ಬಾಲಿವುಡ್ ನಟಿ ಕಂಗನಾ ರನೌತ್ ಮೇಲೆ ಮಾಜಿ ಪ್ರೇಮಿ ಅಧ್ಯಯನ್ ಸುಮನ್ ಮಾಡಿದ್ದ ಆರೋಪದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಕಂಗನಾ ತಮ್ಮ ಯಶಸ್ಸಿಗೆ ಹೊಟ್ಟೆಕಿಚ್ಚು ಪಡುವವರು ಇಂತಹ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ (Controversy Queen Kangana Ranaut) ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದ್ದಾರೆ. ಒಂದಾದ್ಮೇಲೆ ಒಂದು ವಿಷ್ಯದಲ್ಲಿ ಅವರು ಥಳುಕು ಹಾಕಿಕೊಳ್ತಿದ್ದಾರೆ. ರೈತರ ಆಂದೋಲನ (Farmers Movement )ದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕಾಂಟ್ರವರ್ಸಿ ಕ್ರಿಯೇಟ್ ಮಾಡ್ಕೊಂಡಿರುವ ಕಂಗನಾ ರನೌತ್ ಅಭಿನಯದ ಎಮರ್ಜೆನ್ಸಿ (Emergency) ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ (Former Prime Minister Indira Gandhi) ಪಾತ್ರದಲ್ಲಿ ಮಿಂಚುತ್ತಿರುವ ಕಂಗನಾ ರನೌತ್, ವೆರಿ ಬ್ಯುಸಿ. ಸಿನಿಮಾ ಪ್ರಮೋಷನ್, ಇಂಟರ್ವ್ಯೂ ಅಂತ ಅಲ್ಲಲ್ಲಿ ಕಾಣಿಸಿಕೊಳ್ತಿರುವ ನಟಿ ಮತ್ತೆ ತನ್ನ ಮೇಲೆ ಬಂದಿದ್ದ ಹಳೆ ಆರೋಪದ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದೆ ಕಂಗನಾ ರನೌತ್ ಮೇಲೆ ಗಂಭೀರ ಆರೋಪವಿದೆ. ಕಂಗನಾ ರನೌತ್, ಮಾಜಿ ಪ್ರೇಮಿಗೆ ಪಿರಿಯಡ್ಸ್ ಬ್ಲಡ್ (Periods Blood) ಕುಡಿಯುವಂತೆ ಒತ್ತಡ ಹೇರುತ್ತಿದ್ದರು ಎಂಬ ಆರೋಪ ಇದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಕಂಗನಾ, ನನ್ನ ಯಶಸ್ಸಿಗೆ ಹೊಟ್ಟೆಕಿಚ್ಚು ಪಡುವ ಜನರು ಇಂಥ ವದಂತಿ ಹಬ್ಬಿಸ್ತಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಎಕ್ಸ್ ನನ್ನ ಬಗ್ಗೆ ಮಾತನಾಡೋ ಬದಲು ನನ್ನ ಪಿರಿಯಡ್ಸ್ ಬಗ್ಗೆ ಮಾತನಾಡ್ತಾನೆ ಎಂದು ಕಂಗನಾ ಹೇಳಿದ್ದಾರೆ.
ಹೆಂಡ್ತಿಗೆ ಕೋಪ, ಸಿಟ್ಟು ಬಂದ್ರೆ ಗಂಡ ಹೇಗೆ ರಿಯಾಕ್ಟ್ ಮಾಡಬೇಕು ಹೇಳಿದ್ದಾರೆ ಅನುಷ್ಕಾ ಶೆಟ್ಟಿ!
ಪಿರಿಯಡ್ಸ್ ಬ್ಲಡ್ ನಲ್ಲಿ ಲಡ್ಡು (Periods Blood Laddu) ಮಾಡ್ತಿದ್ರಾ ಕಂಗನಾ? : ಕಂಗನಾ ರನೌತ್ ಹಾಗೂ ಅಧ್ಯಯನ್ ಸುಮನ್ ಬ್ರೇಕ್ ಅಪ್ ಆದ್ಮೇಲೆ ಅಧ್ಯಯನ್ ಸುಮನ್, ಕಂಗನಾ ಮೇಲೆ ಗಂಭೀರ ಆರೋಪ ಮಾಡಿದ್ರು. ಕಂಗನಾ, ಮುಟ್ಟಿನ ಬ್ಲಡ್ ಕುಡಿಯುವ ಪರಿಸ್ಥಿತಿ ನಿರ್ಮಾಣ ಮಾಡ್ತಿದ್ದರು ಎಂದು ದೂರಿದ್ದರು. ರಾಜ್ ದಿ ಮಿಸ್ಟರಿ ಕಂಟಿನ್ಯೂಸ್ ಚಿತ್ರದಲ್ಲಿ ಕಂಗನಾ ಜೊತೆ ಅಧ್ಯಯನ್ ಕೆಲಸ ಮಾಡಿದ್ದರು. ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು. ಆದ್ರೆ ಒಂದು ವರ್ಷದಲ್ಲೇ ಬ್ರೇಕ್ ಅಪ್ ಮಾಡ್ಕೊಂಡ ಜೋಡಿ, ಪರಸ್ಪರ ಆರೋಪ – ಪ್ರತ್ಯಾರೋಪ ಶುರು ಮಾಡಿದ್ರು. ಸಂದರ್ಶನವೊಂದರಲ್ಲಿ ಕಂಗನಾ ವಿರುದ್ಧ ಅಧ್ಯಯನ್ ಹಲವು ಆರೋಪಗಳನ್ನು ಮಾಡಿದ್ದರು. ಕಂಗನಾರಿಂದ ಅನೇಕ ಬಾರಿ ಏಟು ತಿಂದಿದ್ದೇನೆ ಎಂದಿದ್ದ ಅಧ್ಯಯನ್, ಕಂಗನಾ ಬ್ಲ್ಯಾಕ್ ಮ್ಯಾಜಿಕ್ ಮಾಡ್ತಾರೆಂದು ಆರೋಪಿಸಿದ್ದರು.
