ನಟಿ ಪೂರ್ಣ ಜೊತೆ ನನಗೆ ಲವ್ ಅಫೇರ್ ಇದೆ; ನಿರ್ದೇಶಕ ರವಿ ಬಾಬು ಅಚ್ಚರಿ ಹೇಳಿಕೆ

Published : Apr 15, 2023, 06:43 PM IST
ನಟಿ ಪೂರ್ಣ ಜೊತೆ ನನಗೆ ಲವ್ ಅಫೇರ್ ಇದೆ; ನಿರ್ದೇಶಕ ರವಿ ಬಾಬು ಅಚ್ಚರಿ ಹೇಳಿಕೆ

ಸಾರಾಂಶ

ನಟಿ ಪೂರ್ಣ ಜೊತೆ ನನಗೆ ಲವ್ ಅಫೇರ್ ಇದೆ ಎಂದು ನಿರ್ದೇಶಕ ರವಿ ಬಾಬು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಜೋಶ್ ಖ್ಯಾತಿಯ ನಟಿ ಪೂರ್ಣಾ ಸದ್ಯ ಮಗುನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿರುವ ನಟಿ ಪೂರ್ಣ ಸದ್ಯ ದುಬೈನಲ್ಲಿದ್ದಾರೆ. ತಾಯ್ತಿತನ ಆನಂದಿಸುತ್ತಿರುವ ನಟಿ ಪೂರ್ಣ ಬಗ್ಗೆ ನಿರ್ದೇಶಕ ರವಿ ಬಾಬು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ. ಟಾಲಿವುಡ್ ನಿರ್ದೇಶಕ ರವಿ ಬಾಬು ನಟಿ ಪೂರ್ಣ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲರಿ, ಅನಸೂಯಾ, ಅವುನು ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಖ್ಯಾತಿಗಳಿಸಿರುವ ರವಿ ಬಾಬು ಟಾಲಿವುಡ್‌ನಲ್ಲಿ ಸಾಕಷ್ಟು ಖ್ಯಾತಿಗಳಿಸಿದ್ದಾರೆ. 

ನಟಿ ಪೂರ್ಣ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ರವಿ ಬಾಬು ಅವರ ಅವುನು. ತೆಲುಗು ಸಿನಿಮಾರಂಗದಲ್ಲಿ ಸಕ್ಸಸ್‌ಫುಲ್ ನಟಿಯಾಗಿ ಹೊರಹೊಮ್ಮದಿದ್ದರೂ ಪೂರ್ಣ ಅವುನು ಮೂಲಕ ಗಮನ ಸೆಳೆದರು. ಬಳಿಕ ರವಿ ಬಾಬು ಅವರ ಅಸಲು ಸಿನಿಮಾದಲ್ಲೂ ಪೂರ್ಣ ನಟಿಸಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ರವಿ ಬಾಬು ಸಿನಿಮಾಗಳಲ್ಲಿ ಪೂರ್ಣ ಮಿಂಚುತ್ತಿದ್ದಾರೆ.  ಈ ನಡುವೆ ಸಂದರ್ಶನದಲ್ಲಿ ರವಿ ಬಾಬು ನೀಡಿದ ಹೇಳಿಕೆ ಈಗ ವೈರಲ್ ಆಗಿದೆ. 'ನನಗೆ ಪೂರ್ಣ ಅವರ ಜೊತೆ ಲವ್ ಅಫೇರ್ ಇದೆ. ಅದರೆ ಜನರು ಯೋಚಿಸುವ ಹಾಗಲ್ಲ. ನಾವು ನಿಜವಾಗಿಯೂ ನಿರೀಕ್ಷೆ ಮಾಡಿದ್ದಕ್ಕಿಂತ 200% ಉತ್ತಮ ಔಟ್‌ಪುಟ್ ನೀಡುವ ನಿರ್ದಿಷ್ಟ ಕಲಾವಿದರ ಮೇಲೆ ನಿರ್ದೇಶಕರಿಗೆ ಇರುವ ಪ್ರೀತಿ ಇದು. ಪೂರ್ಣ ಅಂಥ ಕಲಾವಿದೆ' ಎಂದು ಹೊಗಳಿದ್ದಾರೆ. ಪೂರ್ಣ ವೃತ್ತಿ ಪರತೆ ಇರುವ ನಟಿ ಎಂದು ರವಿ ಬಾಬು ಹೇಳಿದ್ದಾರೆ.

ಪೂರ್ಣಾ ಮೂಲ ಹೆಸರು ಶಾಮ್ನಾ ಕಾಸೀಮ್. 2004ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶಮ್ನಾ ಮಲಯಾಳಂನ ಮಂಜು ಪೋಲೂರು ಪೆಂಕುಟ್ಟಿ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಈ ಸಿನಿಮಾದಲ್ಲಿ ಧನ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನ ಶ್ರೀಮಹಾಲಕ್ಷ್ಮಿ, ತಮಿಳಿನ ಕೊಡೈಕನಾಲ್ ಕನ್ನಡದ ಜೋಶ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಮಿಂಚಿದರು. ಕನ್ನಡದ ಜೋಶ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಳಿಕ ದೊಡ್ಡ ಸ್ಟಾರ್ ಆದರು. ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಪೂರ್ಣ ನಟಿಸಿದ್ದರು. ಈ ಸಿನಿಮಾ ಮೂಲಕ ಶಮ್ನಾ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ಮಿಂಚಿದರು. ಈ ಸಿನಿಮಾ ಮೂಲಕ ಪೂರ್ಣ ಮತ್ತೆ ದೊಡ್ಡ ಖ್ಯಾತಿಗಳಿಸಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಜೋಶ್' ನಟಿ ಶಮ್ನಾ; ಹುಡುಗ ಯಾರು? ಇಲ್ಲಿದೆ ಸಂಪೂರ್ಣ ವಿವರ

ಕೊನೆಯದಾಗಿ ನಟಿ ಪೂರ್ಣ ದಸರ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಾನಿ ನಟನೆಯ ದಸರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ರವಿ ಬಾಬು ಅವರ ಅಸಲು ಸಿನಿಮಾ ಮೂಲಕ ನೇರವಾಗಿ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಬಳಿಕ ಮತ್ತೆ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯ ತಾಯಿಯಾದ ಸಂಭ್ರಮದಲ್ಲಿರುವ ಪೂರ್ಣ ಮತ್ತೆ ಸಿನಿಮಾಗೆ ವಾಪಾಸ್ ಆಗ್ತಾರಾ ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?