ತಮಿಳುನಾಡು ಸಿಎಂ ಜಯಲಲಿತಾ ಬಯೋಪಿಕ್ ತೆರೆಗೆ ಬರಲು ಸಿದ್ಧ | ಜಯಲಲಿತಾ ಮೊದಲ ಲುಕ್ ರಿವೀಲ್ | ಈ ಪಾತ್ರಕ್ಕಾಗಿ ಕಂಗನಾ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರಂತೆ!
ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ ಬಯೋಪಿಕ್ 'ತಲೈವಿ' ನಲ್ಲಿ ಕಂಗನಾ ರಾಣಾವತ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು ಫಸ್ಟ್ ಲುಕ್ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ.
'ತಲೈವಿ' ಲುಕ್ ರಿವೀಲ್; ಕಂಗನಾ ವಿರುದ್ಧ ನೆಟ್ಟಿಗರು ಆಕ್ರೋಶ!
ಕಂಗನಾ, ಜಯಲಲಿತಾ ಆಗಿ ಕಾಣಿಸಿಕೊಂಡಿರುವುದರ ಬಗ್ಗೆ ಕೆಲವರು ಹೊಗಳಿದರೆ ಇನ್ನು ಕೆಲವರು ನೆಗೆಟಿವ್ ಆಗಿ ಮಾತನಾಡಿದ್ದಾರೆ. ಈ ಪಾತ್ರಕ್ಕಾಗಿ ಕಂಗನಾ ಹೇಗೆಲ್ಲಾ ತಯಾರಿ ನಡೆಸಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.
ರಾಮಮಂದಿರ ನಿರ್ಮಿಸಲಿದ್ದಾರೆ ಕಂಗನಾ ರಾಣಾವತ್
ತಲೈವಿ ಪಾತ್ರಕ್ಕಾಗಿ ಕಂಗನಾ 6 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ. 6 ಕೆಜಿ ಏಕಾಏಕಿ ಹೆಚ್ಚಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಪ್ರತಿದಿನ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಜೊತೆಗೆ ಚೆನ್ನಾಗಿ ಊಟ ಮಾಡುತ್ತಿದ್ದರಂತೆ.
ಈ ಲುಕ್ ಹಿಂದೆ ಮೇಕಪ್ ಆರ್ಟಿಸ್ಟ್ ಜೇಸನ್ ಕಾಲಿನ್ಸ್ ಪಾತ್ರ ಬಹಳ ಇದೆ. ರಾಜಕಾರಣಿ ಪಾತ್ರ ಮಾಡುವಾಗ ಮುಖ ಸ್ವಲ್ಪ ದಪ್ಪಗಿರಬೇಕಿತ್ತು. ಆಗ ಮೇಕಪ್‌ನಲ್ಲಿ ಕೈ ಚಳಕ ತೋರಿಸಿದ್ದಾರೆ. ನನ್ನ ದೇಹದ ಹಲವೆಡೆ ಪ್ಯಾಡ್‌ಗಳನ್ನು ಬಳಸಲಾಗಿದೆ' ಎಂದು ಹೇಳಿದ್ದಾರೆ. 'ತಲೈವಿ' ಚಿತ್ರ ತಮಿಳು, ತೆಲುಗಿನಲ್ಲಿ ಜೂನ್ 2020 ರಂದು ತೆರೆಗೆ ಬರಲಿದೆ.