಯಾಂಡೆಮಿಕ್. ಆದರೆ ತನ್ನ ಪ್ರೆಗ್ನೆನ್ಸಿಯ ಟಪ್‌ಡೇಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಕೊಡ್ತಾ ಇದಾರೆ. ಈಗಲೂ ಆಕೆಗೆ ಹೆಣ್ಣು ಮಗುವಿನ ಆಸೆ ಇದೆ. ಅದನ್ನು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಕೂಡ. ಮೊದಲ ಮಗು ಗಂಡಾಗಿದೆಯಲ್ಲ, ಎರಡನೇ ಮಗುವಾದರೂ ಹೆಣ್ಣಾಗಲಿ ಎಂಬುದು ಅವರ ಆಸೆ. ನನ್ನ ಹೆತ್ತವರಿಗೆ ನಾನು ಒಂದು ಗಂಡು ಮಗುವಿಗಿಂತಲೂ ಹೆಚ್ಚಿನ ಕೆಲಸಗಳನ್ನು ಮಾಡಿದ್ದೇನೆ ಎಂಬುದು ಕರೀನಾ ಅವರ ಆತ್ಮವಿಶ್ವಾಸದ ಹೇಳಿಕೆ.

ಫೋಟೋಗ್ರಾಫರ್‌ ಮೇಲೆ ಕೋಪಗೊಂಡ ಕರೀನಾ ಸೈಫ್‌ ಪುತ್ರ ತೈಮೂರ್‌ ! ...

ಅದ ಹಾಗೆ, ಕರೀನಾಳ ಮೊದಲ ಮಗು ತೈಮೂರ್ ಅಲಿ ಖಾನ್‌ಗೆ ಈಗ ಐದು ವರ್ಷ. ಆತನಿಗೆ ದೊಡ್ಡವರಿಗಿಂತಲೂ ಕೆಲವು ವಿಷಯಗಳು ಈಗಲೇ ಬೇಗನೆ ಅರ್ಥವಾಗುತ್ತಿವೆ. ಉದಾಹರಣೆಗೆ ತಾನು ಪಾಪ್ಯುಲರ್ ನಟ, ನಟಿಯ ಮಗ ಎಂಬುದೂ ಈಗಲೇ ಗೊತ್ತಿದ್ದ ಹಾಗಿದೆ. ಆತ ಹೊರಗೆ ಕಾಲಿಟ್ಟ ಕೂಡಲೇ ಬಾಲಿವುಡ್ ಪಾಪರಾಜಿಗಳು ಬೆನ್ನು ಹತ್ತುತ್ತಾರೆ. ಜೊತೆಗಿರುವ ತಂದೆ ಸೈಫ್ ಅಲಿ ಖಾನ್, ಪಾಪರಾಜಿಗಳನ್ನು ದೂರ ಹೋಗುವಂತೆ ಕೈ ಸನ್ನೆ ಮಾಡುತ್ತಾನೆ. ಈ ತೈಮೂರ್ ಆದರೂ ಪಾಪರಾಜಿಗಳನ್ನು ಶೂಟ್ ಮಾಡುವಂತೆ, ಒದೆಯುವಂತೆ ಸನ್ನೆ ಮಾಡುತ್ತ ರೋಷಾವೇಶದಿಂದ ಕೂಗಾಡುತ್ತಾನೆ. ಬಹುಶಃ ಪಾಪರಾಜಿಗಳು ವಿಲನ್‌ಗಳು ಎಂಬುದನ್ನು ಈಗಾಗಲೇ ಸೈಫ್ ಮತ್ತು ಕರೀನಾ ಆತ ತಲೆಯಲ್ಲಿ ಫೀಡ್‌ ಮಾಡಿರಬಹುದು. ವಯಸ್ಸಿಗೆ ಮೀರಿದ ಕೊಬ್ಬು ಕೂಡ ತೈಮೂರ್ ತಲೆಯಲ್ಲಿ ತುಂಬಿಕೊಂಡಂತಿದೆ. ಇರಲಿ. ಇಷ್ಟು ಮಾಡಿಸಿಕೊಂಡರೂ ಪಾಪರಾಜಿ ಕ್ಯಾಮೆರಾಮನ್‌ಗಳು ಹಲ್ಲು ಗಿಂಜುತ್ತ ಅದನ್ನು ಕ್ಲಿಕ್ಕಿಸಿ ಪ್ರಸಾರ ಮಾಡುವುದನ್ನು ನೋಡುವುದೇ ಒಂದು ಮೋಜು.  ಸೆಲೆಬ್ರಿಟಿಗಳ ಮಕ್ಕಳಿಗೆ ಈ ಮೀಡಿಯಾ ಅಟೆನ್ಷನ್ ಒಂದು ಅನಿವಾರ್ಯ ಪ್ರಾರಬ್ಧ. ಪಾಪ್ಯುಲಾರಿಟಿಯ ಜೊತೆಗೆ ಇದನ್ನೂ ಅವರು ಎದುರಿಸಲೇಬೇಕು. 

ಕರೀನಾ ಕಪೂರ್ ಸೆಲ್ಫೀಗೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು! ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?