ಒಂದು ರಾತ್ರಿ ಕಂಗನಾ ನನ್ನನ್ನು ಅವರ ಮನೆಗೆ ಕರೆದು ಪೂಜೆ ಮಾಡುವಂತೆ ಹೇಳಿದ್ರು. ಮನೆಯ ಒಂದು ರೂಮಿನಲ್ಲಿ ಭಯಾನಕ ವಸ್ತುಗಳಿತ್ತು ಎಂದಿದ್ದ ಅಧ್ಯಯನ್, ಇನ್ನೊಂದು ದಿನ ಸ್ಮಶಾನಕ್ಕೆ ಹೋಗುವಂತೆ ಹೇಳಿದ್ದರು ಎಂಬ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಕಂಗನಾ ರನೌತ್, ತನ್ನ ಅಶ್ಲೀಲ ರಕ್ತವನ್ನು ನನ್ನ ಆಹಾರಕ್ಕೆ ಬೆರೆಸಿ ನೀಡ್ತಾರೆ. ಇದೇ ಕಾರಣಕ್ಕೆ ನನ್ನ ಚಿತ್ರ ಯಶಸ್ಸು ಕಾಣ್ತಿಲ್ಲ ಎಂದು ಪಂಡೀತರೊಬ್ಬರು ನನಗೆ ತಿಳಿಸಿದ್ದರು ಎಂದೂ ಆ ಸಮಯದಲ್ಲಿ ಅಧ್ಯಯನ್ ಹೇಳಿದ್ದರು.
ಮುದ್ದು ರಾಕ್ಷಸಿ ಪೋಸ್ಟರ್ ನೋಡಿ ಶೆಡ್ ಗೆ ಹೋಗಿ ಎಂದ ಫ್ಯಾನ್ಸ್
ಇನ್ನು ಪಿರಿಯಡ್ಸ್ ಬ್ಲಡ್ ನಲ್ಲಿ ಲಡ್ಡು ಮಾಡಲಾಗಿದೆ ಅಂತ ಪತ್ರಿಕೆ ಸಂಪಾದಕರೊಬ್ಬರು ಬರೆದಿದ್ದರು. ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ಪ್ರಸಿದ್ಧ ಪತ್ರಿಕೆ ಸಂಪಾದಕರು, ನಾನು ಬ್ಲ್ಯಾಕ್ ಮ್ಯಾಜಿಕ್ ಮಾಡ್ತೇನೆ, ದೀಪಾವಳಿ ಸಮಯದಲ್ಲಿ ಪಿರಿಯಡ್ ಬ್ಲಡ್ ಹಾಕಿ ಲಡ್ಡು ತಯಾರಿಸಿ ಅದನ್ನು ಉಡುಗೊರೆ ರೂಪದಲ್ಲಿ ನೀಡ್ತೇನೆಂದು ಬರೆದಿದ್ದಾರೆ ಎಂದಿದ್ದರು. ಕಂಗನಾ ರನೌತ್ ಅಭಿನಯದ ಎಮರ್ಜೆನ್ಸಿ ಸಿನಿಮಾ ಸೆಪ್ಟೆಂಬರ್ 6ರಂದು ತೆರೆಗೆ ಬರಲಿದೆ. ಆದ್ರೆ ಸೆನ್ಸೆರ್ ಬೋರ್ಡ್ ಇದಕ್ಕೆ ಒಪ್ಪಿಗೆ ನೀಡಿಲ್ಲ, ಶೀಘ್ರದಲ್ಲೇ ಪ್ರಮಾಣ ಪತ್ರ ಸಿಗುವ ಸಾಧ್ಯತೆ ಇದೆ ಎಂದು ಕಂಗನಾ ಹೇಳಿದ್ದಾರೆ.