24 ಗಂಟೆ ಕಾಮಿಡಿ ಮಾಡೋಕಾಗಲ್ಲ, ನಾನೇನು ಅಂತ ಸಾಬೀತು ಮಾಡಬೇಕು: 'ಜ್ವಿಗಾಟೊ' ಕಪಿಲ್ ಶರ್ಮಾ

By Vaishnavi ChandrashekarFirst Published Mar 2, 2023, 1:37 PM IST
Highlights

ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜ್ವಿಗಾಟೊ ಸಿನಿಮಾ ನೋಡಿ ಕಣ್ಣಿರಿಟ್ಟ ಸೌತ್ ಕೊರಿಯಾ ಜನತೆ. ನಂದಿತಾ ದಾಸ್  ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶಹನಾ ಗೋಸ್ವಾಮಿ ಕೂಡ ಅಭಿನಯಿಸಿದ್ದಾರೆ. 

ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಅಭಿನಯಿಸಿರುವ ಜ್ವಿಗಾಟೊ ಚಿತ್ರದ ಎರಡನೇ ಟ್ರೈಲರ್‌ನ ಮುಂಬೈನಲ್ಲಿ ಬಿಡುಗಡೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ನಡೆದ ಪ್ರೆಸ್‌ಮೀಟ್‌ನಲ್ಲಿ ಚಿತ್ರೀಕರಣ ಹೇಗಿತ್ತು? ಮೇಕಿಂಗ್ ಹೇಗಿತ್ತು ಹಾಗೂ ಯಾರೆಲ್ಲಾ ಸಿನಿಮದಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದ್ದರು. ಈ ವೇಳೆ ಸಿನಿಮಾವನ್ನು ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗಿತ್ತು ಆಗ ಸೌತ್ ಕೊರಿಯಾ ಜನರು ಹೇಗೆ ರಿಯಾಕ್ಟ್ ಮಾಡಿದರು ಎಂದು ಕಪಿಲ್ ಹಂಚಿಕೊಂಡಿದ್ದಾರೆ.

'ಜ್ವಿಗಾಟೊ ಸಿನಿಮಾ ಸೌತ್ ಕೊರಿಯಾ ಜನರಿಗೆ ತುಂಬಾನೇ ಇಷ್ಟವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಕಣ್ಣೀರಿಡುತ್ತಿದ್ದರು. ಸಿನಿಮಾ ನೋಡಿದ ಜನರಿಗೆ ನಾನು ಯಾರು ನನ್ನ ಹಿನ್ನಲೆ ಏನೆಂದು ಗೊತ್ತಿಲ್ಲ. ಅಷ್ಟೇ ಅಲ್ಲ ನನ್ನ ಪಾತ್ರ ನೋಡಿ ಕಣ್ಣಿರಿಟ್ಟಿದ್ದಾರೆ ಆದರೆ ಅವರಿಗೆ ನಾನು ಹಾಸ್ಯ ನಟ ಅನ್ನೋದು ಗೊತ್ತಿಲ್ಲ. ಹೀಗಾಗಿ ಸಿನಿಮಾ ಮೇಲೆ ವೀಕ್ಷಕರಿಗೆ ಇರುವ ನಿರೀಕ್ಷೆ ಹುಸಿಯಾಗುವುದಿಲ್ಲ' ಎಂದು ಕಪಿಲ್ ಶರ್ಮಾ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದಾರೆ.

Latest Videos

ಜ್ವಿಗಾಟೊ ಸಿನಿಮಾದಲ್ಲಿ ಕಪಿಲ್ ಶರ್ಮಾ ಪುಡ್‌ ಡೆಲಿವರ್ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಫ್ಯಾಕ್ಟರ್ ಫ್ಲೋ ಮ್ಯಾನೇರ್‌ ಆಗಿದ್ದ ಹುಡುಗ ಕೆಲಸ ಕಳೆದುಕೊಂಡು ಜ್ವಿಗಾಟೊದಲ್ಲಿ ಕೆಲಸ ಪಡೆದುಕೊಂಡ ಆ ಆಪ್‌ನಿಂದ ಏನೆಲ್ಲಾ ಸಮಸ್ಯೆ ಆಗಿತ್ತು ಆನಂತರ ಜೀವನದಲ್ಲಿ ಸೆಟಲ್ ಆಗುವುದಕ್ಕೆ ಎಷ್ಟು ಕಷ್ಟ ಪಡುತ್ತಾರೆಂದು ತೋರಿಸಲಾಗಿದೆ. ಈ ಚಿತ್ರದಲ್ಲಿ ಕಪಿಲ್ ಪತ್ನಿಯಾಗಿ ಶಹನಾ ಗೋಸ್ವಾಮಿ ಅಭಿನಯಿಸಿದ್ದಾರೆ. ಕೆಲಸ ಮಾಡಿ ಮನೆ ನೋಡಿಕೊಳ್ಳಬೇಕು ಎಂದು ಆಸೆ ಪಡುವ ಮಹಿಳೆ ಪಾತ್ರವಿದು. 

