ಕಾಫಿ ವಿತ್ ಕರಣ್ ಶೋ ಇನ್ನಿಲ್ಲ: ಬೇಸರದಲ್ಲಿ ಅಭಿಮಾನಿಗಳು

By Anusha KbFirst Published May 4, 2022, 3:06 PM IST
Highlights
  • ನಿರ್ದೇಶಕ ಕರಣ್‌ ಜೋಹರ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ
  • ಕಾಫಿ ವಿತ್ ಕರಣ್ ಶೋ ಇನ್ನಿಲ್ಲ ಎಂದ ಕರಣ್‌ ಜೋಹರ್‌
  • 2004 ರಲ್ಲಿ ಆರಂಭವಾದ ಕಾಫಿ ವಿತ್ ಕರಣ್‌  ಶೋ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಾವು ನಡೆಸಿಕೊಡುತ್ತಿದ್ದ ಕಾಫಿ ವಿತ್ ಕರಣ್ ಕಾರ್ಯಕ್ರಮ ಅಂತ್ಯವಾಗಿದ್ದು, ಇನ್ನು ಮುಂದೆ ಈ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. 2004 ರಲ್ಲಿ ಆರಂಭವಾದ ಕಾಫಿ ವಿತ್ ಕರಣ್‌ ಕಾರ್ಯಕ್ರಮ ಭಾರಿ ಜನಮನ್ನಣೆಯೊಂದಿಗೆ ಇದುವರೆಗೆ ಆರು ಸೀಸನ್‌ಗಳು ಸಂಪೂರ್ಣಗೊಳಿಸಿದೆ. ಈ ಟಾಕ್‌ ಶೋ ಇನ್ಮುಂದೆ ಇರುವುದಿಲ್ಲ ಎಂದು ಕರಣ್‌ ಹೇಳಿದ್ದಾರೆ.

ಬಾಲಿವುಡ್ ನಟ ನಟಿಯರನ್ನು ಕರೆದು ಈ ಶೋನಲ್ಲಿ ಅವರ ವೈಯಕ್ತಿಕ ಬದುಕು ಸಾಧನೆ ಬಗ್ಗೆ ಮಾತಾನಾಡಿಸಲಾಗುತ್ತಿತ್ತು. ಹೀಗಾಗಿ ಬಾಲಿವುಡ್ ನಟ ನಟಿಯರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಬಗ್ಗೆ ತಿಳಿಯಲು ಈ ಶೋವನ್ನು ನೋಡುತ್ತಿದ್ದರು. ಹೀಗಾಗಿ ಈ ಟಾಕ್ ಶೋ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದಾಗ್ಯೂ, ಆರು ಯಶಸ್ವಿ ಸೀಸನ್‌ಗಳ ನಂತರ ಪ್ರದರ್ಶನವು ಈಗ ಅಂತ್ಯಗೊಂಡಿದೆ.

 
 
 
 
 
 
 
 
 
 
 
 
 
 
 

Latest Videos

A post shared by Karan Johar (@karanjohar)

 

ಮಂಗಳವಾರ, ಚಲನಚಿತ್ರ ನಿರ್ಮಾಪಕ ಮತ್ತು ಕಾರ್ಯಕ್ರಮದ ನಿರೂಪಕ, ಕರಣ್ ಜೋಹರ್, ಕಾಫಿ ವಿತ್ ಕರಣ್ ಟಾಕ್‌ ಶೋದ ಇನ್ನು ಮುಂದೆ ನಡೆಯುವುದಿಲ್ಲ ಎಂಬ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. 'ಕಾಫಿ ವಿತ್ ಕರಣ್ ನನ್ನ ಮತ್ತು ನಿಮ್ಮ ಜೀವನದ ಭಾಗವಾಗಿದೆ, ಈಗ ಈ ಶೋಗೆ 6 ಸೀಸನ್‌ಗಳಾಗಿವೆ. ನಾವು ಪ್ರಭಾವ ಬೀರಿದ್ದೇವೆ ಮತ್ತು ಪಾಪ್ ಸಂಸ್ಕೃತಿಯ ಇತಿಹಾಸದಲ್ಲಿ ನಮ್ಮ ಸ್ಥಾನವನ್ನು ಕಂಡುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಇನ್ನು ಮುಂದೆ ಕಾಫಿ ವಿತ್ ಕರಣ್  ಶೋ ಮುಂದುವರೆಯುವುದಿಲ್ಲ  ಎಂದು ನಾನು ಭಾರವಾದ ಹೃದಯದಿಂದ ಘೋಷಿಸುತ್ತೇನೆ ಎಂದು ಕರಣ್ ಬರೆದುಕೊಂಡಿದ್ದಾರೆ.

