ಹಿಂದಿ ಈಗ ರಾಷ್ಟ್ರಭಾಷೆಯಾಗಿದೆ, ಸಂಸ್ಕೃತ ಆಗಲಿ; ರಾಷ್ಟ್ರಭಾಷಾ ವಿವಾದದ ಬಗ್ಗೆ ಕಂಗನಾ ಪ್ರತಿಕ್ರಿಯೆ

Published : Apr 30, 2022, 12:16 PM ISTUpdated : Apr 30, 2022, 12:50 PM IST
ಹಿಂದಿ ಈಗ ರಾಷ್ಟ್ರಭಾಷೆಯಾಗಿದೆ, ಸಂಸ್ಕೃತ ಆಗಲಿ; ರಾಷ್ಟ್ರಭಾಷಾ ವಿವಾದದ ಬಗ್ಗೆ ಕಂಗನಾ ಪ್ರತಿಕ್ರಿಯೆ

ಸಾರಾಂಶ

ನಟಿ ಕಂಗನಾ ರಣಾವತ್(Kangana Ranaut) ಇದೀಗ ರಾಷ್ಟ್ರಭಾಷೆ ವಿವಾದದ ಬಗ್ಗೆ ಮಾತನಾಡಿ ಹಿಂದಿ ಈಗ ರಾಷ್ಟ್ರಭಾಷೆಯಾಗಿದೆ. ಆದರೆ ಸಂಸ್ಕೃತ ಆಗಬೇಕೆಂದು ಕಂಗನಾ ಹೇಳಿದ್ದಾರೆ.   

ಅಭಿನಯ ಚಕ್ರವರ್ತಿ ಸುದೀಪ್(Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್( Ajay devgan) ನಡುವಿನ ರಾಷ್ಟ್ರಭಾಷಾ ಕಿಡಿ ದೇಶದಾದ್ಯಂತ ಸದ್ದು ಮಾಡುತ್ತಿದೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ ಅಜಯ್ ದೇವಗನ್ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದರು. ಅಜಯ್ ದೇವಗನ್ ಟ್ವೀಟ್ ಗೆ ಸುದೀಪ್ ಖಡಕ್ ಪ್ರತಿಕ್ರಿಯೆ ನೀಡಿ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವುದನ್ನು ಮನವರಿಕೆ ಮಾಡಿ ಕೊಟ್ಟಿದ್ದರು. ಆದರೆ ಇಬ್ಬರು ಸ್ಟಾರ್ ನಟರ ನಡುವಿನ ರಾಷ್ಟ್ರಭಾಷಾ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು.

ಈ ಬಗ್ಗೆ ಅನೇಕ ಸ್ಟಾರ್ ಕಲಾವಿದರು ಪ್ರತಿಕ್ರಿಯೆ ನೀಡಿ ಸುದೀಪ್ ಪರ ಬ್ಯಾಟ್ ಬೀಸಿದ್ದರು. ಈ ವಿವಾದದ ಬಳಿಕ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎನ್ನುವ ಚರ್ಚೆಗೆ ಕಾರಣವಾಯಿತು. ದಕ್ಷಿಣದ ಭಾರತದ ಅನೇಕರು ಸುದೀಪ್ ಪರ ನಿಂತರು. ಬಳಿಕ ಹಿಂದಿ ಅಭಿಮಾನಿಗಳು ಅಜೆಯ್ ದೇವಗನ್ ಬೆನ್ನಿಗೆ ನಿಂತರು. ಆದರೆ ಈ ಬಗ್ಗೆ ಬಾಲಿವುಡ್‌ ಮಂದಿ ಮೌನಕ್ಕೆ ಜಾರಿದ್ದರು. ಇದೀಗ ಮೊದಲ ಬಾರಿಗೆ ಈ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ವಿಚಾರದ ಬಗ್ಗೆಯಾದರೂ ಮೊದಲು ಪ್ರತಿಕ್ರಿಯೆ ನೀಡುವ ನಟಿ ಕಂಗನಾ ರಣಾವತ್(Kangana Ranaut) ಇದೀಗ ರಾಷ್ಟ್ರಭಾಷೆ ವಿವಾದದ ಬಗ್ಗೆ ಮಾತನಾಡಿ ಹಿಂದಿ ಈಗ ರಾಷ್ಟ್ರಭಾಷೆಯಾಗಿದೆ. ಆದರೆ ಸಂಸ್ಕೃತ ಆಗಬೇಕೆಂದು ಕಂಗನಾ ಹೇಳಿದ್ದಾರೆ. 

