
ಕನ್ನಡತಿ ಧಾರವಾಹಿಯ ಹರ್ಷ ಮತ್ತು ಅಮ್ಮಮ್ಮ ನಡುವಿನ ಬಾಂಧವ್ಯ ಅದ್ಭುತ. ಎಲ್ಲರೂ ಆ ಮಮತೆ, ಪ್ರೀತಿಯ ಸಂಬಂಧವನ್ನು ನೋಡಿ, ಮೆಚ್ಚಿ ಹಚ್ಚಿಕೊಂಡಿದ್ದಾರೆ. ಜನ ಮೆಚ್ಚಿದ ಮಗನಾಗಿ ಪ್ರಶಸ್ತಿ ಪಡೆದ ಹರ್ಷ ಮನೆ ಮೆಚ್ಚಿದ ಮಗನೂ ಹೌದು.
ಶೂಟಿಂಗ್‌ಗೆ ರೆಡಿಯಾಗಿದ್ದ ಹರ್ಷನಿಗೆ ಒಂದು ಅಚ್ಚರಿ ಇತ್ತು. ಅಚ್ಚರಿ ಕೊಟ್ಟಿದ್ದು ನಟನ ನಿಜವಾದ ಅಮ್ಮ. ತೆರೆಯ ಮೇಲಿನ ಅಮ್ಮ ರತ್ನಮಾಲಾ ಕಿರಣ್ ರಾಜ್‌ಗೆ ಬಂದ ಪತ್ರವನ್ನು ಓದಿದ್ದರು.
ಕನ್ನಡತಿ ನಟ ಹರ್ಷನನ್ನು ಸುಶಾಂತ್‌ಗೆ ಹೋಲಿಸಿದ ಫ್ಯಾನ್ಸ್
ಕಿರಣ್ ನಿಜವಾದ ತಾಯಿ ಕಲರ್ಸ್ ಕನ್ನಡ ಮೂಲಕ ಬರೆದ ಭಾವುಕ ಪತ್ರವಾಗಿತ್ತದು. ತಮ್ಮ ನೆಚ್ಚಿನ ಮಗನನನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ ಆಕೆ. ಪತ್ರ ಓದು ಮುಗಿಯುತ್ತಲೇ ಭಾವುಕಾರಗಿ ಕಣ್ಣೀರಿಟ್ಟಿದ್ದಾರೆ ಹರ್ಷ.
ಈ ಸುಂದರ ಕ್ಷಣವನ್ನು ವಿಡಿಯೋ ಮಾಡಲಾಗಿದ್ದು ಕನ್ನಡತಿ ನಟ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸರ್ಪೈಸ್ ಅಗಿ ಬಂದ ಪತ್ರದಿಂದ ಖುಷಿಯಾದ ಹರ್ಷ ಅಷ್ಟೇ ಭಾವುಕರಾಗಿದ್ದಾರೆ. ಇಲ್ನೋಡಿ ವಿಡಿಯೋ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.