ದಕ್ಷಿಣ ಭಾರತದ ನಟಿ ಅನುಷ್ಕಾ ಶೆಟ್ಟಿ ಅವರು ಮದುವೆ ಮತ್ತು ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ, ಭಯ ಆಧಾರಿತ ಸಂಬಂಧಗಳನ್ನು ತಿರಸ್ಕರಿಸಿದ್ದಾರೆ ಮತ್ತು ಆನುವಂಶಿಕ ಕಾಯಿಲೆಯೊಂದಿಗೆ ತಮ್ಮ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ.
ಬಾಹುಬಲಿ (Baahubali) ಬೆಡಗಿ, ದಕ್ಷಿಣ ಭಾರತದ ಸುಂದರಿ ಅನುಷ್ಕಾ ಶೆಟ್ಟಿ (South Indian beauty Anushka Shetty) ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕಿಲ್ಲ. 42 ವರ್ಷದ ಅನುಷ್ಕಾ ಶೆಟ್ಟಿ, ಬಾಹುಬಲಿ ಪ್ರಭಾಸ್ (Baahubali Prabhas) ಮದುವೆ ಆಗ್ತಾರೆ ಎನ್ನುವ ಮಾತಿತ್ತು. ಆದ್ರೆ ನಾವಿಬ್ಬರು ಸ್ನೇಹಿತರು ಎನ್ನುವ ಮೂಲಕ ಈ ವದಂತಿಗೆ ತೆರೆ ಎಳೆದಿರುವ ಕರಾವಳಿ ಬೆಡಗಿ, ಸಂಬಂಧ ಹೇಗಿರಬೇಕು ಅಂತ ಹೇಳಿದ್ದಾರೆ. ಪೇರೆಂಟ್ಸ್ ಜೊತೆ ಆಗ್ಲಿ, ಗಂಡನ ಜೊತೆ ಆಗ್ಲಿ, ದೇವರ ಜೊತೆಯಾಗ್ಲಿ ಭಯ ಇರ್ಬಾರದು ಎನುತ್ತಾರೆ ಅವರು. ಭಯವಿದ್ದರೆ ಸಂಬಂಧ ಟಾಕ್ಸಿಕ್ ಆಗುತ್ತೆ ಎಂದಿರುವ ಅನುಷ್ಕಾ ಶೆಟ್ಟಿ, ಹೆಂಡ್ತಿಯ ಕೋಪ, ಪ್ರೀತಿ ಎಲ್ಲವನ್ನೂ ಅಕ್ಸೆಪ್ಟ್ ಮಾಡಿದಾಗ, ಅತ್ಯುತ್ತಮ ಫ್ರೆಂಡ್ ರೀತಿ ಸಂಬಂಧ ಇರುತ್ತೆ, ಆಗ್ಲೇ ಬದುಕು ಬಿಂದಾಸ್ ಆಗಿರುತ್ತೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾ (Social Media) ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಶೆಟ್ಟಿಯವರ ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಅವರು ಈ ಜಗತ್ತಿನಲ್ಲಿ ಭಯದ ಮೂಲಕ ಹುಟ್ಟಿಕೊಳ್ಳುವ ಯಾವುದೇ ಸಂಬಂಧವನ್ನು ನಂಬೋದಿಲ್ಲ ಎಂದಿದ್ದಾರೆ. ಅಪ್ಪ – ಅಮ್ಮ ಇರಲಿ, ದೇವರಿರಲಿ, ಪತಿ, ಸ್ನೇಹಿತರಿರಲಿ ಭಯದಿಂದ ಹುಟ್ಟಿಕೊಳ್ಳುವ ರಿಲೇಶನ್ಶಿಪ್ ಗೆ ಅರ್ಥವಿಲ್ಲ ಎನ್ನುತ್ತಾರೆ.