ನನ್ನನ್ನು ಕೆಟ್ಟದಾಗಿ ಮುಟ್ಟುತ್ತಿದ್ದ, ಬಟ್ಟೆ ಬಿಚ್ಚುತ್ತಿದ್ದ; ಬಾಲ್ಯದ ಭಯಾನಕ ಅನುಭವ ಹೇಳಿದ ಕಂಗನಾ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, 'ಸಂಸ್ಕೃತ ನಮ್ಮ ರಾಷ್ಟ್ರೀಯ ಭಾಷೆಯಾಗಬೇಕೆಂದು ನಾನು ಹೇಳುತ್ತಾನೆ. ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಎಲ್ಲಾ ಭಾಷೆಗಳು ಸಂಸ್ಕೃತ ದಿಂದ ಹುಟ್ಟಿಕೊಂಡಿವೆ. ಆದರೂ ಸಂಸ್ಕೃತ ಯಾಕೆ ರಾಷ್ಟ್ರಭಾಷೆಯಾಗಿಲ್ಲ?. ಶಾಲೆಗಳಲ್ಲಿ ಯಾಕೆ ಖಡ್ಡಾಯ ಮಾಡಿಲ್ಲ? ಎನ್ನುವುದು ನನಗೆ ಗೊತ್ತಿಲ್ಲ' ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಧಾಖಡ್ ಸಿನಿಮಾ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಕಂಗನಾ ಈ ಮಾತನ್ನು ಹೇಳಿದ್ದಾರೆ. ಇದೇ ವೇಳೆ ಕಂಗನಾ 'ಸಂವಿಧಾನದ ಪ್ರಕಾರ ಸದ್ಯ ಹಿಂದಿ ರಾಷ್ಟ್ರಭಾಷೆಯಾಗಿದೆ' ಎಂದು ಹೇಳುವ ಮೂಲಕ ಹಿಂದಿ ರಾಷ್ಟ್ರಭಾಷೆಯಾಗಿದೆ ಎಂದಿದ್ದಾರೆ.

ಮಹಿಳೆಯರು ತಮ್ಮನ್ನು ಮೀರಿಸುವುದನ್ನು ನೋಡಿದಾಗ ಪುರುಷರು ಮನನೊಂದುಕೊಳ್ಳುತ್ತಾರೆ: ಕಂಗನಾ

ಕಂಗನಾ ರಣಾವತ್ ಸದ್ಯ ಲಾಕ್ ಅಪ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು ಅನೇಕ ವಿವಾದಾತ್ಮಕ ಕಲಾವಿದರು ಈ ಶೋನಲ್ಲಿ ಸ್ಪರ್ಧಿಗಳಾಗಿ ಭಾಗಿಯಾಗಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿಯೂ ಕಂಗನಾ ಬ್ಯುಸಿಯಾಗಿದ್ದಾರೆ. ಧಾಖಡ್, ತೇಜಸ್ ಸಿನಿಮಾಗಳನ್ನು ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ನಟನೆಯ ಜೊತೆಗೆ ನಿರ್ಮಾಣದಲ್ಲೂ ಕಂಗನಾ ತೊಡಗಿಕೊಂಡಿದ್ದಾರೆ. ಟಿಕು ವೆಡ್ಸ್ ಶೇರು ಸಿನಿಮಾ ಮಾಡುತ್ತಿದ್ದಾರೆ. ಕೊನೆಯದಾಗಿ ಕಂಗನಾ ತಲೈವಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ತಮಿಳುನಾಡು ಮಾಜಿ ಸಿಎಂ ಜೆ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾವಾಗಿತ್ತು. ಹಿಂದಿಯಲ್ಲಿ ಕೊನೆಯದಾಗಿ ಪಂಗ ಚಿತ್ರದ ಮೂಲಕ ತೆರೆಮೇಲೆ ಮಿಂಚಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?