
ತೆಲುಗು ಚಿತ್ರರಂಗದ ಡಿಫರೆಂಟ್ ಫಿಲ್ಮ್ ಮೇಕರ್, ಕಾಂಟ್ರೋವರ್ಸಿ ಕಿಂಗ್ ರಾಮ್ ಗೋಪಾಲ್ ವರ್ಮಾ ಇದೀಗ ತಮ್ಮ ಮುಂದಿನ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಟೈಟಲ್ ಅನೌನ್ಸ್ ಮಾಡುತ್ತಾರೆ, ಇದ್ಯಾವುದಪ್ಪಾ ಅಂತ ಕನ್ಫ್ಯೂಸ್ ಆಗಬೇಡಿ, ಈ ಚಿತ್ರದ ಹೆಸರು 'ಡಿ ಕಂಪನಿ'.
ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್‌ರನ್ನು ಹೊಗಳಿ ಆರ್‌ಜಿವಿ ಟ್ಟೀಟ್!
ಗ್ಯಾಂಗ್‌ಸ್ಟರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವುದರಲ್ಲಿ ಆರ್‌ಜಿವಿಗೆ ಮಾಸ್ಟರ್ ಮೈಂಡಿದೆ. 'ಡಿ ಕಂಪನಿ' ಚಿತ್ರ ಕೇವಲ ದಾವುದ್ ಇಬ್ರಾಹಿಂ ಬಗ್ಗೆ ಮಾತ್ರವಲ್ಲ. ಆತನ ಆಳ್ವಿಕೆಯಲ್ಲಿ ಬದುಕಿ, ಸತ್ತ ಜನಪ್ರಿಯ ವ್ಯಕ್ತಿಗಳ ಬಗ್ಗೆಯೂ ಇದೆ. ಸ್ಪಾರ್ಕ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ,' ಎಂದು ಅರ್‌ಜಿವಿ ಟ್ಟೀಟ್ ಮಾಡಿದ್ದಾರೆ.
'ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಡಿ ಕಂಪನಿ ಸಿನಿಮಾ ಮಾಡುವುದಕ್ಕೆ ನಾನು ತುಂಬಾ ವ್ಯಕ್ತಿಗಳನ್ನು ಸಂಪರ್ಕ ಮಾಡಿರುವೆ. 20 ವರ್ಷಗಳ ಹಿಂದಿದ್ದ ರೌಡಿಗಳು, ದಾವುದ್ ಸಮಯದಲ್ಲಿ ಕರ್ತವ್ಯ ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಏನೂ ತಿಳಿಯದ ದಾವುದ್ ಬಲೆಗೆ ಸಿಲುಕಿಕೊಂಡಿದ್ದ ಅಮಾಯಕ ಶ್ರೀಸಾಮಾನ್ಯರು ಸೇರಿ ಎಲ್ಲರೊಟ್ಟಿಗೆ ಮಾತುಕತೆ ನಡೆಸಿ, ಸಿನಿಮಾ ತಯಾರಿಸಲು ಸಜ್ಜಾಗಿರುತ್ತೇನೆ. ಭೂಗತ ಲೋಕ ಅಂದ್ರೆ ಎಲ್ಲರಿಗೂ ಒಂದೇ ಕಲ್ಪನೆ ಇರುತ್ತದೆ, ಅದರಲ್ಲೂ ಏನಾದರೂ ಡಿಫರೆಂಟ್ ಆಗಿ ತೋರಿಸಬೇಕು ಎಂಬುದು ನನ್ನ ಆಸೆ,' ಎಂದು ಆರ್‌ಜಿವಿ ಹೇಳಿದ್ದಾರೆ.
ಲೇಡಿ ಬ್ರೂಸ್ಲಿ ಪೂಜಾ ಭಾಲೇಕರ್ ಇನ್ ಆರ್‌ಜಿವಿ ಸಿನಿಮಾ; ವಿಡಿಯೋ ನೋಡಿ!
'ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಮಾಫಿಯಾ ವಿಚಾರದ ಬಗ್ಗೆ ಅವರದ್ದೇ ರೀತಿಯಲ್ಲಿ ಚಿತ್ರ ಮಾಡಿ, ತೋರಿಸಿದ್ದಾರೆ. ಆದರೆ ನಾನು ನೈಜ ಘಟನೆ ಹೇಗಿತ್ತೋ ಹಾಗೆಯೇ, ಅದೇ ವ್ಯಕ್ತಿಗಳಿಂದಲೇ ನಟಿಸುವಂತೆ ಮಾಡಿ, ತೆರೆ ಮೇಲೆ ತೋರಿಸುವೆ. ದಾವೂದ್, ಛೋಟಾ ರಾಜನ್ ಬಗ್ಗೆ ತಿಳಿಯಬೇಕೆಂದರೆ ಈ ಚಿತ್ರ ನೋಡಬೇಕು,' ಎಂದು ವರ್ಮಾ ಹೇಳಿದ್ದಾರೆ.
ತೆಲುಗು, ಕನ್ನಡ, ತಮಿಳು ,ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಟೀಸರ್ ಈಗಾಗಲೇ ವೀಕ್ಷಕರ ಗಮನ ಸೆಳೆದಿದೆ. ಬಹುತೇಕ ಹೊಸ ಕಲಾವಿದರ ಜೊತೆ ಸಿನಿಮಾ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.