ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ಕನ್ನಡದ ಖ್ಯಾತ ನಟ; ಚಿತ್ರದ ಬಗ್ಗೆ ಹೇಳಿದ್ದೇನು?

By Shruthi Krishna  |  First Published Apr 16, 2023, 12:31 PM IST

ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ದೇವರಾಜ್ ಅವರೇ ಬಹಿರಂಗ ಪಡಿಸಿದ್ದಾರೆ. 


ಸಲಾರ್ ಸದ್ಯ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದಾಗಿದೆ. ಕೆಜಿಎಫ್-2 ಬಳಿಕ ನಿರ್ದೇಶಕ ಪ್ರಾಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು. ಬಾಹುಬಲಿ ಸ್ಟಾರ್ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಲಾರ್ ಪ್ರಾರಂಭವಾಗಿದೆ ಅನೇಕ ತಿಂಗಳುಗಳೇ ಆಗಿದೆ. ಈ ಸಿನಿಮಾದ ಅಪ್‌ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಸಿನಿಮಾತಂಡ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. 

ಪ್ರಭಾಸ್ ಸಲಾರ್‌ನಲ್ಲಿ ಕನ್ನಡದ ಖ್ಯಾತ ನಟರೊಬ್ಬರು ಕಾಣಿಸಿಕೊಂಡಿದ್ದಾರೆ. ಅದು ಮತ್ಯಾರು ಅಲ್ಲ ಡೈನಾಮಿಕ್ ಸ್ಟಾರ್ ದೇವರಾಜ್. ಹೌದು ಕನ್ನಡದ ಖ್ಯಾತ ನಟ ದೇವರಾಜ್ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗಷ್ಟೆ ತೆಲುಗು ಯೂಟ್ಯೂಬ್ ಮಾಹಿನಿಗೆ ನೀಡಿರುವ ಸಂದರ್ಶನದಲ್ಲಿ ದೇವರಾಜ್ ಈ ಅಚ್ಚರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಸಲಾರ್ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸ್ಟಾರ್ ಪೃಥ್ವಿರಾಜ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇದೀಗ ದೇವರಾಜ್ ಕೂಡ ಕಾಣಿಸಿಕೊಂಡಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

Tap to resize

Latest Videos

 

ಅಂದಹಾಗೆ ದೇವರಾಜ್ ತನ್ನ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಆದರೆ ಪ್ರಭಾಸ್ ಜೊತೆ ತೆರೆಹಂಚಿಕೊಂಡಿರುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಯಾವಾಗ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವರಾಜ್, ಸಲಾರ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿದರು. ಪ್ರಭಾಸ್ ಪಾತ್ರ ಹೇಗಿದೆ ಎಂದು ದೇವರಾಜ್ ಅವರಿಗೆ ಕೇಳಲಾಯಿತು. ಆ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದ ನಟ ತನ್ನ ಪಾತ್ರದ ಬಗ್ಗೆ ವಿವರಿಸಿದರು. ಸಿನಿಮಾದ ಮೊದಲ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆದರೆ 2ನೇ ಭಾಗದಲ್ಲಿ ಹೆಚ್ಚಿದೆ. ಪ್ರಭಾಸ್, ಜಗಪತಿ ಬಾಬು, ಪೃಥ್ವಿರಾಜ್ ಸೇರಿದಂತೆ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

 'ಸಲಾರ್' ಬಿಗ್ ಅಪ್‌ಡೇಟ್; ಪ್ರಶಾಂತ್ ನೀಲ್ ಜೊತೆ ಫೋಟೋ ಹಂಚಿಕೊಂಡು ಶ್ರುತಿ ಹಾಸನ್ ಹೇಳಿದ್ದೇನು?

'ಪ್ರಭಾಸ್ ಜೊತೆ ಮಾತುಕತೆ ಹೇಗಿತ್ತು, ನಿಮ್ಮನ್ನು ನೋಡಿದ ತಕ್ಷಣ ಪ್ರಭಾಸ್ ಏನ್ ಹೇಳಿದರು' ಎಂದು ನಿರೂಪಕರು ಪ್ರಶ್ನೆ ಮಾಡಿದ್ದರು. 'ತುಂಬಾ ಜನ ಈ ಪ್ರಶ್ನೆಯನ್ನು ಕೇಳುತ್ತಾರೆ. ಆಗಿನ ಕಲಾವಿದರು ಹೇಗೆ, ಈಗಿನ ನಟರು ಹೇಗಿದ್ದಾರೆ ಕೇಳುತ್ತಿರುತ್ತಾರೆ. ಆಗಿನ ನಟರ ವಯಸ್ಸು ಹಾಗೂ ನನ್ನ ವಯಸ್ಸು ಸಮಾನವಾಗಿದ್ದರಿಂದ ಸ್ನೇಹ ಸ್ವಲ್ಪ ಜಾಸ್ತಿ  ಇತ್ತು. ಸುಲಭವಾಗಿ ಮಾತನಾಡಬಹುದು. ಆದರೆ ಈಗಿನ ನಟರಿಗಿಂತ ನಮ್ಮ ವಯಸ್ಸು ಹೆಚ್ಚು. ಹೀಗಾಗಿ ಈಗಿನವರು ನಮಸ್ಕಾರ ಎಂದು ನಮ್ಮನ್ನು ದೂರ ಇಟ್ಟುಬಿಡ್ತಾರೆ. ನಮಸ್ಕಾರ ಸರ್, ಚೆನ್ನಾಗಿದ್ದೀರ ಸರ್.. ಅಷ್ಟೇ ಮಾತಾಡೋದು' ಎಂದು ಹೇಳಿದರು. 

ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಬ್ಲಾಕ್‌ಬಸ್ಟರ್ ಹಿಟ್ 'ಕಾಂತಾರ' ನಟ; ಯಾರು?

ಅದೇ ಸಂದರ್ಶನದಲ್ಲಿ ತೆಲುಗಿನ ಖ್ಯಾತ ಕಲಾವಿದರ ಬಗ್ಗೆಯೂ ಮಾತನಾಡಿದ್ದಾರೆ. ಮಹೇಶ್ ಬಾಬು, ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಬಗ್ಗೆ ದೇವರಾಜ್ ಮಾತನಾಡಿದ್ದಾರೆ. ಜೊತೆಗೆ ಕನ್ನಡ ಸಿನಿಮಾರಂಗದ ಏಳಿಗೆ ಕುರಿತು ಹೆಮ್ಮೆ ಪಟ್ಟಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.  
 

click me!