ಮೊದಲ ವೆಡ್ಡಿಂಗ್ ಆ್ಯನಿವರ್ಸರಿ ದಿನ ಪ್ರಿಯಾಂಕ- ನಿಕ್ ತೋಳಿನಲ್ಲಿ ಮಗುವಿನ ಕಿಲಕಿಲ!

Published : Dec 03, 2019, 12:30 PM ISTUpdated : Dec 03, 2019, 12:44 PM IST
ಮೊದಲ ವೆಡ್ಡಿಂಗ್ ಆ್ಯನಿವರ್ಸರಿ ದಿನ ಪ್ರಿಯಾಂಕ- ನಿಕ್ ತೋಳಿನಲ್ಲಿ ಮಗುವಿನ ಕಿಲಕಿಲ!

ಸಾರಾಂಶ

ಬಾಲಿವುಡ್ ಮೋಸ್ಟ್ ಕ್ಯೂಟ್ ಕಪಲ್ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮೊದಲ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ ಇನ್ನಷ್ಟು ಹೆಚ್ಚಿಸಲು ಇವರಿಬ್ಬರ ತೋಳಿನಲ್ಲಿ ಪುಟ್ಟ ಕಂದಮ್ಮ ಬಂದಿದೆ! 

ಬಾಲಿವುಡ್ ಕ್ಯೂಟ್ ಪಿಗ್ಗಿ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮೊದಲ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಚರಿಸಿಕೊಂಡಿದ್ದಾರೆ. ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದ್ದಾರೆ. 

ಗಂಡ- ಹೆಂಡತಿ ಜೊತೆಗಿರುವ  ಫೋಟೋವನ್ನು ಪ್ರಿಯಾಂಕ ಶೇರ್ ಮಾಡಿಕೊಂಡಿದ್ದಾರೆ.  ಜತೆಗೆ 'ಅಂದಿಗೂ, ಇಂದಿಗೂ, ಎಂದೆಂದಿಗೂ ನೀನೇ ನನ್ನ ಪ್ರಾಮಿಸ್.  ನನ್ನ ಜೀವನದಲ್ಲಿ ಖುಷಿಯ ಬಣ್ಣ ತುಂಬಿದವನು ನೀನು.  ಪ್ರತಿ ಕ್ಷಣವನ್ನು ಜೀವಂತವಾಗಿಸಿದ್ದೀಯಾ. ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ಹಸ್ಬೆಂಡ್ ಎಂದು ಬರೆದುಕೊಂಡಿದ್ದಾರೆ. 

 

ನಿಕ್ ಕೂಡಾ ಪತ್ನಿ ಮೇಲಿನ ಪ್ರೀತಿಯನ್ನು ಮಧುರವಾಗಿ ವ್ಯಕ್ತಪಡಿಸಿದ್ದಾರೆ.  'ಕಳೆದ ವರ್ಷ ಇದೇ ದಿನದಿಂದ ನಾವು ಜೊತೆಯಾಗಿರೋಣ ಎಂದು ಪ್ರಾಮಿಸ್ ಮಾಡಿದ್ದೆವು.  ಎಂದೆಂದಿಗೂ ನಿನ್ನನ್ನೇ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. 

ಪ್ರಿಯಾಂಕ- ನಿಕ್ ಮೊದಲ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದರೆ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಕಿಡಿಗೇಡಿಗಳು ಫೋಟೋಶಾಪ್ ಮಾಡಿದ್ದಾರೆ.  ಪ್ರಿಯಾಂಕ- ನಿಕ್ ತೋಳಿನಲ್ಲಿ ಪುಟ್ಟ ಕಂದಮ್ಮ ಇರುವಂತೆ ಫೋಟೋಶೂಟ್ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?