ಮುದ್ದು ರಾಕ್ಷಸಿ ಪೋಸ್ಟರ್ ನೋಡಿ ಶೆಡ್ ಗೆ ಹೋಗಿ ಎಂದ ಫ್ಯಾನ್ಸ್
ಸೂಫಿಸಂ ನಂಬುವ ಅವರು, ದೇವರನ್ನು ಫ್ರೆಂಡ್ಸ್ ರೀತಿ ನೋಡ್ತಾರೆ. ಬೇಸರವಾದಾಗ, ಕೋಪ ಬಂದಾಗ, ನೋವಾದಾಗ ಸ್ನೇಹಿತರನ್ನು ಅಪ್ಪಿಕೊಳ್ಳುವಂತೆ ನಾನು ದೇವರನ್ನು ನಂಬ್ತೇನೆ. ಸ್ನೇಹಿತರಂತೆ ನೋಡ್ತೇನೆ. ಅವರ ಮೇಲೆ ಅಪಾರ ಪ್ರೀತಿ ಇದೆ ಎಂದಿದ್ದಾರೆ. ಮದುವೆ ಬಗ್ಗೆಯೂ ಮಾತನಾಡಿರುವ ಅನುಷ್ಕಾ, ಮದುವೆಯನ್ನು ಅವರು ಸಂಪೂರ್ಣವಾಗಿ ನಂಬುತ್ತಾರೆ. ಮದುವೆಯಾಗಲು ಮತ್ತು ಸರಿಯಾದ ಸಮಯದಲ್ಲಿ ಮಕ್ಕಳನ್ನು ಹೊಂದಲು ಬಯಸುತ್ತೇನೆ. ಆದ್ರೆ ಬಲವಂತದಿಂದ ಮದುವೆಯಾಗಲು ಬಯಸುವುದಿಲ್ಲ ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಅನುಷ್ಕಾ ಶೆಟ್ಟಿ ಈ ವಿಡಿಯೋಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಕರೆಯುವಂತೆ ನೀವು ಸ್ವೀಟಿ ಎಂದಿದ್ದಾರೆ. ಅವರ ಡ್ರೆಸ್, ಅವರ ಮಾತಿನ ಶೈಲಿ, ಅವರ ನಂಬಿಕೆಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಸದ್ಯ ಅನುಷ್ಕಾ ಶೆಟ್ಟಿ ಆನುವಂಶಿಕ ಖಾಯಿಲೆ (Genetic Disease) ವಿಷ್ಯಕ್ಕೆ ಹೆಚ್ಚು ಚರ್ಚೆಯಲ್ಲಿದ್ದಾರೆ. ಇದೇ ಮೊದಲ ಬಾರಿ ಮಲಯಾಳಂ ಚಿತ್ರವೊಂದರಲ್ಲಿ ನಟಿಸುತ್ತಿರುವ ಅನುಷ್ಕಾ ಶರ್ಮಾಗೆ ವಿಚಿತ್ರ ಖಾಯಿಲೆ ಕಾಡ್ತಿದೆ. ಅನುಷ್ಕಾ ಒಮ್ಮೆ ನಗಲು ಶುರು ಮಾಡಿದ್ರೆ ನಿಲ್ಲಿಸೋದು ಕಷ್ಟ. ನಗಲು ಶುರು ಮಾಡಿದ್ರೆ 10 -15 ನಿಮಿಷ ನಗ್ತಾನೆ ಇರುವ ಅವರು, ಅದನ್ನು ಕಂಟ್ರೋಲ್ ಮಾಡಲು ಸಾಕಷ್ಟು ಪ್ರಯತ್ನಪಡಬೇಕಾಗುತ್ತದೆ. ಕೆಲ ಬಾರಿ ಅವರ ನಗುವಿನಿಂದ ಶೂಟಿಂಗ್ ನಿಂತಿದೆ. ಸಂದರ್ಶನವೊಂದಲ್ಲಿ ಈ ವಿಷ್ಯವನ್ನು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಇದನ್ನು ಸ್ಯೂಡೋ ಬುಲ್ಬಾರ್ ಎಫೆಕ್ಟ್ ಅಥವಾ ಬಿಬಿಎ ಎಂದೂ ಕರೆಯುತ್ತಾರೆ. ಇದು ನ್ಯೂರೋಲಾಜಿಕಲ್ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರು ಗಂಟೆಗಟ್ಟಲೆ ಅಳ್ತಾರೆ ಅಥವಾ ನಗ್ತಾರೆ.
Taimur Ali Khan: ಮೀಡಿಯಾಗೆ ಬೈದ ತೈಮೂರ್ ಆಲಿ ಖಾನ್, ಸೈಫ್ ಆಲಿ ಖಾನ್ ಮಗನ ಅಹಂಕಾರಕ್ಕೆ ನೆಟ್ಟಿಗರ ಕ್ಲಾಸ್
ಅನುಷ್ಕಾ ಶೆಟ್ಟಿ ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ದಕ್ಷಿಣ ಭಾರತದ ಪ್ರಸಿದ್ಧ ಹಾಗೂ ಶ್ರೀಮಂತ ನಟಿಯರಲ್ಲಿ ಅನುಷ್ಕಾ ಒಬ್ಬರು. ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ, ಅರುಂಧತಿ ಮೂಲಕ ದೇಶದ ಜನರ ಗಮನ ಸೆಳೆದಿದ್ದರು. ಅದಾದ್ಮೇಲೆ ಅವರ ಬೇಡಿಕೆ ಕಡಿಮೆ ಆಗ್ಲಿಲ್ಲ. ಒಂದಾದ್ಮೇಲೆ ಒಂದು ಹಿಟ್ ಸಿನಿಮಾ ನೀಡಿದ ಅನುಷ್ಕಾ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಮಿಸ್ ಶೆಟ್ಟಿ ಶ್ರೀ ಪೋಲಿಶೆಟ್ಟಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈಗ ಮಲಯಾಳಂ ಚಿತ್ರ ಕಥನಾರ್ ದಿ ವೈಲ್ಡ್ ಮಾಂತ್ರಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮೂಲಕ ಮನೆ ಮಾತಾಗಿರುವ ಅನುಷ್ಕಾ ಶೆಟ್ಟಿ ನಿವ್ವಳ ಆದಾಯ 130 ಕೋಟಿ ದಾಟಿದೆ. ಅವರು ಒಂದು ಸಿನಿಮಾಕ್ಕೆ 2 ಕೋಟಿಗಿಂತ ಹೆಚ್ಚು ಚಾರ್ಜ್ ಮಾಡ್ತಾರೆ.