
ಕೊಡಗಿನ ಚೆಲುವೆ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟಿ. ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದು ಸ್ಯಾಂಡಲ್‌ವುಡ್ ಆದರೂ ಬ್ಯುಸಿ ಆಗಿರುವುದು ಮಾತ್ರ ಟಾಲಿವುಡ್‌ನಲ್ಲಿ. ಸದ್ಯ ಮಹೇಶ್ ಬಾಬು ಹಾಗೂ ನಿತಿನ್ ಜೊತೆ ಬ್ಯುಸಿ ಇದ್ದು ಸದ್ಯದಲ್ಲೇ ಅಲ್ಲು ಅರ್ಜುನ್ ನಟಿಸಲಿದ್ದಾರೆ.
ರಶ್ಮಿಕಾ ಕಾಲ್‌ಶೀಟ್‌ಗಾಗಿ ಸಾಕಷ್ಟು ನಿರ್ದೇಶಕರು ಕಾಯುತ್ತಿದ್ದಾರೆ. ಆದರೆ ಬಂದಿರುವ ಎಲ್ಲಾ ಕಥೆಗಳನ್ನು ಒಪ್ಪಿಕೊಳ್ಳದೇ ಆಯ್ಕೆ ವಿಚಾರದಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ.
5 ಲಕ್ಷದಿಂದ ಶುರುವಾದ ರಶ್ಮಿಕಾ ಸಿನಿ ಜರ್ನಿ
ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಜೊತೆ ನಟಿಸಲು ರಶ್ಮಿಕಾ ಮಂದಣ್ಣ ನೋ ಎಂದಿದ್ದಾರೆ ಎನ್ನಲಾಗಿದೆ. ಬೇರೆ ಸಿನಿಮಾಗಳಲ್ಲಿ ಬ್ಯುಸಿ, ಕಾಲ್ ಶೀಟ್ ಫ್ರೀ ಇಲ್ಲ ಅಂತಲ್ಲ. ಬದಲಾಗಿ ಎರಡನೇ ದರ್ಜೆಯ ನಟರ ಜೊತೆ ನಟಿಸಲು ರಶ್ಮಿಕಾ ಒಪ್ಪುತ್ತಿಲ್ಲ ಎನ್ನಲಾಗಿದೆ. ಇದರ ಜೊತೆಗೆ ರಶ್ಮಿಕಾ ಡಿಮ್ಯಾಂಡ್ ಮಾಡಿದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ಒಪ್ಪದಿದ್ದಕ್ಕೆ ಕೈ ಬಿಡಲಾಗಿದೆ ಎನ್ನು ಮಾತು ಕೇಳಿ ಬರುತ್ತಿದೆ.
ಇದು ಇದುವರೆಗೂ ಮಾಡಿದ ಸಿನಿಮಾಗಳೆಲ್ಲವೂ ಸ್ಟಾರ್ ನಟರ ಜೊತೆಗೆ. ರಕ್ಷಿತ್ ಶೆಟ್ಟಿ ಜೊತೆ 'ಕಿರಿಕ್ ಪಾರ್ಟಿ', ಪುನೀತ್ ರಾಜ್‌ಕುಮಾರ್ ಜೊತೆ 'ಅಂಜನೀಪುತ್ರ', ಗಣೇಶ್ ಜೊತೆ 'ಚಮಕ್', ವಿಜಯ್ ದೇವರಕೊಂಡ ಜೊತೆ 'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾರೆ.
ರಶ್ಮಿಕಾಗೆ ವಯಸ್ಸಿನ್ನೂ 23, ಸಂಪಾದನೆ ಮಾತ್ರ ಕೋಟಿ ಕೋಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.