
ಈ ನಡುವೆ ಎರಡು ದಿನಗಳ ಹಿಂದೆ ಸೆಟ್ಟೇರಿದ ಬೆಲ್ಲಂಕೊಂಡ ಶ್ರೀನಿವಾಸ್ ನಟನೆಯ ಚಿತ್ರಕ್ಕೆ ನಾಯಕಿ ಆಗಿದ್ದು, ಇದೇ ಚಿತ್ರಕ್ಕೆ ನಭಾ ನಟೇಶ್ ಪಡೆದುಕೊಂಡಿರುವ ಸಂಭಾವನೆ ಬಗ್ಗೆಯೇ ಎಲ್ಲರ ಮಾತು. ಈ ಚಿತ್ರಕ್ಕಾಗಿ ನಭಾ ಕೈ ಸೇರಿರುವ ಸಂಭಾವನೆ ಒಂದು ಕೋಟಿ.
ಟಾಲಿವುಡ್‌ಗೆ ಹಾರಿದ 'ವಜ್ರಕಾಯ'; ಒಂದೇ ಚಿತ್ರಕ್ಕೆ ಏರಿತು ಲಕ್ಷಗಟ್ಟಲೆ ಸಂಭಾವನೆ?
ಸದ್ಯಕ್ಕೆ ತೆಲುಗಿಗೆ ಹೋಗಿರುವ ರಶ್ಮಿಕಾ ಮಂದಣ್ಣ ಮೊದಲ ಚಿತ್ರದ ಮೂಲಕವೇ ಯಶಸ್ಸು ಕಂಡಿದ್ದರಿಂದ ಅವರಿಗೆ ಸ್ಟಾರ್ ನಾಯಕ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿವೆ. ಆದರೆ, ನಭಾ ನಟೇಶ್ ಮೊದಲೆರಡು ಚಿತ್ರಗಳಲ್ಲಿ ಅಷ್ಟೇನು ಯಶಸ್ಸು ಕಾಣದಿದ್ದರೂ ಮೂರನೇ ಚಿತ್ರ ಪೂರಿ ಜಗನ್ನಾಥ್ ನಿರ್ದೇಶನದ ‘ಐ-ಸ್ಮಾರ್ಟ್ ಶಂಕರ್’ ಗೆದ್ದಿದ್ದರಿಂದ ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಹೊಸ ಚಿತ್ರಕ್ಕಾಗಿ ಒಂದು ಕೋಟಿ ಸಂಭಾವನೆ ಕೇಳಿದ್ದು, ಚಿತ್ರತಂಡ ಕೊಡಲು ನಿರ್ಧರಿಸಿದೆ. ಚಿತ್ರದಲ್ಲಿ ಸಾಕಷ್ಟುಗ್ಲಾಮರ್ ದೃಶ್ಯಗಳಿವೆ, ಸಿಕ್ಕಾಪಟ್ಟೆಹಾಟ್ ಆಗಿ ಕಾಣಿಸಿಕೊಳ್ಳುವ ಅಗತ್ಯವಿದೆ ಎಂದು ಅರಿತ ನಭಾ, ಒಂದು ಕೋಟಿಯ ಬೇಡಿಕೆ ಇಟ್ಟಿದ್ದಾರೆ ಎಂಬುದು ಟಾಲಿವುಡ್ ಮಂದಿ ಹೊಸ ಟಾಂಗ್. ಇದ್ಯಾವುದಕ್ಕೂ ಕೇರ್ ಮಾಡದ ಕನ್ನಡದ ಪಟಾಕ, ಪರಭಾಷೆಯಲ್ಲಿ ಕೋಟಿ ನಾಯಕಿ ಎನಿಸಿಕೊಂಡಿದ್ದಾರೆ.
ಟಾಲಿವುಡ್ ಫ್ಲಾಟ್ ಆಯ್ತು ಕನ್ನಡದ ಈ ನಟಿಗೆ!
ಮಾಸ್ ಚಿತ್ರಗಳಿಗೆ ಕೇರಾಫ್ ಅಡ್ರಸ್‌ನಂತಿರುವ ರವಿತೇಜ ಜತೆ ‘ಡಿಸ್ಕೋರಾಜ’ ಚಿತ್ರಕ್ಕೆ ನಾಯಕಿ ಆದ ಮೇಲೆ ಎರಡು ಚಿತ್ರಗಳಿಗೆ ಬುಕ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.