
ಆಂಧ್ರ ಪ್ರದೇಶದ ವೈಎಸ್‌ಆರ್ ಕಡಪಾ ಜಿಲ್ಲೆಯ ಎರ್ಲಗುಂಟ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಯೊಂದರಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದೆ. ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ನೃತ್ಯ ಸಂಯೋಜನೆ ಮಾಡಲಾಗಿತ್ತು. ಈ ಹಾಡಿನಲ್ಲಿ ಬೆಂಕಿಯ ಎಫೆಕ್ಟ್ ಬಳಕೆ ಕೂಡ ನಡೆದಿತ್ತು. ಆದರೆ ಈ ವೇಳೆ ವೇದಿಕೆಯಲ್ಲಿ ಮಾಡಲಾದ ಸೆಟ್ಟಿಂಗ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾಗ, ಬೆಂಕಿ ಅಂದುಕೊಂಡಿದ್ದಕ್ಕಿಂತ ಜೋರಾಗಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕಮ್ಮಿ ಮಾಡಲು ಸಾಧ್ಯವಾಗಲೇ ಇಲ್ಲ.
ಈ ವೇಲೆ 'ವರಾಹ ರೂಪಂ' ಹಾಡಿಗೆ ನೃತ್ಯ ಮಾಡಲಿದ್ದ ಮಕ್ಕಳು ನೃತ್ಯ ಮಾಡಲಾಗದೇ ಒದ್ದಾಡಿಬಿಟ್ಟಿದ್ದಾರೆ. ಬೆಂಕಿಯ ಸರ್ಕಲ್‌ನಿಂದ ಹೊರಗೆ ಕೂಡ ಹೋಗಲಾರದೇ ಹಲವು ಮಕ್ಕಳು ಬೆಂಕಿಗೆ ಸಿಲುಕಿ ಸುಟ್ಟುಕೊಂಡಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನದಲ್ಲಿ ಅಲ್ಲಿದ್ಗ ಹಲವರಿಗೆ ಸುಟ್ಟ ಗಾಯಗಳಾಗಿವೆ. ಇಬ್ಬರು ಕಲಾವಿದರು ಸೇರಿದಂತೆ ಆರು ಮಕ್ಕಳಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಎರಡು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು ಕಂಬಳಕ್ಕೆ ರಜನಿಕಾಂತ್- ಐಶ್ವರ್ಯಾ ರೈ ಆಗಮನ..?
ನೃತ್ಯ ನಡೆಯುವ ವೇಳೆ ಪೊಲೀಸರು ಸ್ಥಳದಲ್ಲೇ ಇದ್ದರೂ ಮಕ್ಕಳ ಬಗ್ಗೆ ಲಕ್ಷ್ಯ ವಹಿಸಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕ್ಯಾನ್‌ಗಳಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಾಗ ಪ್ರಮಾಣ ಮೀರಿ ಪೆಟ್ರೋಲ್ ಸುರಿಯುತ್ತಿದ್ದರೂ ಅಲ್ಲಿದ್ದ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ ಎಂದ ನಡೆದ ದುರ್ಘಟನೆಗೆ ಅಲ್ಲಿದ್ದ ಪೊಲೀಸರನ್ನು ಮಾತಿನ ಮೂಲಕ ಆರೋಪಿಗಳನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ 'ಕಾಂತಾರ' ಹಾಡಿನ 'ಫಿಲ್ಮಿ' ಎಫೆಕ್ಟ್ ಮಾಡಲು ಹೋಗಿ ಬೆಂಕಿ ಅವಘಡ ಸಂಭವಿಸಿದೆ.
ಅಬ್ಬಬ್ಬಾ! ಇಷ್ಟು ಚಿಕ್ಕ ವಯಸ್ಸಿಗೆ ನಟಿ ಅಮೂಲ್ಯ ಮಕ್ಕಳು ಎಷ್ಟು ಸ್ಟೈಲ್ ಮಾಡ್ತಾರೆ ನೋಡಿ....
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.