ಪ್ರಭಾಸ್‌ನಿಂದ ಹೃತಿಕ್‌ವರೆಗೆ: ಸೂಪರ್‌ಸ್ಟಾರ್‌ಗಳಿಂದ ಕಾಂತಾರ ಚಾಪ್ಟರ್‌ 1 ಟ್ರೇಲರ್‌ ಲಾಂಚ್

Published : Sep 22, 2025, 08:32 AM IST
Kantara Chapter 1

ಸಾರಾಂಶ

ರಿಷಬ್ ಶೆಟ್ಟಿ ನಟನೆ ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ವಿವಿಧ ಭಾಷೆಗಳ ಟ್ರೇಲರ್‌ ಹೊಂಬಾಳೆ ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಇಂದು ಮಧ್ಯಾಹ್ನ 12.45ಕ್ಕೆ ವಿವಿಧ ಭಾಷೆಗಳ ಸೂಪರ್‌ಸ್ಟಾರ್‌ಗಳು ಈ ಟ್ರೇಲರ್‌ ಅನಾವರಣ ಮಾಡಲಿದ್ದಾರೆ.

ನವರಾತ್ರಿಯ ಮೊದಲ ದಿನವಾದ ಇಂದು (ಸೆ.22) ರಿಷಬ್ ಶೆಟ್ಟಿ ನಟನೆ ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ವಿವಿಧ ಭಾಷೆಗಳ ಟ್ರೇಲರ್‌ ಹೊಂಬಾಳೆ ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಇಂದು ಮಧ್ಯಾಹ್ನ 12.45ಕ್ಕೆ ವಿವಿಧ ಭಾಷೆಗಳ ಸೂಪರ್‌ಸ್ಟಾರ್‌ಗಳು ಈ ಟ್ರೇಲರ್‌ ಅನಾವರಣ ಮಾಡಲಿದ್ದಾರೆ.

ಹಿಂದಿ ಟ್ರೇಲರ್‌ ಅನ್ನು ಹೃತಿಕ್ ರೋಷನ್, ತೆಲುಗು ಟ್ರೇಲರ್‌ ಪ್ರಭಾಸ್‌, ತಮಿಳು ಟ್ರೇಲರ್‌ಗೆ ಶಿವ ಕಾರ್ತಿಕೇಯನ್‌ ಚಾಲನೆ ನೀಡಿದರೆ ಮಲಯಾಳಂ ಟ್ರೇಲರ್‌ ಅನ್ನು ಅಲ್ಲಿ ಸಿನಿಮಾ ವಿತರಣೆಯ ಹಕ್ಕು ಪಡೆದಿರುವ ಪೃಥ್ವಿರಾಜ್‌ ಸುಕುಮಾರನ್‌ ಅವರೇ ಬಿಡುಗಡೆಗೊಳಿಸಲಿದ್ದಾರೆ.

ಮೂಲ ಕನ್ನಡ ಟ್ರೇಲರ್‌ ಅನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬ ಪ್ರಶ್ನೆಗೂ ಹೊಂಬಾಳೆ ಫಿಲಂಸ್‌ ಉತ್ತರ ನೀಡಿದೆ. ‘ಕಾಂತಾರ ಸಿನಿಮಾವನ್ನು ಮೆಚ್ಚಿ ಬೆಳೆಸಿದ ಕನ್ನಡ ಜನತೆಯಿಂದ, ಕಾಂತಾರ ಚಾಪ್ಟರ್‌ 1 ಟ್ರೇಲರ್‌ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ. ಕಾಂತಾರ ಚಾಪ್ಟರ್‌ 1 ಕಿಚ್ಚು ಮತ್ತು ನೆಚ್ಚುಗಳ ಮಹಾಕಾವ್ಯ’ ಎಂಬ ಸಂದೇಶ ನೀಡಿದೆ.

