
ವರುಣ್ ಧವನ್ ಮತ್ತು ನತಾಶಾ ದಲಾಲ್ ಪತಿ ಪತ್ನಿಯಾಗಿದ್ದಾರೆ. ಈ ಕ್ಯೂಟ್ ಕಪಲ್ ಮದುವೆಗೆ ಬಾಲಿವುಡ್ ಬಾದ್ ಶಾ ಶರೂಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಕೂಡಾ ನೆರವಾಗಿದ್ದಾರೆ. ಹೇಗೆ ಗೊತ್ತಾ..?
ಈ ಜೋಡಿ ಮದುವೆ ಬಗ್ಗೆ ಫ್ಯಾಮಿಲಿಗೆ ಎಷ್ಟು ಎಕ್ಸೈಟ್‌ಮೆಂಟ್ ಇತ್ತೋ ಅಷ್ಟೇ ಕುತೂಹಲ ಸಂಭ್ರಮದಲ್ಲಿದ್ದರಯ ಫ್ಯಾನ್ಸ್. ಇಬ್ಬರೂ ಆಲಿಭಗ್‌ನಲ್ಲಿ ಮದುವೆಯಾಗುವುದಕ್ಕೆ ತೀರ್ಮಾನಿಸಿದ್ದರು.
ವಧುವಿಗೆ ಕೊಲೆ ಬೆದರಿಕೆ ಇದ್ರೂ ಸುಸೂತ್ರವಾಯ್ತು ವರುಣ್-ನತಾಶ ಮದುವೆ
ಕೊರೋನ ಕಾರಣದಿಂದ 50 ಜನರಿಗಷ್ಟೇ ಅವಕಾಶವಿತ್ತು. ಕೊರೋನಾ ಪರೀಕ್ಷೆ ಮಾಡಿರುವುದು ಕಂಪಲ್ಸರಿಯಾಗಿತ್ತು. ಅಂತೂ ಈ ಜೋಡಿ ಕೊರೋನಾ ನಿಯಮಗಳನ್ನು ಪಾಲಿಸಿ ಮದುವೆಯಾಗಿದ್ದಾರೆ.
ಬಾಲಿವುಡ್ ಹಂಗಾಮದ ಪ್ರಕಾರ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅಲಿಭಗ್‌ನಲ್ಲಿರುವ ಅವರ ಪ್ರಾಪರ್ಟಿಯನ್ನು ವರುಣ್ ವಿವಾಹಕ್ಕಾಗಿ ಬಿಟ್ಟುಕೊಟ್ಟಿದ್ದರು ಎನ್ನಲಾಗಿದೆ. ಎರಡೂ ಕಡೆಯ ಕುಟುಂಬ ಸದಸ್ಯರು ತಂಗುವುದಕ್ಕೆ ವ್ಯವಸ್ಥೆ ಮಾಡಲು ನೆರವಾಗಿದ್ದಾರೆ.
ಆಹಾರದ ತಟ್ಟೆಯೊಂದಿಗೆ ನೀರಲ್ಲಿ ತೇಲ್ತಾ ಇದ್ದಾರೆ ಸಾರಾ: ಮಾಲ್ಡೀವ್ಸ್ ಹಾಟ್ ಫೋಟೋಸ್
ವರುಣ್ ಧವನ್ ಮದುವೆಯಾಗುತ್ತಿದ್ದಾರೆ. ಅಲಿಭಗ್‌ನ ರೆಸಾರ್ಟ್‌ನಲ್ಲಿ ತಂಗಲಿದ್ದಾರೆ ಎಂದು ತಿಳಿದ ಶಾರೂಖ್ ಮತ್ತು ಗೌರಿ ತಮ್ಮ ಪ್ರಾಪರ್ಟಿಯನ್ನು ಅತಿಥಿಗಳಿಗಾಗಿ ಬಿಟ್ಟುಕೊಟ್ಟಿದ್ದಾರೆ. ಈ ಮನೆಯನ್ನು ಗೌರಿಯವರೇ ವಿನ್ಯಾಸ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.