Latest Videos

ಪಾನ್ ಮಸಾಲ ಜಾಹೀರಾತು ನಿರಾಕರಿಸಿ ಮಾದರಿಯಾದ ಪ್ಯಾನ್ ಇಂಡಿಯಾ ಸ್ಟಾರ್ ಯಶ್

By Shruiti G KrishnaFirst Published Apr 30, 2022, 10:41 AM IST
Highlights

ಪಾನ್ ಮಸಾಲ ಜಾಹೀರಾತಿನ ದೊಡ್ಡ ಆಫರ್ ರಾಕಿಂಗ್ ಸ್ಟಾರ್ ಯಶ್(Yash) ಅವರಿಗೂ ಬಂದಿತ್ತು ಎನ್ನುವ ಸುದ್ದಿ ಬಹಿರಂಗವಾಗಿದೆ. ಕೋಟಿ ಕೋಟಿ ರೂಪಾಯಿಯ ಅತೀ ದೊಡ್ಡ ಮೊತ್ತದ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಯಶ್ ನಿರಾಕರಿಸಿದ್ದಾರೆ.

ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ಸ್ಟಾರ್ ಕಲಾವಿದರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಜಯ್ ದೇವಗನ್(Ajay Devgan), ಅಕ್ಷಯ್ ಕುಮಾರ್(Akshay kumar) ಮತ್ತು ಶಾರುಖ್ ಖಾನ್(shahrukh khan) ಮೂವರು ಸ್ಟಾರ್ ಕಲಾವಿದರು ಪಾನ್ ಮಸಾಲ( paan masala) ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮೂವರು ಸ್ಟಾರ್ ಕಲಾವಿದರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರಿಂದ ಸಿಕ್ಕಾಪಟ್ಟೆ ವಿರೋದ ವ್ಯಕ್ತವಾದ ಬೆನ್ನಲ್ಲೇ ಅಕ್ಷಯ್ ಕುಮಾರ್ ಜಾಹೀರಾತಿನಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದರು. ಅಭಿಮಾನಿಗಳಲ್ಲಿ ಕ್ಷಮೆ ಕೇಳುವ ಜೊತೆಗೆ ಇನ್ಮುಂದೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಪಾನ್ ಮಸಾಲ ಜಾಹೀರಾತಿನ ದೊಡ್ಡ ಆಫರ್ ರಾಕಿಂಗ್ ಸ್ಟಾರ್ ಯಶ್(Yash) ಅವರಿಗೂ ಬಂದಿತ್ತು ಎನ್ನುವ ಸುದ್ದಿ ಬಹಿರಂಗವಾಗಿದೆ. ಕೆಜಿಎಫ್-2 ಸಿನಿಮಾ ಮೂಲಕ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ಕೋಟಿ ಕೋಟಿ ರೂಪಾಯಿಯ ಅತೀ ದೊಡ್ಡ ಮೊತ್ತದ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಯಶ್ ನಿರಾಕರಿಸಿದ್ದಾರೆ. ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸಬಾರದು ಎನ್ನುವ ಕಾರಣಕ್ಕೆ ಕೋಟಿ ಕೊಟ್ಟರು ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಯಶ್ ನಿರ್ಧಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಗ್ಗೆ ಟ್ಯಾಲೆಂಟ್ ಆಂಡ್ ನ್ಯೂ ವೆಂಚರ್ ಅಟ್ ಎಕ್ಸೀಡ್ ಎಂಟರ್ಟೈರ್ ಮೆಂಟ್ ಎಂಜನ್ಸಿಯ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಪತ್ರಿಕಾ ಹೇಳಿಕೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಪಾನ್ ಮಸಾಲ ಮತ್ತು ಅಂಥ ಉತ್ಸನ್ನಗಳು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಸೇವನೆ ಜೀವಕ್ಕೆ ಅಪಾಯ ಉಂಟುಮಾಡುತ್ತದೆ. ಅಭಿಮಾನಿಗಳು ಮತ್ತು ಜನರ ದೃಷ್ಟಿಯಿಂದ ವೈಯಕ್ತಿಕ ಲಾಭದಾಯಿಕ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ. ಕೋಟಿ ಕೊಟ್ಟರು ಬೇಡ ಎಂದು ಮರುಯೋಚಿಸದೆ ನಿರಾಕರಿಸಿ ಮಾದರಿಯಾಗಿದ್ದಾರೆ ಯಶ್. ರಾಕಿಂಗ್ ಸ್ಟಾರ್ ಈ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಈ ಕಾರಣಕ್ಕೆ ತಂಬಾಕು ಜಾಹೀರಾತು ರಿಜೆಕ್ಟ್ ಮಾಡಿ ಮಾದರಿಯಾದ ಅಲ್ಲು ಅರ್ಜುನ್