'ಕಾರ್ಯಕ್ರಮದಲ್ಲಿ ದಿನಕ್ಕೆ 2 ಗಂಟೆಗಳ ಕಾಲ ನಾನ್ ಸ್ಟಾಪ್ ಕಾಮಿಡಿ ಮಾಡುವ ವ್ಯಕ್ತಿ ನಾನು. ಆದರೆ 24 ಗಂಟೆಗಳ ಕಾಲ ನಾನು ಹಾಗೆ ಇರುವೆ ಎಂದು ಜನರು ತಿಳಿದುಕೊಂಡಿದ್ದಾರೆ. ನನ್ನ ವ್ಯಕ್ತಿ ನನ್ನ ಪ್ರತಿಭೆಯನ್ನು ಜನರಿಗೆ ಈ ಸಿನಿಮಾ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿರುವೆ. ಸಿನಿಮಾ ನೋಡಿ ಯಾರು ಬೇಸರ ಮಾಡಿಕೊಳ್ಳುವುದಿಲ್ಲ ಟಿಕೆಟ್‌ಗೆ ಕೊಟ್ಟ  ಹಣ ಸರಿಯಾಗಿದೆ ಎಂದು ಖುಷಿ ಪಡುತ್ತಾರೆ. ಸಾಕಷ್ಟು ಜನರು ಸಿನಿಮಾ ಮಾಡುತ್ತಾರೆ. ಕಪಿಲ್ ಏನು ಮಾಡುತ್ತಾನೆ ಅನ್ನೋದು ಜನರ ಕ್ಯೂರಿಯಾಸಿಟಿ' ಎಂದು ಕಪಿಲ್ ಮಾತನಾಡಿದ್ದಾರೆ. 

Zwigato Trailer: ಡೆಲಿವರಿ ಬಾಯ್ ಪಾತ್ರದಲ್ಲಿ ಕಾಮಿಡಿಯನ್‌ ಕಪಿಲ್‌ ಶರ್ಮ

ಶೀಘ್ರದಲ್ಲಿ ಜ್ವಿಗಾಟೊ ಸಿನಿಮಾ ಬಿಡುಗಡೆ ಅಗಲಿದೆ. ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ಮೋಷನ್ ಪೋಸ್ಟರ್ ಹಂಚಿಕೊಂಡ ಕಪಿಲ್ 'ಈ ವರ್ಷದಲ್ಲಿ ಜನರು ಅತಿ ಹೆಚ್ಚು ನಿರೀಕ್ಷೆ ಮಾಡಿರುವ ಆಡರ್ ಶೀಘ್ರವೇ ನಿಮ್ಮ ಮುಂದೆ ಬರಲಿದೆ. ಮಾರ್ಚ್‌ 17ರಂದು ತೆರೆ ಕಾಣಲಿದೆ. ನಿಮ್ಮ ಪ್ರೀತಿಯಿಂದ ನಮ್ಮ ಫುಡ್ ಡೆಲಿವರಿ ರೈಡ್ ಸೂಪರ್ ಮಾಡಿ' ಎಂದು ಬರೆದುಕೊಂಡಿದ್ದಾರೆ. 

'ಜ್ವಿಗಾಟೊ ಸಿನಿಮಾ ಕೊನೆಗೂ ರೆಡಿಯಾಗಿದೆ. ಹೇಗೆ ನಮ್ಮ ಅರ್ಬನ್ ಇಂಡಿಯಾ ಎಕಾನಮಿ ಗಿಗ್‌ನಲ್ಲಿ ಸಿಲುಕಿಕೊಂಡಿದೆ. ಫುಡ್ ಆಡರ್‌ ಮಾಡುವುದು ಮಾಡರ್ನ್‌ ಜೀವನವನ್ನು ಹೇಗೆ ನಾರ್ಮಲ್ ಲೈಜ್ ಮಾಡಿದ್ದೀವಿ ಅನ್ನೋದು ಚಿತ್ರದಲ್ಲಿ ತೋರಿಸಲಾಗಿದೆ. ಸಮೀರ್ ನಾಯರ್‌ ನನಗೆ ಪರ್ಫೆಕ್ಟ್‌ ನಿರ್ಮಾಣದ ಪಾರ್ಟ್‌ನರ್. ಇದೊಂದು ಸಿಂಪಲ್ ಆಂಡ್ ಕಾಂಪ್ಲೆಕ್ಸ್‌  ಲೈಫ್ ಸಿನಿಮಾ' ಎಂದು ನಂದಿತಾ ಹೇಳಿದ್ದಾರೆ. 

click me!