ಮಗಳಿಂದ 'ಆ' ಮಾತು ಕೇಳಿ ಭಾವುಕರಾದ ಸುಶ್ಮಿತಾ ಸೇನ್!

By Web Desk  |  First Published Nov 25, 2019, 2:09 PM IST

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ದತ್ತು ಪುತ್ರಿ ಬರೆದ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ. 10 ವರ್ಷದ ಹುಡುಗಿ ಬಾಯಿಂದ ಬಂದ ಮಾತೇನು ನೀವೆ ಕೇಳಿ.


'ಮೇ ಹೂ ನಾ' ಚಿತ್ರದಲ್ಲಿ ಮಿಸ್ ಚಾಂದಿನಿಯಾಗಿ ಮಿಂಚಿದ ಸುಶ್ಮಿತಾ ಸೇನ್ ಬಾಲಿವುಡ್‌ ಬಣ್ಣದ ಲೋಕದಲ್ಲಿ ತನ್ನದೇ ಶೈಲಿಯ ಅಭಿನಯದ ಮೂಲಕ ಛಾಪು ಮೂಡಿಸಿದ್ದಾರೆ. ಈ ವೇಳೆ 44 ನೇ ವಸಂತಕ್ಕೆ ಕಾಲಿಟ್ಟ ಸುಶ್ಮಿತಾ ದತ್ತು ಪುತ್ರಿ ಅಲಿಶಾ ಬರೆದ ಪತ್ರ ನೋಡಿ ಭಾವುಕರಾಗಿದ್ದಾರೆ.

‘ಮಿಸ್ ಯೂನಿವರ್ಸ್‌’ಗೆ 25 ನೇ ವರ್ಷದ ಸಂಭ್ರಮ

Tap to resize

Latest Videos

undefined

ಅಲಿಶಾ ಸುಶ್ಮಿತಾ ಸೇನ್ ಕ್ಲಾಸಿನಲ್ಲಿ ಅನಾಥ ಮಕ್ಕಳ ಬಗ್ಗೆ 2-3 ಪೇಜ್‌ ಪ್ರಬಂಧವನ್ನು ಬರೆದಿರುತ್ತಾರೆ. ಈ ವೇಳೆ ಶಾಲೆಗೆ ಭೇಟಿ ಕೊಟ್ಟ ಸುಶ್ಮಿತಾ ಮಗಳಿಗೆ ಅದನ್ನು ಓದುವಂತೆ ಹೇಳಿದಾಗ ಆಕೆ ಬರೆದಿರುವ ಸಾಲುಗಳನ್ನು ಕೇಳಿ ಭಾವುಕರಾಗುತ್ತಾರೆ. 'ಅಮ್ಮ ನಮ್ಮನ್ನು ದತ್ತು ಪಡೆಯುವ ಮೂಲಕ ನೀನು ಎರಡು ಮಕ್ಕಳಿಗೆ ಜನ್ಮ ನೀಡಿರುವೆ' ಎಂಬ ಸಾಲು ಕೇಳಿ ಸುಶ್ಮಿತಾ ಕಣ್ಣೀರಿಟ್ಟಿದ್ದಾರೆ.

ಈ ವಿಡಿಯೋವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.

 

click me!