ತಂಬಾಕು ಜಾಹೀರತು ನಿರಾಕರಿಸಿದ್ದ ಅಲ್ಲು ಅರ್ಜುನ್

ಇನ್ನು ಇತ್ತೀಚಿಗಷ್ಟೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಸಹ ಕೋಟಿ ವ್ಯಚ್ಚದ ತಂಬಾಕು ಜಾಹೀರಾತು ತಿರಸ್ಕರಿಸಿದ್ದರು. ಅಲ್ಲು ಅರ್ಜುನ್ ಅವರಿಗೂ ತಂಬಾಕು ಜಾಹೀರಾತು (Tobacco Advertisement) ಕಂಪನಿ ದೊಡ್ಡ ಆಫರ್ ನೀಡಿತ್ತು. ಆದರೆ ಅಲ್ಲು ಅರ್ಜುನ್ ಒಂದು ಕ್ಷಣವೂ ಯೋಚಿಸದೆ ಆ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು. ಕೋಟಿ ಕೋಟಿ ಸಿಗುತ್ತೆ ಎನ್ನುವ ಕಾರಣಕ್ಕೆ ಅಭಿಮಾನಿಗಳನ್ನು ದಾರಿ ತಪ್ಪಿಸಬಾರದು ಎನ್ನುವ ಕಾರಣಕ್ಕೆ ತಂಬಾಕು ಜಾಹಿರಾತು ತಿರಸ್ಕರಿಸಿದ್ದಾರೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮತ್ತು ಈ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಅಲ್ಲು ಅರ್ಜುನ್ ಮುಲಾಜಿಲ್ಲದೆ ಈ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು.

ಸಾಯಿ ಪಲ್ಲವಿ

ಇನ್ನು ಈ ಹಿಂದೆ ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕೂಡ ಕೋಟಿ ಕೋಟಿ ಜಾಹೀರಾತು ಆಫರ್ ರಿಜೆಕ್ಟ್ ಮಾಡಿ ಸುದ್ದಿಯಾಗಿದ್ದರು. ಮುಖ ಕಾಂತಿ ಹೆಚ್ಚಿಸುವ ಫೇರ್ ನೆಸ್ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಸಾಯಿ ಪಲ್ಲವಿ ಹಿಂದೇಟು ಹಾಕಿದ್ದರು. ಇದರಿಂದ ಯಾವುದೇ ಪ್ರಯೋಜನವಿಲ್ಲ ಹಾಗಾಗಿ ಅಭಿಮಾನಿಗಳಿಗೂ ಇದನ್ನು ಮಾಡಿ ಎಂದು ಹೇಳುವುದಿಲ್ಲ ಎನ್ನುವ ಕಾರಣಕ್ಕೆ ಜಾಹೀರಾತು ರಿಜೆಕ್ಟ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದರು.

KGF 2 ವೀಕ್ಷಿಸಿದ ಕಮಲ್ ಹಾಸನ್ ಮತ್ತು ಇಳಯರಾಜ; ಫೋಟೋ ವೈರಲ್

ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಸಕ್ಸಸ್ ನಲ್ಲಿದ್ದಾರೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್-2 ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಲಿಸ್ಟ್ ಸೇರಿದೆ. ವಿಶ್ವದಾದ್ಯಂತ ಕೆಜಿಎಫ್-2 ಈಗಾಗಲೇ 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್‌ನ ಎಲ್ಲಾ ಸ್ಟಾರ್ ಕಲಾವಿದರ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ.

 

click me!