7 ವರ್ಷದ ಬಳಿಕ ಮತ್ತೆ ತೆರೆಮೇಲೆ ಶಾರುಖ್-ಕಾಜೋಲ್ ಜೋಡಿ; ಕರಣ್ ಜೋಹರ್‌ಗೆ ಥ್ಯಾಂಕ್ಸ್ ಎಂದ ಫ್ಯಾನ್ಸ್

ಕರಣ್ ಈ ಸುದ್ದಿಯನ್ನು ಹಂಚಿಕೊಂಡ ತಕ್ಷಣವೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಿಯೂ ದುಃಖಕರವಾಗಿದೆ. ನಾನು ಈ ಕಾರ್ಯಕ್ರಮವನ್ನು ನೋಡುತ್ತಾ ಬೆಳೆದಿದ್ದೇನೆ ಮತ್ತು ಯಾವಾಗಲೂ ಹೊಸ ಸೀಸನ್‌ಗಳಿಗಾಗಿ ಎದುರು ನೋಡುತ್ತಿದೆ.  ನಾನು ಎಲ್ಲಾ ಸಂಚಿಕೆಗಳನ್ನು ನೋಡುವ ಮೂಲಕ ಈ ಶೋ ನನ್ನ ಮನಸ್ಥಿತಿಯನ್ನು ಹಗುರಗೊಳಿಸುತ್ತಿತ್ತು. ಆದರೆ ಈ ಶೋ ಇನ್ನು ಬರುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

Koffee with Karan ಮತ್ತೆ ಶುರು: ಹಿಂದಿ ಶೋನಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸೆಲೆಬ್ರಿಟಿ?

ಕಾಫಿ ವಿತ್ ಕರಣ್ ನವೆಂಬರ್ 2004ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಯಿತು. ಅದರ ಆರನೇ ಮತ್ತು ಕೊನೆಯ ಸೀಸನ್ 2018 ರಲ್ಲಿ ಸ್ಟಾರ್ ವರ್ಲ್ಡ್‌ನಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು. ಆರು ಸೀಸನ್‌ಗಳಲ್ಲಿ, ಕಾಫಿ ವಿತ್ ಕರಣ್‌ ಕಾರ್ಯಕ್ರಮವೂ ಕೆಲವು ಸ್ಮರಣೀಯ, ವಿವಾದಾತ್ಮಕ ಮತ್ತು ಸಾಂಪ್ರದಾಯಿಕ ಕ್ಷಣಗಳನ್ನು ವೀಕ್ಷಕರಿಗೆ ನೀಡಿದೆ. 2021 ರಲ್ಲಿ, ಕರಣ್ ಜೋಹರ್, ಕಾಫಿ ವಿತ್ ಕರಣ್ ವಿಶೇಷ ಸಂಚಿಕೆಗಳನ್ನು ಆಯೋಜಿಸಿದ್ದರು. ಪ್ರಸ್ತುತ, ಕರಣ್ ತಮ್ಮ ನಿರ್ದೇಶನದ  ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Ki Prem Kahani) ಸಿನಿಮಾ ಪ್ರಾಜೆಕ್ಟ್‌ನಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ರಣವೀರ್ ಸಿಂಗ್ (Ranveer Singh) ಮತ್ತು ಆಲಿಯಾ ಭಟ್ (Alia Bhatt) ಮುಖ್ಯ ಭೂಮಿಕೆಯಲ್ಲಿದ್ದಾರೆ.

click me!