ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಮಾತಾಡೋ ಭಾಷೆ ಯಾವುದು; ಸೃಷ್ಟಿಕರ್ತ ಯಾರು ಗೊತ್ತಾ?

By Shriram Bhat  |  First Published Aug 30, 2024, 10:06 PM IST

ನಟ ಪ್ರಭಾಸ್ ಅವರು 'ಬಾಹುಬಲಿ' ಸರಣಿ ಸಿನಿಮಾಗಳಿಗೆ ಬರೋಬ್ಬರಿ ಐದು ವರ್ಷಗಳನ್ನು ಮೀಸಲಾಗಿಟ್ಟಿದ್ದರು. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವುದೇ ನಟ ಒಂದು ಸಿನಿಮಾಗೆಂದು ಇಷ್ಟು ಸಮಯ ಮೀಸಲಿಟ್ಟಿರಲಿಲ್ಲ ಎನ್ನಲಾಗಿದೆ. ಒಂದು ಎನ್ನುವ ಬದಲು ಎರಡು ಸಿನಿಮಾ..


ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದಲ್ಲಿ 'ಕಾಲಕೇಯ' ಪಾತ್ರವು ಮಾತನಾಡುವ ಒಂದು ವಿಭಿನ್ನ ಭಾಷೆ ಬಗ್ಗೆ ನಿಮಗೆ ಗೊತ್ತಿರಬಹುದು. ಬಾಹುಬಲಿ ಸಿನಿಮಾ ನೋಡಿದ ಎಲ್ಲರ ಗಮನಕ್ಕೂ ಇದು ಬಂದಿರುತ್ತದೆ. ಆದರೆ, ಈ ಭಾಷೆ ಯಾವುದು ಎಂಬುದು ಬಹುಶಃ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಇದು ಒಂದು ಕಾಲ್ಪನಿಕ ಭಾಷೆ. ಅದಕ್ಕೋಸ್ಕರ ಅಂತಲೇ ರಚನೆ ಮಾಡಲಾಗಿತ್ತು. ಅಂತಹ ಯಾವುದೇ ಭಾಷೆ ಪ್ರಪಂಚದಲ್ಲಿ ಇಲ್ಲ.

ಅದು ಕಾಲಕೇಯ ಸೈನ್ಯಕ್ಕಾಗಿ 'ಕಿಲಿಕಿ' ಎಂಬ ಹೆಸರಿನ ಕಾಲ್ಪನಿಕ ಭಾಷೆಯನ್ನು ಬಳಸಲಾಗಿತ್ತು. ಈ ರೀತಿ ಒಂದು ಚಿತ್ರದ ಸಲುವಾಗಿ ಹೊಸ ಭಾಷೆಯೊಂದನ್ನು ಸೃಷ್ಟಿಸಿದ್ದು ಭಾರತೀಯ ಇತಿಹಾಸದಲ್ಲಿ ಅದೇ ಮೊದಲು ಎನ್ನಲಾಗಿದೆ. ಗೀತರಚನೆಕಾರ ಮದನ್ ಕರ್ಕಿ ಹೀಗೆ ಬಾಹುಬಲಿ ಸಿನಿಮಾಗೆಂದು ಕಾಲ್ಪನಿಕ ಭಾಷೆಯೊಂದನ್ನು ಹುಟ್ಟಿಸಿರುವ ಸೃಷ್ಟಿಕರ್ತ ಎನ್ನಲಾಗಿದೆ. ಈ ಬಾಷೆ ಅರ್ಥವಾಗದಿದ್ದರೂ ಜನರು ಅದನ್ನು ಸಖತ್ ಎಂಜಾಯ್ ಮಾಡಿದ್ದಾರೆ. 

Tap to resize

Latest Videos

ಧ್ಯಾನ್-ರಮ್ಯಾ 'ಅಮೃತಧಾರೆ'ಯಲ್ಲಿ ನಟಿಸಲು ಬಿಗ್ ಅಮಿತಾಭ್ ಬಚ್ಚನ್ ಹಾಕಿದ್ದ ಕಂಡೀಷನ್ ಏನಿತ್ತು?

ಇನ್ನು ನಟ ಪ್ರಭಾಸ್ ಅವರು 'ಬಾಹುಬಲಿ' ಸರಣಿ ಸಿನಿಮಾಗಳಿಗೆ ಬರೋಬ್ಬರಿ ಐದು ವರ್ಷಗಳನ್ನು ಮೀಸಲಾಗಿಟ್ಟಿದ್ದರು. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವುದೇ ನಟ ಒಂದು ಸಿನಿಮಾಗೆಂದು ಇಷ್ಟು ಸಮಯ ಮೀಸಲಿಟ್ಟಿರಲಿಲ್ಲ ಎನ್ನಲಾಗಿದೆ. ಒಂದು ಎನ್ನುವ ಬದಲು ಎರಡು ಸಿನಿಮಾ ಎನ್ನಬಹುದು. ಕಾರಣ. ಬಾಹುಬಲಿ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ತೆರೆ ಕಂಡಿದ್ದು ಎಲ್ಲರಿಗೂ ಗೊತ್ತು. ಪ್ರಭಾಸ್ ಅವರ ಡೆಡಿಕೇಶನ್‌ ಮೆಚ್ಚಿ ಬಹಳಷ್ಟು ಜನರು ಸೆಲ್ಯೂಟ್ ಹೊಡೆದಿದ್ದಾರೆ. 

ಆದರೂ ಕೂಡ ಎರಡು ಸಿನಿಮಾಗೆ ನಿರಂತರ 5 ವರ್ಷ ಮೀಸಲಿಟ್ಟ ದಾಖಲೆ ನಟ ಪ್ರಭಾಸ್ ಹೆಸರಿನಲ್ಲಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ತಂದೆ-ಮಗ ಹೀಗೆ ಎರಡು ಪಾತ್ರಗಳನ್ನೂ ನಟ ಪ್ರಭಾಸ್ ಅವರೇ ಮಾಡಿದ್ದಾರೆ. ಈ ಮೂಲಕ ತಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಆ ಐದು ವರ್ಷಗಳಲ್ಲಿ ನಟ ಪ್ರಭಾಸ್ ಮಾಡಿಕೊಂಡಿದ್ದರು. ಅವರು ತಮ್ಮ ದೇಹವನ್ನು ಫೀಟ್ ಆಗಿ ಹುರಿಗಟ್ಟಿಸಿ ಇಟ್ಟುಕೊಂಡಿದ್ದರು. ಹೀಗಾಗಿ 'ಬಾಹುಬಲಿ' ಚಿತ್ರದಲ್ಲಿ 'ಎಂಟೆದೆ ಬಂಟ' ಎಂಬಂತೆ ಕಾಣಿಸುತ್ತಿದ್ದರು ನಟ ಪ್ರಭಾಸ್!

ನೂರೆಂಟು ವಿಘ್ನಗಳನ್ನು ದಾಟಿ ತೆರೆಗೆ ಬಂದಿತ್ತು ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ'..!

click me!