ಈ ಸಿನಿಮಾದ ಮೊದಲ ಸುದ್ದಿಗೋಷ್ಠಿ ಇಂದು ಸಂಜೆ ನಡೆಯಲಿದ್ದು, ಚಿತ್ರತಂಡದ ಮುಂದಿನ ನಡೆಯ ಕುರಿತಾದ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನೊಂದು ವಿಶೇಷ ಅಂದರೆ ‘ದಿ ಲಯನ್ ಕಿಂಗ್’, ‘ಮಿಷನ್ ಇಂಪಾಸಿಬಲ್‌’ನಂಥಾ ಸಿನಿಮಾಗಳಿಗೆ ವಿಎಫ್‌ಎಕ್ಸ್‌ ಮಾಡಿದ ಎಂಪಿಸಿ ಈ ಸಿನಿಮಾಕ್ಕೆ ವಿಎಫ್‌ಎಕ್ಸ್‌ ಹಾಗೂ ಸಿಜಿಐ ಮಾಡಿದೆ. ಅಕ್ಟೋಬರ್‌ 2ರಂದು ‘ಕಾಂತಾರ ಚಾಪ್ಟರ್‌ 1’ ವಿಶ್ವಾದ್ಯಂತ ರಿಲೀಸ್‌ ಆಗಲಿದ್ದು, ಅ.1ರಂದು ಪ್ರೀಮಿಯರ್‌ ಶೋಗಳು ನಡೆಯಲಿವೆ.

ಟ್ರೇಲರ್‌ ಬಿಡುಗಡೆಗೆ ಡಿಜಿಟಲ್ ಕಾರ್ಡ್‌

‘ಕಾಂತಾರ ಚಾಪ್ಟರ್‌ 1’ ಟ್ರೇಲರ್‌ ಬಿಡುಗಡೆಯನ್ನು ಕನ್ನಡಿಗರಿಂದಲೇ ಮಾಡಿಸುವುದಾಗಿ ಹೇಳಿದ್ದ ಚಿತ್ರತಂಡ ಇದಕ್ಕಾಗಿ ಡಿಜಿಟಲ್ ಕಾರ್ಡ್‌ ಅನ್ನು ಪರಿಚಯಿಸಿದೆ. https://kantara.world ವೆಬ್‌ಸೈಟಿಗೆ ಭೇಟಿ ನೀಡಿ ವಿವರ ನಮೂದಿಸಿದರೆ ಟ್ರೇಲರ್‌ ಬಿಡುಗಡೆಯ ಡಿಜಿಟಲ್‌ ಕಾರ್ಡ್‌ ಡೌನ್‌ಲೋಡ್ ಆಗುತ್ತದೆ. ಇದನ್ನು ಸೋಷಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಬಹುದು. ಇಂದು ಮಧ್ಯಾಹ್ನ 12.35ಕ್ಕೆ ವೆಬ್‌ಸೈಟ್‌ಗೆ ವಿಸಿಟ್‌ ಮಾಡಿ ‘ಕಾಂತಾರ ಚಾಪ್ಟರ್‌ 1’ ಟ್ರೇಲರ್‌ ಲಾಂಚ್ ಮಾಡಬಹುದು. ಈ ಮೂಲಕ ಹೆಚ್ಚೆಚ್ಚು ಪ್ರೇಕ್ಷಕರನ್ನು ಸಿನಿಮಾದತ್ತ ಸೆಳೆಯುವ ಆಕರ್ಷಕ ಮಾರ್ಕೆಟಿಂಗ್‌ ಟ್ರೆಂಡ್‌ ಅನ್ನು ಚಿತ್ರತಂಡ ಹುಟ್ಟುಹಾಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mangli Remuneration: ಸ್ಟಾರ್ ಗಾಯಕರನ್ನೂ ಮೀರಿಸ್ತಾರೆ: ಒಂದು ಹಾಡಿಗೆ ಮಂಗ್ಲಿ ಪಡೆಯೋ ಸಂಭಾವನೆ ಎಷ್ಟು?
Shocking News: 7 ತಿಂಗಳ ಗರ್ಭಿಣಿ ಕಿಯಾರಾಗೆ ಹೀಗ್ ಮಾಡ್ಬಿಟ್ಟ ಆ ಮಹಾ ಪಾಪಿ; ಈ ರಹಸ್ಯ ಹೇಳಿದ ಬಾಡಿಗಾರ್ಡ್!