
ಬಾಲಿವುಡ್ ಯಂಗ್ ಮಮ್ಮಿ ಕರೀನಾ ಕಪೂರ್ ತೈಮೂರ್‌ಗೆ ಗರ್ಭಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ತೈಮೂರ್ ಹುಟ್ಟಿದ್ದಾಗಿನಿಂದಲೂ ಸ್ಟಾರ್ ಕಿಡ್ ಪಟ್ಟದಲ್ಲಿ ಮೊದಲ ಸ್ಥಾನ ಪಡೆದವ. ಆದರೆ ಎರಡನೇ ಮಗು ವಿಚಾರದಲ್ಲಿ ಕರೀನಾ ಹೇಗೆ ರಿಯಾಕ್ಟ್ ಮಾಡುತ್ತಿದ್ದಾರೆ ಗೊತ್ತಾ?
ತೈಮೂರ್ ಜೊತೆ ಕರೀನಾ ವಿಲೇಜ್ ವಾಕ್: ಫೋಟೋಸ್ ನೋಡಿ
ಮೊದಲ ಪ್ರಗ್ನೆಂನ್ಸಿ ಅಂದ್ಮೇಲೆ ಸ್ವಲ್ಪ ಕಷ್ಟ ಆಗುತ್ತದೆ, ಕುಟುಂಬಸ್ಥರ ಸಹಾಯವೂ ಬೇಕಾಗುತ್ತದೆ. ಆದರೆ ಎರಡನೇ ಮಗು ಹುಟ್ಟುವ ಸಮಯದಲ್ಲಿ ಕೆಲವೊಂದು ವಿಚಾರದಲ್ಲಿ ಮಾಸ್ಟರ್ ಆಗಿರುತ್ತೇವೆ. ಈಗ ನೋಡಿ ಕರೀನಾಗೆ ಯಾವ ಫುಡ್ ಬೇಕು, ಯಾವ ತಿಂಗಳಿನವರೆಗೂ ಪ್ರಯಾಣ ಮಾಡಬಹುದು, ಎಷ್ಟು ವ್ಯಾಯಾಮ ಮಾಡಬೇಕು ಎಂದೆಲ್ಲಾ ಕ್ಲಾರಿಟಿ ಸಿಕ್ಕಿದೆ.
ಇತ್ತೀಚಿಗೆ ಕರೀನಾ ಕಪೂರ್ ವರ್ಕೌಟ್ ಮಾಡುವಾಗ ಸೆರೆ ಹಿಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರೀನಾ ಮುಖದಲ್ಲಿ ಗ್ಲೋ ನೋಡಿ ಹೆಣ್ಣು ಮಕ್ಕಳು ಶಾಕ್ ಆಗಿದ್ದಾರೆ...ಇಷ್ಟೊಂದು ಎನರ್ಜಿ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. ಆದರೆ ಗೊತ್ತಲ್ಲ ಟ್ರೋಲ್ ಆದ್ಮೇಲೆ ಅಲ್ಲಿ ನೆಗೆಟಿವ್ ಕಮೆಂಟ್ಸ್ ಇದ್ದೇ ಇರುತ್ತವೆ. 'ಭಾರತದ ಮೊದಲ ಗರ್ಭಿಣಿ ಕರೀನಾ','ಮಾರ್ಕೆಟ್‌ನಲ್ಲಿ ತೈಮೂರ್ ರೀತಿಯದ್ದೇ ಮತ್ತೊಂದು ಪ್ರಾಡೆಕ್ಟ್ ಬರಲಿದೆ','ಕುಟುಂಬಕ್ಕೆ ಎರಡನೇ ಮಗುನೂ ಸಾಲಲ್ಲ, ಮತ್ತೊಂದು ಈಗಲೇ ಪ್ಲಾನ್ ಮಾಡಿ' ಎಂದು ಕಾಲೆಳೆದಿದ್ದಾರೆ.
ಹಿಮಾಚಲ ಪ್ರದೇಶದ ಹಸಿರಿನ ಮಧ್ಯೆ ಬಿಸಿ ಕಾಫಿ ಹೀರ್ತಿದ್ದಾರೆ ಪ್ರೆಗ್ನೆಂಟ್ ಕರೀನಾ
ಒಟ್ಟಿನಲ್ಲಿ ಎರಡನೇ ಮಗು ಜನಿಸುವವರಿಗೂ ಕರೀನಾ ಬೇಬಿ ಬಂಪ್ ಫೋಟೋ ಎಲ್ಲೆಡೆ ಕಾಣಬಹುದು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.